Friday, April 26, 2024
Homeಕರಾವಳಿವಿದ್ಯುತ್ ದರ ಏರಿಕೆಗೆ ಪ್ರಸ್ತಾವ ಸಲ್ಲಿಸಿದ ಮೆಸ್ಕಾಂ!.. ಮಂಗಳೂರಿಗರಿಗೆ ಹೊರೆಯಾಗುತ್ತಾ ನೂತನ ದರ?

ವಿದ್ಯುತ್ ದರ ಏರಿಕೆಗೆ ಪ್ರಸ್ತಾವ ಸಲ್ಲಿಸಿದ ಮೆಸ್ಕಾಂ!.. ಮಂಗಳೂರಿಗರಿಗೆ ಹೊರೆಯಾಗುತ್ತಾ ನೂತನ ದರ?

spot_img
- Advertisement -
- Advertisement -

ಮಂಗಳೂರು: ಮಂಗಳೂರು ವಿದ್ಯುತ್ಚಕ್ತಿ ಸರಬರಾಜು ಕಂಪನಿಯು ಕರ್ನಾಟಕ ವಿದ್ಯುತ್ಚಕ್ತಿ ನಿಯಂತ್ರಣ ಆಯೋಗಕ್ಕೆ ಪ್ರಸ್ತಾವವೊಂದನ್ನು ಸಲ್ಲಿಸಿದೆ. ಅದರಂತೆ 2021-22 ನೇ ಸಾಲಿನಲ್ಲಿ ಪ್ರತಿ ಯೂನಿಟ್ ಗೆ ಸರಾಸರಿ 1.67 ರೂ. ವಿದ್ಯುತ್ ದರ ಏರಿಕೆ ಮಾಡುವಂತೆ ಕೋರಿದೆ.

ಈ ಹಿಂದಿನ ಪ್ರಸ್ತಾವದಲ್ಲಿ ಮೆಸ್ಕಾಂ ಸರಾಸರಿ 62 ಪೈಸೆ ವಿದ್ಯುತ್ ದರ ಏರಿಸುವಂತೆ ಆಯೋಗಕ್ಕೆ ಕೋರಿತ್ತು. ಅನಂತರ ಆಯೋಗವು ಸರಾಸರಿ 40 ಪೈಸೆ ದರ ಹೆಚ್ಚಳ ಮಾಡಿ ಆದೇಶ ಹೊರಡಿಸಿತ್ತು.ಮೆಸ್ಕಾಂ ಮಂಗಳೂರು ನಗರ ಮತ್ತು ಗ್ರಾಮಾಂತರ ಪ್ರದೇಶಗಳಲ್ಲಿ ಎಲ್ಲ ವರ್ಗಗಳ ವಿದ್ಯುತ್ ಬಳಕೆದಾರರನ್ನು ಗಮನದಲ್ಲಿ ಇಟ್ಟುಕೊಂಡು ವಿದ್ಯುತ್ ದರ ಏರಿಕೆಗೆ ಪ್ರಸ್ತಾವ ಸಲ್ಲಿಸಿದೆ ಎನ್ನಲಾಗಿದೆ.

- Advertisement -
spot_img

Latest News

error: Content is protected !!