Saturday, June 6, 2026
Homeಕರಾವಳಿಬೆಳ್ತಂಗಡಿ: ತಾಲೂಕು ಅಡಿಕೆ ವರ್ತಕರ ಸಂಘದ ಪದಾಧಿಕಾರಿಗಳ ಆಯ್ಕೆ

ಬೆಳ್ತಂಗಡಿ: ತಾಲೂಕು ಅಡಿಕೆ ವರ್ತಕರ ಸಂಘದ ಪದಾಧಿಕಾರಿಗಳ ಆಯ್ಕೆ

- Advertisement -
- Advertisement -

ಬೆಳ್ತಂಗಡಿ: ಇಲ್ಲಿನ ತಾಲೂಕು ಅಡಿಕೆ ವರ್ತಕರ ಸಂಘದ ಪದಾಧಿಕಾರಿ ಗಳ ನೇಮಕ ಸಭೆ ದಿನಾಂಕ 3-1-2021 ಆದಿತ್ಯವಾರ ಗುರುವಾಯಕೆರೆ ಬಂಟರ ಬವನ ದಲ್ಲಿ ನಡೆಯಿತು. ಸಭೆಯಲ್ಲಿ ತಾಲೂಕಿನಾದ್ಯಂತ 70 ಕ್ಕು ಅಧಿಕ ವರ್ತಕರು ಈ ಸಭೆಯಲ್ಲಿ ಭಾಗವಹಿಸಿದರು. ತಾಲೂಕು ಅಡಿಕೆ ವರ್ತಕರ ಸಂಘದ ಅಧ್ಯಕ್ಷ ರಾಗಿ ಬಾಲಕೃಷ್ಣ ಶೆಟ್ಟಿ ಸವನಾಲು,ಉಪಾಧ್ಯಕ್ಷ ರಾಗಿ ಪ್ರಶಾಂತ್ ಶೆಟ್ಟಿ , ಪುರೋಷತ್ತಮ್ ,ಹಮೀದ್ , ಜಮಾಲ್ ಅವಿರೋಧವಾಗಿ ಆಯ್ಕೆಯಾಗಿದ್ದಾರೆ.ಪ್ರದಾನ ಕಾರ್ಯದರ್ಶಿ ಯಾಗಿ ಶಂಶುದ್ದಿನ್ ಗೇರುಕಟ್ಟೆ, ಕಾರ್ಯದರ್ಶಿ ಯಾಗಿ ಜಗದೀಶ್ ಮತ್ತು ಸತೀಶ್ ರೈ ,ಕೋಶಾಧಿಕಾರಿ ಯಾಗಿ ಹೇಮಶಂಕರ್ ಶೆಟ್ಟಿ ಮಾದ್ಯಮ ಮತ್ತು ಪ್ರಚಾರ ಪ್ರಮುಖರಾಗಿ ಸುದೀಪ್ ಶೆಟ್ಟಿ ಆಯ್ಕೆಯಾಗಿದ್ದಾರೆ.

ಅದರಂತೆ ಗೌರವ ಸಲಹೆಗಾರರಾಗಿ ಪದ್ಮರಾಜ್ ಜೈನ್ , ಬಿ ಹೈದರ್ ಮತ್ತು ಪುಷ್ಪರಾಜ್ ಜೈನ್ ನೇಮಕಗೊಂಡರು .ಹಲವಾರು ರೈತ ಸ್ನೇಹಿ ಕಾರ್ಯಕ್ರಮಗಳನ್ನು ಒಳಗೊಂಡಂತೆ ವರ್ತಕರ ಹಿತಾಸಕ್ತಿ ಕಾಪಾಡಲು ಮುಂಬರುವ ದಿನಗಳಲ್ಲಿ ರೂಪರೇಷಗಳನ್ನು ರಚಿಸಲುಗುವುದೆಂದು ಹಾಗೂ ಸರ್ಕಾರ ಮತ್ತು ವಿವಿಧ ಇಲಾಖೆಗಳಿಂದ ವರ್ತಕರ ಶೋಷಣೆ ತಪ್ಪಿಸಲಾಗುವುದೆಂದು ನೂತನ ಅದ್ಯಕ್ಷ ಬಾಲಕೃಷ್ಣ ಶೆಟ್ಟಿ ತಮ್ಮ ಪ್ರಾಸ್ತಾವಿಕ ಭಾಷಣದಲ್ಲಿ ಹೇಳಿದರು.

- Advertisement -

Latest News

error: Content is protected !!