Friday, May 10, 2024
Homeಕರಾವಳಿಉಡುಪಿಪರ್ಕಳ : ದೇವಾಲಯದ ಹಿಂಬದಿ ಸುರಂಗ ಕಂಡುಬಂದ ಸ್ಥಳಕ್ಕೆ ಸಂಶೋಧಕರು ಭೇಟಿ

ಪರ್ಕಳ : ದೇವಾಲಯದ ಹಿಂಬದಿ ಸುರಂಗ ಕಂಡುಬಂದ ಸ್ಥಳಕ್ಕೆ ಸಂಶೋಧಕರು ಭೇಟಿ

spot_img
- Advertisement -
- Advertisement -

ಪರ್ಕಳ: ಮಣಿಪಾಲ ಸಮೀಪದ ಕೆಳಪರ್ಕಳದ ಶ್ರೀ ಗೋಪಾಲಕೃಷ್ಣ ದೇವಸ್ಥಾನದ ಹಿಂಬದಿಯ ಗುಡ್ಡ ಪ್ರದೇಶದಲ್ಲಿ ಕಂಡುಬಂದ ಸುರಂಗ ಪ್ರದೇಶಕ್ಕೆ ಸಂಶೋಧಕರು ಭೇಟಿ ನೀಡಿದ್ದಾರೆ. ಶಿರ್ವದ ಮುಲ್ಕಿ ಸುಂದರ್ ರಾಮ್ ಶೆಟ್ಟಿ ಕಾಲೇಜಿನ ಪ್ರಾಚ್ಯ ಮತ್ತು ಪುರಾತತ್ವ ಸಂಶೋಧಕರಾದ ಪ್ರೊ ಟಿ. ಮುರುಗೇಶ್ ಸ್ಥಳಕ್ಕೆ ಭೇಟಿ ನೀಡಿ ಸಂಶೋಧನಾರ್ಥಿಯನ್ನು ಸುರಂಗದೊಳಗೆ ಕಳುಹಿಸಿ, ಪರಿಶೀಲಿಸಿದರು.

ಸುರಂಗದೊಳಗೆ ಹೊಕ್ಕಿ ವೀಕ್ಷಣೆ ಮಾಡಿದಾಗ, ಒಳಗಡೆ ಮಣ್ಣು ಜರಿದಿರುವುದು ಕಂಡುಬಂದಿದೆ,ಮಣ್ಣನ್ನು ಮೇಲಕ್ಕೆತ್ತುವ ಎಲ್ಲ ಪ್ರಕ್ರಿಯೆಗಳು ನಡೆಯಬೇಕಾಗಿದೆ. ನಂತರ ಈ ಸುರಂಗದ ಬಗ್ಗೆ ಇನ್ನಷ್ಟು ಮಾಹಿತಿ ಪಡೆಯಬಹುದು ಎಂದವರು ತಿಳಿಸಿದ್ದಾರೆ.ಈಗಾಗಲೇ ಒಳಗೆ ಇನ್ನಷ್ಟು ವಿಶಾಲವಾದ ಪ್ರದೇಶ ಇದೆ ಎಂದು ತಿಳಿದುಬಂದಿದೆ. ಮುಂದಿನ ದಿನಗಳಲ್ಲಿ ಹೆಚ್ಚಿನ ವಿದ್ಯಾರ್ಥಿಗಳನ್ನು ಈ ಕಾರ್ಯದಲ್ಲಿ ಅಧ್ಯಯನಕ್ಕಾಗಿ ತೊಡಗಿಸಿಕೊಳ್ಳುವುದಾಗಿ ಟಿ. ಮುರುಗೇಶಿ ತಿಳಿಸಿದ್ದಾರೆ. ಈ ಸಂದರ್ಭದಲ್ಲಿ ಸಂಶೋಧನಾರ್ಥಿ ಭಟ್ , ಸ್ಥಳೀಯರಾದ ತಿಮ್ಮಪ್ಪ ಶೆಟ್ಟಿ ಕುಕ್ಕುದಕಟ್ಟೆ, ಗಣೇಶ್ ರಾಜ್ ಸರಳೇಬೆಟ್ಟು, ವಿನೋದ್ ಭಟ್, ಮಹೇಶ್ ಕುಲಾಲ್ ಅವರ ಜೊತೆಗಿದ್ದರು.

- Advertisement -
spot_img

Latest News

error: Content is protected !!