Sunday, May 5, 2024
Homeತಾಜಾ ಸುದ್ದಿಕೈಕಂಬ: 5 ಕೋಟಿ ವೆಚ್ಚದ ಪೊಳಲಿ ದ್ವಾರ-ಅಡ್ಡೂರು ರಸ್ತೆ ಅಗಲೀಕರಣಕ್ಕೆ ಚಾಲನೆ

ಕೈಕಂಬ: 5 ಕೋಟಿ ವೆಚ್ಚದ ಪೊಳಲಿ ದ್ವಾರ-ಅಡ್ಡೂರು ರಸ್ತೆ ಅಗಲೀಕರಣಕ್ಕೆ ಚಾಲನೆ

spot_img
- Advertisement -
- Advertisement -

ಕೈಕಂಬ: ಸುರತ್ಕಲ್-ಕಬಕ ರಾಜ್ಯ ಹೆದ್ದಾರಿಯ ಗುರುಪುರ ಕೈಕಂಬ ಪೊಳಲಿ ದ್ವಾರದಿಂದ ಅಡ್ಡೂರು ಸೇತುವೆವರೆಗೆ ಸುಮಾರು 5 ಕೋಟಿ ರೂಪಾಯಿ ವೆಚ್ಚದಲ್ಲಿ ನಡೆಯಲಿರುವ ಅಭಿವೃದ್ಧಿ ಹಾಗೂ ಅಗಲೀಕರಣ ಕಾಮಗಾರಿಗೆ ಮಂಗಳೂರು ನಗರ ಉತ್ತರ ಕ್ಷೇತ್ರದ ಶಾಸಕರಾದ ಡಾ. ಭರತ್ ಶೆಟ್ಟಿ ಶಿಲಾನ್ಯಾಸ ನೆರವೇರಿಸಿದರು

ಈ ಸಂದರ್ಭದಲ್ಲಿ ಮಾಧ್ಯಮದೊಂದಿಗೆ ಶಾಸಕರಾದ ಡಾ. ಭರತ್ ಶೆಟ್ಟಿಯವರು ಮಾತನಾಡಿ, ಐದೂವರೆ ಮೀಟರ್ ಅಗಲವಿರುವ ರಾಜ್ಯ ಹೆದ್ದಾರಿಯು 7 ಮೀಟರ್‌ಗೆ ಅಗಲೀಕರಣಗೊಳ್ಳಲಿದೆ. ಒಟ್ಟು ಕಾಮಗಾರಿಯಲ್ಲಿ ರಾಷ್ಟ್ರೀಯ ಹೆದ್ದಾರಿಯ ಒಂದು ಕಿಮೀ ರಸ್ತೆ ಹೊರತುಪಡಿಸಿ ಉಳಿದ ಎರಡೂವರೆ ಕಿಮೀ ರಾಜ್ಯ ಹೆದ್ದಾರಿಯಲ್ಲಿ (ಅಡ್ಡೂರು ಪೊಳಲಿ ಸೇತುವೆವರೆಗೆ) ಅಭಿವೃದ್ಧಿ ಕಾಮಗಾರಿ ನಡೆಯಲಿದೆ. ಅಭಿವೃದ್ಧಿ ಕಾಮಗಾರಿಗೆ ತಡೆಯಾಗಿರುವ ಎಲ್ಲ ಅನಧಿಕೃತ ಕಟ್ಟಡಗಳ ತೆರವಿಗೆ ಪಿಡಬ್ಲ್ಯೂಡಿ ಕ್ರಮ ಕೈಗೊಳ್ಳಲಿದೆ ಎಂದರು.

ಪ್ರಸಕ್ತ ಅಭಿವೃದ್ಧಿಗೊಳ್ಳಲಿರುವ ರಾಜ್ಯ ಹೆದ್ದಾರಿಯ ಒಂದು ಭಾಗದ ಸುಮಾರು ಒಂದು ಕಿಮೀ ಅಂತರದಲ್ಲಿ ಹಾದು ಹೋಗಲಿರುವ ರಾಷ್ಟ್ರೀಯ ಹೆದ್ದಾರಿ ಹೊರತುಪಡಿಸಿ, ಪೊಳಲಿ ಮತ್ತು ಕೈಕಂಬದತ್ತ ಸಂಪರ್ಕ ಕಲ್ಪಿಸುವ ರಾಜ್ಯ ಹೆದ್ದಾರಿ ಅಗಲೀಕರಣಗೊಳ್ಳಲಿದೆ.

ಈ ಕಾಮಗಾರಿ ಒಟ್ಟು 11 ತಿಂಗಳಲ್ಲಿ ಪೂರ್ಣಗೊಳ್ಳಲಿದೆ. ಕಾರ್ಯಕ್ರಮದಲ್ಲಿ ಗುರುಪುರ ಪಂಚಾಯತ್ ಸದಸ್ಯರಾದ ರಾಜೇಶ್ ಸುವರ್ಣ, ಜಿ. ಎಂ ಉದಯ ಭಟ್, ಸುನಿಲ್ ಜಲ್ಲಿಗುಡ್ಡೆ, ಸಚಿನ್ ಅಡಪ, ಹರೀಶ್ ಬಳ್ಳಿ, ಶಶಿಕಲಾ, ಛಾಯಾ, ಮುಖಂಡರಾದ ಸೋಹನ್ ಅತಿಕಾರಿ, ಚಂದ್ರಹಾಸ ಶೆಟ್ಟಿ ನಾರಳ, ಶ್ರೀಕರ ಶೆಟ್ಟಿ, ಸಂದೀಪ್, ಜಿ. ಕೆ ಸಂದೇಶ್, ಸೇಸಮ್ಮ, ಗಂಜಿಮಠ ಪಂಚಾಯತ್ ಅಧ್ಯಕ್ಷ ನೋಣಯ್ಯ ಕೋಟ್ಯಾನ್, ಕಂದಾವರ ಪಂಚಾಯತ್ ಅಧ್ಯಕ್ಷ ಉಮೇಶ್ ಮೂಲ್ಯ ಪಕ್ಷ ಪ್ರಮುಖರು, ಕಾರ್ಯಕರ್ತರು ಹಾಗೂ ಸ್ಥಳೀಯರು ಇದ್ದರು.

- Advertisement -
spot_img

Latest News

error: Content is protected !!