Wednesday, June 24, 2026
Homeಕರಾವಳಿಪುತ್ತೂರು: ಯುವಕ ಅನುಮಾನಾಸ್ಪದ ಸಾವು; ಪೊಲೀಸರಿಂದ ಸುಮೋಟೋ ಪ್ರಕರಣ ದಾಖಲು, ತಾಯಿ ಸೇರಿ ಮೂವರು ವಶಕ್ಕೆ

ಪುತ್ತೂರು: ಯುವಕ ಅನುಮಾನಾಸ್ಪದ ಸಾವು; ಪೊಲೀಸರಿಂದ ಸುಮೋಟೋ ಪ್ರಕರಣ ದಾಖಲು, ತಾಯಿ ಸೇರಿ ಮೂವರು ವಶಕ್ಕೆ

- Advertisement -
- Advertisement -

ಪುತ್ತೂರು: ಯುವಕನೊಬ್ಬ ಅನುಮಾನಾಸ್ಪದವಾಗಿ ಸಾವನ್ನಪ್ಪಿದ್ದು, ಪೊಲೀಸರು ಸುಮೋಟೋ ಪ್ರಕರಣ ದಾಖಲಿಸಿಕೊಂಡಿರುವ ಘಟನೆ ಪುತ್ತೂರಿನಲ್ಲಿ ನಡೆದಿದೆ.

ಬೆಟ್ಟಂಪ್ಪಾಡಿ ಸಮೀಪದ ಪಾರೆ ಎಂಬಲ್ಲಿ ಚೇತನ್ (33) ಎಂಬ ಯುವಕ ಸಾವನ್ನಪ್ಪಿದ್ದು,
ನೇಣು ಬಿಗಿದುಕೊಂಡು ಸಾವನ್ನಪ್ಪಿರುವ ಬಗ್ಗೆ ಮೃತ ಚೇತನ್ ತಾಯಿ ಪೋಲೀಸರಿಗೆ ದೂರು ನೀಡಿದ್ದರು. ಆದರೆ
ಮೃತದೇಹ ನೋಡಿ ಅನುಮಾನಗೊಂಡ ಪೋಲೀಸರು ಸುಮೋಟೋ ಪ್ರಕರಣ ದಾಖಲು ಮಾಡಿಕೊಂಡಿದ್ದಾರೆ.

ನಿನ್ನೆ ರಾತ್ರಿ ಮದ್ಯ ಸೇವಿಸಿ ಮನೆಗೆ ಬಂದಿದ್ದ ಚೇತನ್ ತಾಯಿ ಜೊತೆ ಜಗಳ ಮಾಡಿಕೊಂಡು ಪಕ್ಕದ ಮನೆಯ ಯೂಸುಫ್ ಎಂಬವರ ಮನೆ ಬಾಗಿಲು ತಟ್ಟಿದ್ದು, ಆಗ ಪಕ್ಕದ ಮನೆಯವರು ಚೇತನ್ ತಾಯಿಗೆ ದೂರವಾಣಿ ಕರೆ ಮಾಡಿ ಮಾಹಿತಿ ನೀಡಿದ್ದರು ಎನ್ನಲಾಗಿದೆ.

ನಂತರ ಯುಸೂಫ್ ಮನೆಗೆ ಬಂದಿದ್ದ ಚೇತನ್ ತಾಯಿ ಸಂಕೋಲೆ ಬಳಸಿ ಯೂಸುಫ್ ಸೇರಿದಂತೆ ಸ್ಥಳೀಯರ ಜೊತೆ ಚೇತನ್ ನನ್ನು ತಮ್ಮ ಮನೆಗೆ ಎಳೆದೊಯ್ದಿದ್ದರು ಎಂದು ಹೇಳಲಾಗಿದೆ.

ಸಂಕೋಲೆ ಕಟ್ಟಿ ಎಳೆದೊಯ್ಯುವ ಸಂದರ್ಭದಲ್ಲಿ ಚೇತನ್ ಕುತ್ತಿಗೆಗೆ ಸಂಕೋಲೆ ಬಿಗಿದು ಸಾವನ್ನಪ್ಪಿರುವುದಾಗಿ ಹೇಳಲಾಗಿದ್ದು, ಘಟನೆಗೆ ಸಂಬಂಧಿಸಿದಂತೆ ಮೃತ ಚೇತನ್ ತಾಯಿ ಉಮಾವತಿ ಸೇರಿದಂತೆ ಮೂವರನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ.

ಘಟನೆಯ ಹಿನ್ನೆಲೆಯಲ್ಲಿ ಮರಣೋತ್ತರ ಪರೀಕ್ಷೆಗಾಗಿ ಚೇತನ್ ಮೃತದೇಹವನ್ನು ಮಂಗಳೂರಿಗೆ ತೆಗೆದುಕೊಂಡು ಹೋಗಲಾಗಿದ್ದು,
ಪುತ್ತೂರು ಗ್ರಾಮಾಂತರ ಪೋಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

- Advertisement -

Latest News

error: Content is protected !!