Sunday, June 7, 2026
HomeUncategorizedಬೆಳ್ತಂಗಡಿ; ಪತಿಯ ಎದುರೇ ಪತ್ನಿಯ ಮಾನಭಂಗಕ್ಕೆ ಯತ್ನಿಸಿ, ಗಂಡನಿಗೆ ಹಲ್ಲೆ ನಡೆಸಿದ ಕಾಮುಕ

ಬೆಳ್ತಂಗಡಿ; ಪತಿಯ ಎದುರೇ ಪತ್ನಿಯ ಮಾನಭಂಗಕ್ಕೆ ಯತ್ನಿಸಿ, ಗಂಡನಿಗೆ ಹಲ್ಲೆ ನಡೆಸಿದ ಕಾಮುಕ

- Advertisement -
- Advertisement -

ಬೆಳ್ತಂಗಡಿ; ಗಂಡನ ಸಮ್ಮುಖದಲ್ಲೇ ಮಹಿಳೆಯ ಮಾನಭಂಗಕ್ಕೆ ಯತ್ನಿಸಿದ ಪಾಪಿಯೊಬ್ಬ ಬಳಿಕ ಆಕೆಯ ಗಂಡನಿಗೆ ದೊಣ್ಣೆಯಿಂದ ಹಲ್ಲೆ ನಡೆಸಿ ಗಾಯಗೊಳಿಸಿದ ಘಟನೆ ಬೆಳ್ತಂಗಡಿ ತಾಲೂಕು ಬಾರ್ಯ ಗ್ರಾಮದ ಮುಡಿಜಾಲು ಎಂಬಲ್ಲಿ ನಡೆದಿದೆ.

ಪ್ರಕರಣಕ್ಕೆ ಸಂಬಂಧಿಸಿ ಅಬೂಬಕ್ಕರ್ ಅವರ ಪತ್ನಿ ದೂರು ನೀಡಿದ್ದು, ಕಳೆದ ಸೋಮವಾರದಂದು ಮಧ್ಯಾಹ್ನ 3 ಗಂಟೆ ಸುಮಾರಿಗೆ ಮನೆಗೆ ಅಕ್ರಮ ಪ್ರವೇಶ ಮಾಡಿದ  ಸಾಹದ್ ಎಂಬಾತ ಮಾನಭಂಗಕ್ಕೆ ಯತ್ನಿಸಿದಾಗ ತನ್ನ ಗಂಡ ಅಬೂಬಕ್ಕರ್ ಎಂಬವರು ತಡೆದಿದ್ದಾರೆ. ಇದರಿಂದ ಕೋಪಗೊಂಡ ಆತ ಹೊರಗೆ ಹೋಗಿ ಅಲ್ಲೇ ಇದ್ದ ದೊಣ್ಣೆಯೊಂದಿಗೆ  ಬಂದು ಪತಿಗೆ ಜೀವ ಬೆದರಿಕೆಯೊಡ್ಡಿ   ತಲೆಗೆ ಮುಖಕ್ಕೆ ಸೊಂಟಕ್ಕೆ ಹೊಡೆದಿದ್ದಾನೆ .ಹೀಗಾಗಿ  ಅವರವರನ್ನು ಇದೀಗ ಮಂಗಳೂರು ಆಸ್ಪತ್ರೆಗೆ ದಾಖಲಿಸಲಾಗಿದೆ.

ಗಂಡನ ಚಿಕಿತ್ಸೆಯ ಕಾರಣಕ್ಕೆ ಆಸ್ಪತ್ರೆಗಳಿಗೆ ಅಲೆದಾಟ ನಡೆಸುವ ಅನಿವಾರ್ಯತೆಯ ಕಾರಣಕ್ಕೆ ದೂರು ನೀಡಲು ವಿಳಂಬವಾಗಿದೆ  ಎಂದು ಪೊಲೀಸರಿಗೆ ಸಲ್ಲಿಸಿದ ದೂರಿನಲ್ಲಿ ತಿಳಿಸಲಾಗಿದೆ. ಉಪ್ಪಿನಂಗಡಿ ಪೊಲೀಸರು ಪ್ರಕರಣವನ್ನು ದಾಖಲಿಸಿ ತನಿಖೆ ನಡೆಸುತ್ತಿದ್ದಾರೆ.

- Advertisement -

Latest News

error: Content is protected !!