Sunday, June 7, 2026
Homeಕರಾವಳಿಬೆಳ್ತಂಗಡಿ : ಮಡಂತ್ಯಾರ್ ಬೈಕ್ ಅಪಘಾತ ಕಾಲೇಜು ವಿದ್ಯಾರ್ಥಿ ಸಾವು

ಬೆಳ್ತಂಗಡಿ : ಮಡಂತ್ಯಾರ್ ಬೈಕ್ ಅಪಘಾತ ಕಾಲೇಜು ವಿದ್ಯಾರ್ಥಿ ಸಾವು

- Advertisement -
- Advertisement -

ಬೆಳ್ತಂಗಡಿ:  ಕಾಲೇಜು ವಿದ್ಯಾರ್ಥಿಯೊಬ್ಬ ಅಪಘಾತದಲ್ಲಿ ಸಾವನ್ನಪ್ಪಿರುವ ಘಟನೆ ಮಡಂತ್ಯಾರಿನಲ್ಲಿ ನಡೆದಿದೆ.

ಮಡಂತ್ಯಾರು ಸೆಕ್ರೆಡ್ ಹಾರ್ಟ್ ಕಾಲೇಜಿನ ದ್ವಿತೀಯ ಬಿ.ಕಾಂ ವಿದ್ಯಾರ್ಥಿ ಕೊಡ್ಲಕ್ಕಿ ನಿವಾಸಿ ಹರೀಶ್ಚಂದ್ರ ಎಂಬವರ ಪುತ್ರ ಹರ್ಷಿತ್(20) ಸಂಜೆ ಕಾಲೇಜು ಮುಗಿಸಿ ದ್ವಿಚಕ್ರ ವಾಹನದಲ್ಲಿ ಮನೆಗೆ ತೆರಳುತ್ತಿರುವ ಸಂದರ್ಭ ಬಳ್ಳಮಂಜ ರಸ್ತೆಯ ಬಂಗೇರಕಟ್ಟೆ ಎಂಬಲ್ಲಿ ಆಟೋ ರಿಕ್ಷಾಕ್ಕೆ ಡಿಕ್ಕಿಯಾಗಿದ್ದು ಈ ವೇಳೆ ಲಾರಿ ಅಡಿಗೆ ಬಿದ್ದು ಗಂಭೀರ ಗಾಯಗೊಂಡಿದ್ದು  ಆಸ್ಪತ್ರೆಯಲ್ಲಿ ಚಿಕಿತ್ಸೆ  ಫಲಿಸದೆ ವಿದ್ಯಾರ್ಥಿ ಸಾವನ್ನಪ್ಪಿದ್ದಾನೆ.

ತಕ್ಷಣ  ಅವರನ್ನು ಸ್ಥಳೀಯ ಮಂಗಳೂರು ಆಸ್ಪತ್ರೆಗೆ ಕರೆದುಕೊಂಡು ಹೋಗಿ ಹೆಚ್ಚಿನ ಚಿಕಿತ್ಸೆಗೆ ದಾಖಲಿಸಿದ್ದರು ಚಿಕಿತ್ಸೆ ಫಲಿಸದೆ ಸಾವನ್ನಪ್ಪಿದ್ದಾನೆ.ಅಪಘಾತ ಪ್ರಕರಣ ಸಂಬಂಧ ಪುಂಜಾಲಕಟ್ಟೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಎರಡು ದಿನದಲ್ಲಿ ಒಂದೆ ಕಾಲೇಜಿನ ಇಬ್ಬರು  ವಿದ್ಯಾರ್ಥಿಗಳಿಗೆ  ಅಪಘಾತವಾಗಿ ಸಾವನ್ನಪ್ಪಿರುವ ವಿಚಾರ ಎಲ್ಲರನ್ನೂ ಚಿಂತೆಗೊಳಪಡಿಸಿದೆ. ಮಕ್ಕಳಿಗೆ ವಾಹನ ನೀಡುವಾಗ ಪೋಷಕರು ಎಚ್ಚರ ವಹಿಸಬೇಕು ಎಂಬುವುದೇ ಎಲ್ಲರ ಆಗ್ರಹವಾಗಿದೆ.

- Advertisement -

Latest News

error: Content is protected !!