Thursday, May 2, 2024
Homeಇತರಬೆಂಗಳೂರಿನಲ್ಲಿ ಬೇಕಾಬಿಟ್ಟಿ ಓಡಾಟ ನಡೆಸಿದ್ರೆ ವೆಹಿಕಲ್ ಸೀಝ್, ಬೀಳುತ್ತೆ ಕೇಸ್

ಬೆಂಗಳೂರಿನಲ್ಲಿ ಬೇಕಾಬಿಟ್ಟಿ ಓಡಾಟ ನಡೆಸಿದ್ರೆ ವೆಹಿಕಲ್ ಸೀಝ್, ಬೀಳುತ್ತೆ ಕೇಸ್

spot_img
- Advertisement -
- Advertisement -

ಬೆಂಗಳೂರು : ಬೆಂಗಳೂರಿನಲ್ಲಿ ನಿನ್ನೆ ರಾತ್ರಿ 8 ಗಂಟೆಯಿಂದ ಲಾಕ್ ಡೌನ್ ಜಾರಿಯಲ್ಲಿದೆ. ಕೊರೊನಾ ಚೈನ್ ಬ್ರೇಕ್ ಮಾಡೋದಕ್ಕೆ ನಿಮ್ಮ ಸಹಕಾರ ಅತೀ ಅಗತ್ಯ ಮನೆಯಿಂದ ಹೊರ ಬರಬೇಡಿ ಅಂತಾ ಸಾರ್ವಜನಿಕರಲ್ಲಿ ಮನವಿ ಮಾಡಿಕೊಂಡ್ರು, ಸುಖಾ ಸುಮ್ಮನೆ ಕೆಲವರು ಓಡಾಡುತ್ತಿದ್ದಾರೆ. ಹಾಗಾಗಿ ಅನಿವಾರ್ಯವಾಗಿ ಪೊಲೀಸರು  ತಮ್ಮ ಅಸ್ತ್ರವನ್ನು ಪ್ರಯೋಗಿಸುತ್ತಿದ್ದಾರೆ.

ಲಾಕ್ ಡೌನ್ ಸಂದರ್ಭದಲ್ಲಿ ಬೇಕಾಬಿಟ್ಟಿಯಾಗಿ ಓಡಾಟ ನಡೆಸಿದ್ರೆ  ಅಂತಹವರ ವಾಹನಗಳನ್ನು ಸೀಝ್ ಮಾಡುತ್ತಿದ್ದಾರೆ. ರಸ್ತೆಗಳಲ್ಲಿ ಬ್ಯಾರಿಕೇಡ್ ಗಳನ್ನಾ ಹಾಕಿಕೊಂಡು ಪೊಲೀಸರು ಕಾಯ್ತಿದ್ದಾರೆ. ಆರೋಗ್ಯ ತುರ್ತು ಸೇವೆ, ಅಗತ್ಯ ವಸ್ತುಗಳ ಕೊಳ್ಳುವಿಕೆ ಮಾತ್ರ ಅವಕಾಶವನ್ನು ಕಲ್ಪಿಸಿಕೊಡಲಾಗಿದೆ. ಇನ್ನು ಬೆಂಗಳೂರಿನ ಬಹುತೇಕ ಕಡೆಗಳಲ್ಲಿ ಪೊಲೀಸರು ಖಾಸಗಿ ವಾಹನಗಳಲ್ಲಿ ಬಂದವರ ಐಡಿ ಕಾರ್ಡ್ ಗಳನ್ನಾ ಚೆಕ್ ಮಾಡುತ್ತಿದ್ದಾರೆ. ಹಾಗೇ ಮಧ್ಯಾಹ್ನ 12 ಗಂಟೆಯವರೆಗೆ ಮಾತ್ರ ಅಗತ್ಯ ವಸ್ತುಗಳನ್ನ ಕೊಳ್ಳುವವರಿಗೆ ವಿನಾಯಿತಿ ನೀಡಿದ್ದಾರೆ. 12 ಗಂಟೆಯ ಮೇಲೆ ರಸ್ತೆಗಿಳಿದ್ರೆ ಕಠಿಣ ಕ್ರಮ ಕೈಗೊಳ್ಳೋದಕ್ಕೆ ಪೊಲೀಸರು ನಿರ್ಧರಿಸಿದ್ದಾರೆ. ಕಾರಣವಿಲ್ಲದೇ ತಿರುಗಾಡಿದ್ರೆ ಅಂತಹವರ ವಿರುದ್ಧ ಕೇಸು ಹಾಕೋದಕ್ಕೆ ನಿರ್ಧರಿಸಿದ್ದಾರೆ.

- Advertisement -
spot_img

Latest News

error: Content is protected !!