Friday, May 17, 2024
Homeಕರಾವಳಿಬೆಳ್ತಂಗಡಿ ಅಬಕಾರಿ ದಳದ ಮಹತ್ತರ ಕಾರ್ಯಾಚರಣೆ; ಚುನಾವಣಾ ನೀತಿ ಸಂಹಿತೆ ವೇಳೆ 144 ಅಕ್ರಮ ಮದ್ಯ...

ಬೆಳ್ತಂಗಡಿ ಅಬಕಾರಿ ದಳದ ಮಹತ್ತರ ಕಾರ್ಯಾಚರಣೆ; ಚುನಾವಣಾ ನೀತಿ ಸಂಹಿತೆ ವೇಳೆ 144 ಅಕ್ರಮ ಮದ್ಯ ಪ್ರಕರಣ ದಾಖಲು

spot_img
- Advertisement -
- Advertisement -

ಬೆಳ್ತಂಗಡಿ : ಚುನಾವಣಾ ನೀತಿ ಸಂಹಿತೆ ಘೋಷಣೆ ಬಳಿಕ ಬೆಳ್ತಂಗಡಿ ವಲಯ ಅಬಕಾರಿ ದಳದ ಇನ್ಸ್ಪೆಕ್ಟರ್ ಲಕ್ಷ್ಮಣ್ ಉಪ್ಪಾರ ನೇತೃತ್ವದಲ್ಲಿ ತಾಲೂಕಿನಲ್ಲಿ ಒಟ್ಟು 144 ಅಕ್ರಮ ಮದ್ಯ ಪ್ರಕರಣ ದಾಖಲಿಸಿಕೊಂಡಿದ್ದಾರೆ.

ಬೆಳ್ತಂಗಡಿ ತಾಲೂಕಿನಲ್ಲಿ ಚುನಾವಣಾ ನೀತಿ ಸಂಹಿತೆ ಘೋಷಣೆ ಮಾರ್ಚ್ 16 ರಂದು ಅಗಿದ್ದು ಅಲ್ಲಿಂದ ಎಪ್ರಿಲ್ 28 ರವರೆಗೆ ತಾಲೂಕಿನಲ್ಲಿ ಅಕ್ರಮ ಮಧ್ಯ ಸಾಗಾಟ , ಮಧ್ಯ ಮಾರಾಟ, ಮಧ್ಯ ದಸ್ತಾನು ಸೇರಿದಂತೆ ಬೆಳ್ತಂಗಡಿ ಅಬಕಾರಿ ಇಲಾಖೆ ಅಧಿಕಾರಿಗಳು ಒಟ್ಟು 144 ಪ್ರಕರಣವನ್ನು ದಾಖಲಿಸಿಕೊಂಡು 816.02 ಲೀಟರ್ ಅಕ್ರಮ ಮಧ್ಯವನ್ನು ವಶಪಡಿಸಿಕೊಂಡು. ಇದರಲ್ಲಿ ಎರಡು ವಾಹನವನ್ನು ವಶಕ್ಕೆ ಪಡೆಯಲಾಗಿದೆ. ವಶಪಡಿಸಿಕೊಂಡ ವಸ್ತುಗಳ ಮೌಲ್ಯ ರೂಪಾಯಿ 4,45,539 ಅಗಿದೆ.

ಕಾರ್ಯಾಚರಣೆಯ ವಿವರ: ಈ 144 ಪ್ರಕರಣದಲ್ಲಿ ಬೆಳ್ತಂಗಡಿ ವಲಯ ಅಬಕಾರಿ ದಳದ ಅಧಿಕಾರಿಗಳು 112 ಪ್ರಕರಣ ದಾಖಲಿಸಿಕೊಂಡಿದ್ದು. ಮಂಗಳೂರು ಡಿಸಿ ವಿಶೇಷ ಪತ್ತೆ ದಳದ ಅಧಿಕಾರಿಗಳು 8 ಪ್ರಕರಣ ಪತ್ತೆ ಹಚ್ಚಿದ್ದು. ಬಂಟ್ವಾಳ ಉಪವಿಭಾಗ ಮತ್ತು ಬೆಳ್ತಂಗಡಿ ವಲಯ ಅಬಕಾರಿ ದಳದ ಒಂಟಿ ಕಾರ್ಯಾಚರಣೆಯಲ್ಲಿ 12 ಪ್ರಕರಣ ಪತ್ತೆ ಹಚ್ಚಿದ್ದಾರೆ.

- Advertisement -
spot_img

Latest News

error: Content is protected !!