Monday, June 8, 2026
Homeತಾಜಾ ಸುದ್ದಿಗಾಳಿ ಮಳೆಗೆ ತತ್ತರಿಸಿದ ರೈತರು; ಮಳೆಯಿಂದಾಗಿ ಅಪಾರ ಪ್ರಮಾಣದ ಬೆಳೆ ನಾಶ

ಗಾಳಿ ಮಳೆಗೆ ತತ್ತರಿಸಿದ ರೈತರು; ಮಳೆಯಿಂದಾಗಿ ಅಪಾರ ಪ್ರಮಾಣದ ಬೆಳೆ ನಾಶ

- Advertisement -
- Advertisement -

ಚಿಕ್ಕಮಗಳೂರು: ಕಡೂರು ಹಾಗೂ ಸುತ್ತಮುತ್ತಲಿನ ಭಾಗದಲ್ಲಿ ಸುರಿದ ಭಾರೀ ಗಾಳಿ ಮಳೆಗೆ ಭಾರೀ ಮಳೆಗೆ ರೈತರು ಬೆಳೆದ ಅಪಾರ ಪ್ರಮಾಣದ ಬೆಳೆಯು ನಾಶವಾಗಿರುವ ಘಟನೆಯು ನಡೆದಿದೆ.

ಕಡೂರಿನ ಬ್ರಹ್ಮ ಸಮುದ್ರದಲ್ಲಿ ಸುರಿದ ಭಾರೀ ಗಾಳಿ ಮಳೆಗೆ ಅಡಿಕೆ ಹಾಗೂ ತೆಂಗಿನ ಮರಗಳು ಧರೆಗುರುಳಿವೆ. ರೈತರು ಬೆಳೆದ ಟೊಮ್ಯಾಟೋ ಬೆಳೆ ಕೂಡ ನಾಶವಾಗಿದೆ. ವಿದ್ಯುತ್ ಕಂಬಗಳು ಕೂಡ ಧರೆಗುರುಳಿದ್ದು ಅನೇಕರು ಈ ಮಳೆಯಿಂದಾಗಿ ನಷ್ಟ ಅನುಭವಿಸಿದ್ದಾರೆ.

ಕೃಷಿಕರಾದ ಯತೀಶ್ ಬಾಬು, ಈಶ್ವರಪ್ಪ, ರವಿಶಂಕರ್, ಲೋಕೇಶ್, ಸೇರಿದಂತೆ ಅನೇಕರು ಬೆಳೆದ ಬೆಳೆನಾಶವಾಗಿದ್ದು ಸರ್ಕಾರ ಸೂಕ್ತವಾದ ಪರಿಹಾರವನ್ನು ಒದಗಿಸಬೇಕೆಂದು ಆಗ್ರಹಿಸಿದರು. ಅಧಿಕಾರಿಗಳು ಸ್ಥಳಕ್ಕೆ ಪರಿಶೀಲನೆ ನಡೆಸುವುದರೊಂದಿಗೆ ನಾವು ಹೊಂದಿದ ಬೆಳೆನಾಶದ ಕುರಿತು ವರದಿ ತಯಾರಿಸಿ ಆದಷ್ಟು ಶೀಘ್ರವಾಗಿ ಸರ್ಕಾರಕ್ಕೆ ವರ್ಗಾಯಿಸಬೇಕು. ಸಚಿವರು ಹಾಗೂ ಅಧಿಕಾರಿಗಳು ನಮ್ಮ ಸಂಕಷ್ಟಕ್ಕೆ ನೆರವಾಗಬೇಕು ಎಂದು ಬೆಳೆನಾಶ ಹೊಂದಿದ ರೈತರು ಕೋರಿದರು.

- Advertisement -

Latest News

error: Content is protected !!