Monday, May 20, 2024
Homeಅಪರಾಧದೆಹಲಿ ಆರೋಗ್ಯ ಸಚಿವ ಸತ್ಯೇಂದ್ರ ಜೈನ್ ನಿವಾಸದಲ್ಲಿ ಸಿಕ್ತು 2 ಕೋಟಿ ನಗದು, 1.8 ಕೆಜಿ...

ದೆಹಲಿ ಆರೋಗ್ಯ ಸಚಿವ ಸತ್ಯೇಂದ್ರ ಜೈನ್ ನಿವಾಸದಲ್ಲಿ ಸಿಕ್ತು 2 ಕೋಟಿ ನಗದು, 1.8 ಕೆಜಿ ಚಿನ್ನ

spot_img
- Advertisement -
- Advertisement -

ನವದೆಹಲಿ: ಅಕ್ರಮ ಹಣ ವರ್ಗಾವಣೆ ಪ್ರಕರಣದಲ್ಲಿ ಬಂಧನಕ್ಕೊಳಗಾಗಿರುವ ದೆಹಲಿ ಆರೋಗ್ಯ ಸಚಿವ ಸತ್ಯೇಂದ್ರ ಜೈನ್ ಅವರ ನಿವಾಸ ಮತ್ತು ಅವರ ಸಹವರ್ತಿಗಳ ನಿವಾಸ, ಕಚೇರಿಗಳ ಮೇಲೆ ಜಾರಿ ನಿರ್ದೇಶನಾಲಯ(ಇಡಿ) ದಾಳಿ ನಡೆಸಿ ತೀವ್ರ ಶೋಧ ನಡೆಸಿದ್ದು, ಈ ವೇಳೆ ಎರಡು ಕೋಟಿಗೂ ಹೆಚ್ಚು ನಗದು ಮತ್ತು 1.8 ಕೆಜಿ ತೂಕದ 133 ಚಿನ್ನದ ನಾಣ್ಯಗಳನ್ನು ವಶಪಡಿಸಿಕೊಳ್ಳಲಾಗಿದೆ ಎಂದು ಮಂಗಳವಾರ ಇಡಿ ತಿಳಿಸಿದೆ.


ಅಕ್ರಮ ಹಣ ವರ್ಗಾವಣೆ ಪ್ರಕರಣದ ಫಾಲೋ ಅಪ್ ಭಾಗವಾಗಿ ದೆಹಲಿಯಲ್ಲಿರುವ ಜೈನ್ ಅವರ ವಸತಿ ಆವರಣಗಳು ಮತ್ತು ಇತರ ಕೆಲವು ಸ್ಥಳಗಳಲ್ಲಿ ದಾಳಿಗಳನ್ನು ನಡೆಸಲಾಗುತ್ತಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.


ಸೋಮವಾರ ನಡೆದ ದಾಳಿಯ ಸಂದರ್ಭದಲ್ಲಿ, ಇಡಿ ‘ವಿವಿಧ ದಾಖಲೆಗಳು’, ‘ಡಿಜಿಟಲ್ ದಾಖಲೆಗಳನ್ನು’ ವಶಪಡಿಸಿಕೊಂಡಿದೆ. ಹಣ ವರ್ಗಾವಣೆ ಪ್ರಕ್ರಿಯೆಯಲ್ಲಿ ಸಚಿವರು “ಪ್ರತ್ಯಕ್ಷವಾಗಿ ಅಥವಾ ಪರೋಕ್ಷವಾಗಿ ಸಹಾಯ ಮಾಡಿದ್ದಾರೆ” ಎಂದು ಇಡಿ ಪ್ರಕಟಣೆಯಲ್ಲಿ ತಿಳಿಸಿದೆ.


ಸದ್ಯ ಸಚಿವ ಸತ್ಯೇಂದ್ರ ಜೈನ್ ಅವರು ಜೂನ್ 1 ರಿಂದ ಇಡಿ ಕಸ್ಟಡಿಯಲ್ಲಿದ್ದು, ಇಡಿ ಕಸ್ಟಡಿ ಅವಧಿಯನ್ನು ಜೂನ್ 9 ರವರೆಗೆ ಅವರೆಗೆ ವಿಸ್ತರಿಸಲಾಗಿದೆ.
ಕೋಲ್ಕತ್ತಾ ಮೂಲದ ಕಂಪನಿಯೊಂದಕ್ಕೆ ಸಂಬಂಧಿಸಿದ ಮನಿ ಲಾಂಡರಿಂಗ್ ಪ್ರಕರಣದಲ್ಲಿ ಈ ವರ್ಷ ಏಪ್ರಿಲ್‌ನಲ್ಲಿ 4.81 ಕೋಟಿ ರೂ. ಮೌಲ್ಯದ ಸ್ಥಿರ ಆಸ್ತಿಗಳನ್ನು ವಶಪಡಿಸಿಕೊಂಡ ನಂತರ ಇಡಿ ಸತ್ಯೇಂದ್ರ ಜೈನ್ ಅವರನ್ನು ಬಂಧಿಸಿದೆ. ತನಿಖಾ ಸಂಸ್ಥೆಯು ಎಎಪಿ ನಾಯಕನ ವಿರುದ್ಧ ಸಿಬಿಐ ದಾಖಲಿಸಿದ ಎಫ್‌ಐಆರ್ ಆಧರಿಸಿ ಕ್ರಿಮಿನಲ್ ಮೊಕದ್ದಮೆ ದಾಖಲಿಸಿದೆ. ಜೈನ್ ಅವರು ಷೇರುದಾರರಾಗಿದ್ದ ನಾಲ್ಕು ಕಂಪನಿಗಳಿಂದ ಪಡೆದ ಹಣದ ಮೂಲವನ್ನು ವಿವರಿಸಿಲ್ಲ ಎಂದು ಇಡಿ ಆರೋಪಿಸಿದೆ.


`ಜೈನ್ ದೆಹಲಿಯಲ್ಲಿ ಹಲವಾರು ಶೆಲ್ ಕಂಪನಿಗಳನ್ನು ಖರೀದಿಸಿದ್ದಾರೆ ಮತ್ತು ಅವುಗಳ ಮೂಲಕ 16.39 ಕೋಟಿ ರೂ. ಮೌಲ್ಯದ ಕಪ್ಪು ಹಣವನ್ನು ವೈಟ್ ಮನಿಯನ್ನಾಗಿ ಮಾಡಿದ್ದಾರೆ ಎಂದು ತನಿಖಾ ಸಂಸ್ಥೆ ಹೇಳಿದೆ.
ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜಿವಾಲ್ ಅವರು ಸತ್ಯೇಂದ್ರ ಜೈನ್ ವಿರುದ್ಧದ ಆರೋಪಗಳನ್ನು ಸ್ಪಷ್ಟವಾಗಿ ತಳ್ಳಿಹಾಕಿದ್ದು, ಇ ಸಂಪೂರ್ಣ ಸುಳ್ಳು ಪ್ರಕರಣ ಎಂದು ಹೇಳಿದ್ದಾರೆ.

- Advertisement -
spot_img

Latest News

error: Content is protected !!