Friday, May 10, 2024
HomeWorld'ಇಂಡಿಯಾ ಬುಕ್ ಆಫ್ ರೆಕಾರ್ಡ್'ನಲ್ಲಿ ಸ್ಥಾನ ಪಡೆದ '5 ವರ್ಷ'ದ ಬಾಲಕ

‘ಇಂಡಿಯಾ ಬುಕ್ ಆಫ್ ರೆಕಾರ್ಡ್’ನಲ್ಲಿ ಸ್ಥಾನ ಪಡೆದ ‘5 ವರ್ಷ’ದ ಬಾಲಕ

spot_img
- Advertisement -
- Advertisement -

ಚಿತ್ರದುರ್ಗ: ಪ್ರಪಂಚದಲ್ಲಿ ಹರಿಯು ನದಿಗಳ ಹೆಸರು ಮತ್ತು ಅವುಗಳ ದಂಡೆಯ ಮೇಲೆ ಇರುವಂತ ನಗರಗಳು, ಅವುಗಳಿಗೆ ಸಂಬಂಧಿಸಿರುವ ಇತಿಹಾಸದ ಪ್ರಶ್ನೆಗಳಿಗೆ ಥಟ್ ಅಂತ ಉತ್ತರ ಹೇಳುವ ಮೂಲಕ, ಐದು ವರ್ಷದ ಬಾಲಕ ಇಂಡಿಯಾ ಬುಕ್ ಆಫ್ ರೆಕಾರ್ಡ್ ನಲ್ಲಿ ( India Book of Records ) ‘ಸ್ಥಾನಪಡೆದಿದ್ದಾನೆ.


ಚಿತ್ರದುರ್ಗ ಜಿಲ್ಲೆಯ ಹೊಸದುರ್ಗ ಪಟ್ಟಣದ ದಯಾ ಗುಣೇಶ್ ಮತ್ತು ಮಂಜುಳಾ ದಂಪತಿಯ ಪುತ್ರ, ಪೊನ್ನೇಶ್ ದಯಾ ಕೃಷ್ಣನ್ ಎಂಬ ಐದು ವರ್ಷದ ಬಾಲಕನೇ, ಈ ಕೀರ್ತಿಯನ್ನು ಗಳಿಸಿ ಪುಟ್ಟ ಪೋರ.


5 ವರ್ಷದ ಪೊನ್ನೇಶ್ ದಯಾ ಕೃಷ್ಣನ್, ಈ ಚಿಕ್ಕವಯಸ್ಸಿನಲ್ಲಿಯೇ ಸಾಮಾನ್ಯ ಜ್ಞಾನಕ್ಕೆ ಸಂಬಂಧಿಸಿದಂತ ಸಾವಿರಾರು ಪ್ರಶ್ನೆಗಳಿಗೆ ಪಟ್ ಪಟ್ ಅಂತ ಉತ್ತರಿಸುತ್ತಾನೆ. ನೀವು ಪ್ರಪಂಚದ ಪ್ರತಿಯೊಂದು ದೇಶದ ಹೆಸರು, ಅದರ ರಾಜಧಾನಿ, ಪ್ರಸಿದ್ಧ ನಿದಿ, ಆ ನದಿಯ ದಂಡೆಯ ಮೇಲಿರುವಂತ ನಗರ ಸೇರಿದಂತೆ ವಿವಿಧ ಪ್ರಶ್ನೆಗಳಿಗೆ ಪಟ್ ಪಟಾರ್ ಎಂಬುದಾಗಿ ಉತ್ತರಿಸುತ್ತಾನೆ.


ಇದಷ್ಟೇ ಅಲ್ಲದೇ ಕನ್ನಡ ಸಾಹಿತ್ಯಕ್ಕೆ ಸಂಬಂಧಿಸಿರುವ ಜ್ಞಾನಪೀಠ ಪ್ರಶಸ್ತಿ ಪುರಸ್ಕೃತರ ಹೆಸರು, ಕೃತಿಗಳು, ಅವರಿಗೆ ಪ್ರಶಸ್ತಿ ಬಂದಂತ ವರ್ಷವನ್ನು ತನ್ನ ಅಗಾಧ ನೆನಪಿನ ಶಕ್ತಿಯಿಂದ ಉತ್ತರಿಸಲಿದ್ದಾನೆ.
ಪ್ರಸ್ತುತ ದೇಶದ ಪ್ರಧಾನಿ, ರಾಷ್ಟ್ರಪತಿ, ಉಪರಾಷ್ಟ್ರಪತಿ, ಕರ್ನಾಟಕದ ‘ಮುಖ್ಯಮಂತ್ರಿ, ರಾಜ್ಯಪಾಲರು ಹೆಸರನ್ನು ಹೇಳೋ ಈ ಪುಟಾಣಿ ಪೊನ್ನೇಶ್ ದಯಾ ಕೃಷ್ಣನ್, ಈಗ ಇದೇ ಕಾರಣದಿಂದಾಗಿ 2022ರ ಇಂಡಿಯಾ ಬುಕ್ ಆಫ್ ರೆಕಾರ್ಡ್ ಪಟ್ಟಿಯನ್ನು ಸೇರಿದ್ದಾನೆ.


ಈ ಬಗ್ಗೆ ಪ್ರತಿಕ್ರಿಯಿಸಿದಂತ ಬಾಲಕನ ತಂದೆ ದಯಾ ಗುಣೇಶ್ ಅವರು, ನನ್ನ ಮಗನೆಂದು ಹೇಳಿಕೊಳ್ಳಲು ತುಂಬಾ ಹೆಮ್ಮೆ ಎನಿಸುತ್ತಿದೆ. ಆತನ ಬೌದ್ಧಿಕ ವಿಕಾಸ ಮತ್ತು ಮಾನಸಿಕ ಬೆಳವಣಿಗೆಗೆ ಸಹಕಾರಿಯಾಗುವಂತ ವಾತಾವಣವನ್ನು ಮನೆಯಲ್ಲಿ ನಿರ್ಮಾಣ ಮಾಡಲಾಗಿತ್ತು ಎಂದು ಹೇಳಿದರು.

- Advertisement -
spot_img

Latest News

error: Content is protected !!