Friday, June 5, 2026
Homeಕರಾವಳಿಪ್ರವೀಣ್ ನೆಟ್ಟಾರು ಹತ್ಯೆ ಪ್ರಕರಣ; ಸಕಲೇಶಪುರ ನಗರ ಪೊಲೀಸ್ ಠಾಣೆಯಲ್ಲಿ ಆರೋಪಿ ಮುಸ್ತಫಾ ಪೈಚಾರ್ ವಿಚಾರಣೆ...

ಪ್ರವೀಣ್ ನೆಟ್ಟಾರು ಹತ್ಯೆ ಪ್ರಕರಣ; ಸಕಲೇಶಪುರ ನಗರ ಪೊಲೀಸ್ ಠಾಣೆಯಲ್ಲಿ ಆರೋಪಿ ಮುಸ್ತಫಾ ಪೈಚಾರ್ ವಿಚಾರಣೆ ನಡೆಸಿದ ಎನ್ಐಎ

- Advertisement -
- Advertisement -

ಸಕಲೇಶಪುರ: ಪ್ರವೀಣ್ ನೆಟ್ಟಾರು ಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ಸಕಲೇಶಪುರ ನಗರ ಪೊಲೀಸ್ ಠಾಣೆಯಲ್ಲಿ ವಿಚಾರಣೆ ನಡೆದಿದೆ.

ಇಂದು ಬಂಧಿಸಲ್ಪಟ್ಟಿದ್ದ ನಾಲ್ಕನೇ ಅರೋಪಿ ಮುಸ್ತಾಫಾ ಪೈಚಾರ್ ಹಾಗೂ ಇಲಿಯಾಸ್ ಎಂಬಾತನನ್ನು ರಾಷ್ಟ್ರೀಯ ತನಿಖಾ ದಳದ ತಂಡ ಪೊಲೀಸ್ ಠಾಣೆಯಲ್ಲಿ ವಿಚಾರಣೆ ನಡೆಸಿದೆ.

ಆರೋಪಿ ಮುಸ್ತಾಫಾ ಪೈಚಾರ್ ಗೆ ಶುಂಠಿ ಬೆಳೆ ಬೆಳೆಯಲು ಆಶ್ರಯ ನೀಡಿದ್ದ ಸಕಲೇಶಪುರದ ಆನೆಮಹಲ್‌ ನಿವಾಸಿ ಸಿರಾಜ್ ಎಂಬಾತನನ್ನು ಕೂಡಾ ಎನ್ ಐಎ ವಿಚಾರಣೆಗೆ‌ ಒಳಪಡಿಸಿದೆ.

ಆನೆಮಹಲ್‌ ಸಿರಾಜ್ ಬಳಿ ಶುಂಠಿ ಬೆಳೆ ಬೆಳೆಯಲು ಮುಸ್ತಾಫಾ ಪೈಚಾರ್ ಹಾಗೂ ಇಲಿಯಾಸ್ ಜೊತೆಗೂಡಿದ್ದರು ಎಂಬ ಮಾಹಿತಿ ಲಭ್ಯವಾಗಿದೆ.

ಸಕಲೇಶಪುರ ನಗರ ಪೊಲೀಸ್ ಠಾಣೆಯಲ್ಲಿ ವಿಚಾರಣೆ ಬಳಿಕ ಇಬ್ಬರೂ ಆರೋಪಿಗಳನ್ನು ಎನ್ ಐಎ ಅಧಿಕಾರಿಗಳು ಬೆಂಗಳೂರಿಗೆ ಕರೆದೊಯ್ದಿದ್ದಾರೆ.

- Advertisement -

Latest News

error: Content is protected !!