Saturday, June 6, 2026
Homeಕರಾವಳಿಬಂಟ್ವಾಳದ ಮಹಿಳೆಯಿಂದ ಅನಾಥ ಹೆಣ್ಣು ಮಕ್ಕಳಿಗಾಗಿ ಉಚಿತ ಆಶ್ರಯ ನಿರ್ಮಾಣ

ಬಂಟ್ವಾಳದ ಮಹಿಳೆಯಿಂದ ಅನಾಥ ಹೆಣ್ಣು ಮಕ್ಕಳಿಗಾಗಿ ಉಚಿತ ಆಶ್ರಯ ನಿರ್ಮಾಣ

- Advertisement -
- Advertisement -

ಬಂಟ್ವಾಳ: ಅನಾಥವಾಗಿರುವ ಹೆಣ್ಣು ಮಕ್ಕಳು-ಮಹಿಳೆಯರಿಗೆ ಆಶ್ರಯ ಕಲ್ಪಿಸುವ ದೃಷ್ಟಿಯಿಂದ ಪಾಣೆಮಂಗಳೂರಿನ ಮಹಿಳೆಯೊಬ್ಬರು ಉಚಿತವಾಗಿ ಆಶ್ರಮ ನಿರ್ಮಾಣಕ್ಕೆ ಮುಂದಾಗಿದ್ದಾರೆ.


ನರಿಕೊಂಬು ರಸ್ತೆಯ ಮೊಗರ್ನಾಡಿನಲ್ಲಿ ತಮ್ಮಸ್ವಂತ ಜಮೀನಿನಲ್ಲಿ ಆಶ್ರಮಕ್ಕಾಗಿ ಎಲ್ಲಾ ರೀತಿಯ ವ್ಯವಸ್ಥೆಗಳನ್ನು ಮಾಡಿಕೊಂಡಿದ್ದಾರೆ. ಪಾಣೆಮಂಗಳೂರಿನ ಕುಮುದಾ ಜೆ.ಕುಡ್ವ ಅವರೇ ಆಶ್ರಮ ನಿರ್ಮಾಣಕ್ಕೆ ಮುಂದಾಗಿರುವ ಮಹಿಳೆಯಾಗಿದ್ದು, ಸುಮಾರು ಹತ್ತು ವರ್ಷಗಳ ಹಿಂದೆಯೇ ಆಶ್ರಮ ನಿರ್ಮಾಣ ಮಾಡಬೇಕು ಎಂಬ ಇಚ್ಛೆಯೊಂದಿಗೆ 2011ರಲ್ಲಿ ಜೆ.ಕೆ. ಸೇವಾ ಟ್ರಸ್ಟ್ ಸ್ಥಾಪಿಸಿದ್ದರು.


ಆದರೆ ಹಲವು ಕಾರಣಕ್ಕೆ ಆಶ್ರಮ ನಿರ್ಮಾಣ ಸಾಧ್ಯವಾಗಿರಲಿಲ್ಲ. ಪ್ರಸ್ತುತ ಆರಂಭಿಸುವ ಆಶ್ರಮದಲ್ಲಿ ಗರಿಷ್ಠ ಅಂದರೆ ನೂರು ಮಂದಿಗೆ ಅವಕಾಶ ನೀಡುವ ಗುರಿಯನ್ನು ಇಟ್ಟುಕೊಂಡಿದ್ದಾರೆ.

- Advertisement -

Latest News

error: Content is protected !!