Saturday, June 27, 2026
Homeಆರಾಧನಾಪಾಠ ಹೇಳಿಕೊಡುವುದಾಗಿ ಮನೆಗೆ ಕರೆಯಿಸಿ ಶಿಕ್ಷಕನಿಂದ ಲೈಂಗಿಕ ದೌರ್ಜನ್ಯ; ವಿದ್ಯಾರ್ಥಿನಿ ಮೂರು ತಿಂಗಳ ಗರ್ಭಿಣಿ

ಪಾಠ ಹೇಳಿಕೊಡುವುದಾಗಿ ಮನೆಗೆ ಕರೆಯಿಸಿ ಶಿಕ್ಷಕನಿಂದ ಲೈಂಗಿಕ ದೌರ್ಜನ್ಯ; ವಿದ್ಯಾರ್ಥಿನಿ ಮೂರು ತಿಂಗಳ ಗರ್ಭಿಣಿ

- Advertisement -
- Advertisement -

ಹಾವೇರಿ: ಜಿಲ್ಲೆಯ ಶಿಗ್ಗಾಂವಿ ತಾಲೂಕಿನಲ್ಲಿ ವಿದ್ಯಾರ್ಥಿನಿ ಮೇಲೆ ಸಹಾಯಕ ಪ್ರಾಧ್ಯಾಪಕ ಲೈಂಗಿಕ ದೌರ್ಜನ್ಯ ಎಸಗಿದ ಘಡನೆ ನಡೆದಿದೆ.


ಇನ್ನು ಈ ವಿದ್ಯಾರ್ಥಿನಿ ಬಿ.ಕಾಂ ಅಂತಿಮ ವರ್ಷದಲ್ಲಿ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಸಹಾಯಕ ಪ್ರಾಧ್ಯಾಪಕನ ವಿರುದ್ಧ ಈ ಆರೋಪ ಕೇಳಿಬಂದಿದೆ.
ಒಂದೂವರೆ ವರ್ಷಗಳಿಂದ ತನ್ನ ಮೇಲೆ ಏಳೆಂಟು ಬಾರಿ ಸಹಾಯಕ ಪ್ರಾಧ್ಯಾಪಕ ಲೈಂಗಿಕ ದೌರ್ಜನ್ಯ ಎಸಗಿದ್ದಾರೆ ಎಂದು ವಿದ್ಯಾರ್ಥಿನಿ ಹೇಳಿದ್ದಾಳೆ. ನಿಂಗಪ್ಪ ಕಲಕೋಟಿ ಎಂಬ ಪ್ರಾಧ್ಯಾಪಕ ಲೈಂಗಿಕ ದೌರ್ಜನ್ಯ ಎಸಗಿರುವ ಆರೋಪಿ. ಮನೆ ಪಾಠ ಹೇಳಿಕೊಡುವುದಾಗಿ ಕರೆಯಿಸಿ ಲೈಂಗಿಕ ದೌರ್ಜನ್ಯ ಎಸಗಿದ್ದಾರೆ ಎಂದು ವಿದ್ಯಾರ್ಥಿನಿ ಆರೋಪಿಸಿದ್ದಾಳೆ.
ನಿರಂತರ ಲೈಂಗಿಕ ದೌರ್ಜನ್ಯದಿಂದ ವಿದ್ಯಾರ್ಥಿನಿ ಮೂರು ತಿಂಗಳ ಗರ್ಭಿಣಿಯಾಗಿದ್ದಾಳೆ.

- Advertisement -

Latest News

error: Content is protected !!