Saturday, April 27, 2024
Homeಚಿಕ್ಕಮಗಳೂರುಇನ್ಸುರೆನ್ಸ್ ಮುಗಿದು ನಾಲ್ಕು ವರ್ಷವಾದ್ರೂ ಓಡುತ್ತಿದೆ ಸರ್ಕಾರದ ಕಾರು, ಹೇಳೋರಿಲ್ಲ-ಕೇಳೋರಿಲ್ಲ; ಸ್ಥಳೀಯರಿಂದ ಸರ್ಕಾರ, ಪೊಲೀಸ್ ಹಾಗೂ...

ಇನ್ಸುರೆನ್ಸ್ ಮುಗಿದು ನಾಲ್ಕು ವರ್ಷವಾದ್ರೂ ಓಡುತ್ತಿದೆ ಸರ್ಕಾರದ ಕಾರು, ಹೇಳೋರಿಲ್ಲ-ಕೇಳೋರಿಲ್ಲ; ಸ್ಥಳೀಯರಿಂದ ಸರ್ಕಾರ, ಪೊಲೀಸ್ ಹಾಗೂ ಆರ್.ಟಿ.ಓ ವಿರುದ್ಧ ವ್ಯಂಗ್ಯ

spot_img
- Advertisement -
- Advertisement -

ಚಿಕ್ಕಮಗಳೂರು: ಪೊಲೀಸರು ಜನಸಾಮಾನ್ಯರಿಗಾದ್ರೆ ಹೆಲ್ಮೆಟ್ ಇಲ್ಲ, ಸೀಟ್ ಬೆಲ್ಟ್ ಹಾಕಿಲ್ಲ, ಇನ್ಸುರೆನ್ಸ್ ಇಲ್ಲ, ಎಮಿಷನ್ ಟೆಸ್ಟ್ ಇಲ್ಲ, ಮಿರರ್ ಇಲ್ಲ, ಗಾಡೀಲಿ ಪೆಟ್ರೋಲ್ ಇಲ್ಲ, ಟೈರಲ್ಲಿ ಗಾಳಿ ಇಲ್ಲ, ಅದಿಲ್ಲ-ಇದಿಲ್ಲ ಅಂತೆಲ್ಲಾ ಕೇಸ್ ಮೇಲೆ ಕೇಸ್ ಹಾಕುತ್ತಾರೆ. ಆದರೆ ಇಲ್ಲೊಂದು ಸರ್ಕಾರದ ಗಾಡಿ ಬರೋಬ್ಬರಿ ನಾಲ್ಕು ವರ್ಷಗಳಿಂದ ಯಾವುದೇ ಡಾಕ್ಯುಮೆಂಟ್ಸ್ ಇಲ್ಲದೆ ಓಡಾಡ್ತನೇ ಇದೆ ಎಂದು ಸ್ಥಳೀಯರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಈ ವಿಚಾರದ ಕುರಿತು ಧ್ವನಿ ಎತ್ತಿರುವ ಸ್ಥಳೀಯರು, ಸರ್ಕಾರದ ಗಾಡಿಯಲ್ಲಿ ಇನ್ಸುರೆನ್ಸ್ ಮುಗಿದು ಒಂದೆರಡು ತಿಂಗಳಲ್ಲ ಬರೋಬ್ಬರಿ ನಾಲ್ಕು ವರ್ಷವಾಗಿದೆ. ನಾಲ್ಕು ತಿಂಗಳಲ್ಲ. ನಾಲ್ಕು ವರ್ಷ. ಫೋರ್ ಇಯರ್. ಆದ್ರು ಸರ್ಕಾರದ ಕಾರು ಓಡುತ್ತಲೇ ಇದೆ. ಹೇಳೋರಿಲ್ಲ. ಕೇಳೋರಿಲ್ಲ ಎಂದು ವ್ಯಂಗ್ಯವಾಡಿದ್ದಾರೆ.

ಈ ವಾಹನವು ಬೆಂಗಳೂರಿನಿಂದ ತುಮಕೂರು, ಹಾಸನ, ಚಿಕ್ಕಮಗಳೂರನ್ನ ದಾಟಿ ಮೂಡಿಗೆರೆಗೆ ಬಂದಿದೆ. ನಾಲ್ಕು ವರ್ಷದಲ್ಲಿ ಇನ್ನೂ ಎಲ್ಲೆಲ್ಲಿ ಓಡಾಡಿದ್ಯೋ ಗೊತ್ತಿಲ್ಲ. ಆದರೆ, ಎಲ್ಲೂ ಯಾರು ನಿಲ್ಲಿಸಿ ದಾಖಲೆ ಕೇಳಿಲ್ಲವಾ ಎಂಬ ಪ್ರಶ್ನೆ ಜನಸಾಮಾನ್ಯರಲ್ಲಿ ಮೂಡಿದೆ. ಸರ್ಕಾರದ ಗಾಡಿ. ಸರ್ಕಾರದ ಲೋಗೋ ಇದೆ. ನಮ್ಮನ್ನ ಕೇಳುವವರು ಯಾರು. ಹಿಡಿಯುವವರು ಯಾರು ಎಂಬ ಭಾವನೆ ಅವರಲ್ಲಿ ಇರಬಹುದು. ಆದರೆ, ಏನೂ ಆಗುವುದು ಬೇಡ. ನಾವು ಸರಿ ಇದ್ರು ಹಿಂದೆ-ಮುಂದೆ ಇರೋರು ಸರಿ ಇರಬೇಕಲ್ವಾ. ಅಕಸ್ಮಾತ್ ಒಂದು ವೇಳೆ, ಎಲ್ಲೋ-ಏನೋ ಸಣ್ಣದ್ದೋ-ದೊಡ್ಡದ್ದೋ ಅಪಘಾತವಾಯ್ತು. ಕಾರಿನ ಒಳಗಿನವರದ್ದೋ-ಹೊರಗಿನವರದ್ದೋ. ಆಗೋದು ಬೇಡ. ಜೀವಹಾನಿಯೇ ಆಯ್ತು ಎಂದು ಭಾವಿಸೋಣ. ಜವಾಬ್ದಾರಿ ಯಾರು. ಈ ಕಾರು ರಿಜಿಸ್ಟೇಷನ್ ಆಗಿರೋದು 2017ರಲ್ಲಿ. 2018ರಲ್ಲೇ ಇನ್ಸುರೆನ್ಸ್ ಮುಗಿದಿದೆ. ನಾಲ್ಕು ವರ್ಷದಿಂದ ಇನ್ಸುರೆನ್ಸ್ ಇಲ್ಲದೆ ಓಡಾಡುತ್ತಿದೆ. 2022ರಲ್ಲಿ ಈ ಗಾಡಿಯನ್ನ ಜ್ಞಾನಭಾರತಿ ಆರ್.ಟಿ.ಓ. ಬ್ಲ್ಯಾಕ್ ಲೀಸ್ಟ್ ಗೆ ಸೇರಿಸಿದೆ. ಆದರೂ ಈ ಗಾಡಿ ರಾಜರೋಷವಾಗಿ ರಸ್ತೆಯಲ್ಲಿ ಓಡಾಡುತ್ತಿದೆ ಎಂದು ಇದನ್ನು ಗಮನಿಸಿದ ಸ್ಥಳಿಯರು ಸರ್ಕಾರ, ಪೊಲೀಸ್ ಹಾಗೂ ಆರ್.ಟಿ.ಓ ವಿರುದ್ಧ ಅಕ್ರೋಶ ವ್ಯಕ್ತಪಡಿಸಿದ್ದಾರೆ.

ಜನಸಾಮಾನ್ಯರು ತುರ್ತು ಸಂದರ್ಭದಲ್ಲಿ ಸೀಟ್ ಬೆಲ್ಟ್ ಹಾಕಿಲ್ಲ ಅಂದ್ರೆ ಗಾಡಿ ಸೈಡಿಗೆ ಹಾಕಿಸಿ ಗಾಡಿಯ ಜನ್ಮ ಜಾಲಾಡುತ್ತಾರೆ. ಒಂದು ದಾಖಲೆ ಇಲ್ಲ ಅಂದ್ರು ಫೈನ್ ಹಾಕುತ್ತಾರೆ. ಈ ಗಾಡಿ ಹೇಗೆ ಓಡಾಡೋದಕ್ಕೆ ಸಾಧ್ಯ. ಹಾಗಾದ್ರೆ, ಸರ್ಕಾರದ ಕಾನೂನು ಕೇವಲ ಜನಸಾಮಾನ್ಯರಿಗೆ ಮಾತ್ರವಾ ಎಂದು ಪ್ರಶ್ನಿಸಿದ್ದಾರೆ.

- Advertisement -
spot_img

Latest News

error: Content is protected !!