Thursday, June 4, 2026
Homeಕರಾವಳಿಚಾರ್ಮಾಡಿಯಲ್ಲಿ  ಲಾರಿ ಓವರ್ ಟೇಕ್ ಮಾಡುವ ರಭಸಕ್ಕೆ ಇನ್ನೊಂದು ಬೈಕ್ ಗೆ ಡಿಕ್ಕಿ : ಲಾರಿ...

ಚಾರ್ಮಾಡಿಯಲ್ಲಿ  ಲಾರಿ ಓವರ್ ಟೇಕ್ ಮಾಡುವ ರಭಸಕ್ಕೆ ಇನ್ನೊಂದು ಬೈಕ್ ಗೆ ಡಿಕ್ಕಿ : ಲಾರಿ ಅಡಿಗೆ ಸಿಲುಕಿ ಬೈಕ್ ಸವಾರ ಸಾವು, ಮತ್ತೋರ್ವನಿಗೆ ಗಂಭೀರ

- Advertisement -
- Advertisement -

ಬೆಳ್ತಂಗಡಿ : ಕೆಲಸ‌ ಮುಗಿಸಿ ಮನೆಗೆ ಹೋಗುತ್ತಿದ್ದ ಬೈಕ್ ಸವಾರನೊಬ್ಬ ಲಾರಿಯನ್ನು ಓವರ್ ಟೇಕ್ ಮಾಡಿದ ಬಳಿಕ ಎದುರಿನಿಂದ ಬಂದ ಇನ್ನೊಂದು ಬೈಕ್ ಗೆ ಡಿಕ್ಕಿ ಹೊಡೆದು ಓವರ್ ಟೇಕ್ ಮಾಡಿದ ಲಾರಿಯ  ಚಕ್ರಕ್ಕೆ ಸಿಲುಕಿ ಸ್ಥಳದಲ್ಲಿಯೇ ಸಾವನ್ನಪ್ಪಿ ಇನ್ನೊಂದು ಬೈಕ್ ಸವಾರ ಗಂಭೀರ ಗಾಯಗೊಂಡ ಘಟನೆ ಬೆಳ್ತಂಗಡಿ ತಾಲೂಕಿನ ಚಾರ್ಮಾಡಿ ಪೇಟೆಯಲ್ಲಿ ಮಂಗಳವಾರ ರಾತ್ರಿ ನಡೆದಿದೆ.

ಬೆಳ್ತಂಗಡಿ ತಾಲೂಕಿನ ಚಾರ್ಮಾಡಿ ಗ್ರಾಮದ ಚಾರ್ಮಾಡಿ ಪೇಟೆಯಲ್ಲಿ ಮಂಗಳವಾರ ರಾತ್ರಿ ಯಮಹಾ ಕಂಪನಿಯ RN5 ಬೈಕ್ ಸವಾರ ಮತ್ತು ಸಹಸವಾರ ಕಕ್ಕಿಂಜೆಯಿಂದ ಕೆಲಸ ಮುಗಿಸಿ ಚಾರ್ಮಾಡಿ ಮೇಗಿನ ಪೇಟೆಯಲ್ಲಿರುವ ಮನೆಗೆ ಹೋಗುತ್ತಿದ್ದಾಗ ಚಾರ್ಮಾಡಿ ಪೇಟೆ ಪಾಸ್ ಅಗುವ ವೇಳೆ ಕೆಂಪು ಕಲ್ಲು ಸಾಗಾಟದ ಲಾರಿಯನ್ನು ಓವರ್ ಟೇಕ್ ಮಾಡಿದ ನಂತರ ಎದುರಿನಿಂದ ಬಂದ ಪಲ್ಸರ್ ಬೈಕ್ ಗೆ ಡಿಕ್ಕಿ ಹೊಡೆದಿದೆ.

ಈ ವೇಳೆ ಸವಾರ ಹಿಂದೆ ಓವರ್ ಟೇಕ್‌ ಮಾಡಿದ ಲಾರಿಯ ಮುಂದಿನ ಬಲಭಾಗದ ಚಕ್ರಕ್ಕೆ ಸಿಲುಕಿ ಸ್ಥಳದಲ್ಲೇ ಸಾವನ್ನಪ್ಪಿದ್ದಾನೆ ಸಹಸವಾರ ಬಲಭಾಗಕ್ಕೆ ಎಸೆಯಲ್ಪಟ್ಟು ಸಣ್ಣಪುಟ್ಟ ಗಾಯದೊಂದಿದೆ ಪರಾಗಿದ್ದಾನೆ , ಪಲ್ಸರ್ ಬೈಕ್ ಸವಾರ ಡಿಕ್ಕಿ ರಭಸಕ್ಕೆ ಗಂಭೀರ ಗಾಯಗೊಂಡಿದ್ದು ಆಸ್ಪತ್ರೆಗೆ ದಾಖಲಿಸಲಾಗಿದೆ.

ಮೃತಪಟ್ಟನನ್ನು  ಸವಾರ ಚಾರ್ಮಾಡಿ ಗ್ರಾಮದ  ಮೇಗಿನ ಪೇಟೆ ನಿವಾಸಿ ಇ‌ಸ್ಮಾಯಿಲ್ ಅವರ ಮಗ ನಾಝೀರ್(25) ಎಂದು ಗುರುತಿಸಲಾಗಿದೆ. ಈತ ಲಾರಿಯಲ್ಲಿ ಕಂಡಕ್ಟರ್ ಆಗಿ ಕೆಲಸ ಮಾಡುತ್ತಿದ್ದು ಕಕ್ಕಿಂಜೆಯಲ್ಲಿ ಕೆಲಸ ಮುಗಿಸಿ ಮನೆಗೆ ಸ್ನೇಹಿತನ ಜೊತೆಗೆ ವಾಪಸ್ ಅಗುವಾಗ ನಡೆದ ಘಟನೆ ನಡೆದಿದೆ. ಘಟನೆಯಲ್ಲಿ ಎರಡು ಬೈಕ್ ಗೂ ಸಂಪೂರ್ಣ ಜಖಂ ಆಗಿದೆ.

ಬೆಳ್ತಂಗಡಿ ಸಂಚಾರಿ ಠಾಣೆ ಪೊಲೀಸರು ಭೇಟಿ ನೀಡಿ ಪರಿಶೀಲನೆ‌ ನಡೆಸುತ್ತಿದ್ದಾರೆ.

- Advertisement -

Latest News

error: Content is protected !!