
ಪುತ್ತೂರು: ಪೆರ್ಲದ ಶ್ರೀ ಸತ್ಯಸಾಯಿ ಸೇವಾ ಸಮಿತಿಯ ಪ್ರಾಯೋಜಕತ್ವದಲ್ಲಿ, ಪುತ್ತೂರಿನ ಸಿರಿಬಾಗಿಲು ವೆಂಕಪ್ಪಯ್ಯ ಸಾಂಸ್ಕೃತಿಕ ಪ್ರತಿಷ್ಠಾನದ ಶ್ರೀ ಕೇಶವಾನಂದ ಭಾರತೀ ಸ್ಮೃತಿ ಮಂದಿರದಲ್ಲಿ ಜೂನ್ 28ರ ಆದಿತ್ಯವಾರ ಮಧ್ಯಾಹ್ನ 2.30 ರಿಂದ ಉಚಿತ ಆಯುರ್ವೇದ ವೈದ್ಯಕೀಯ ಶಿಬಿರ ನಡೆಯಲಿದೆ.
ಈ ಶಿಬಿರದಲ್ಲಿ ಪೆರ್ಲ ಚಿನ್ಮಯ ಕ್ಲಿನಿಕ್‌ನ ತಜ್ಞ ವೈದ್ಯರಾದ ಡಾ. ಕೃಷ್ಣ ಮೋಹನ ಬಿ.ಆರ್. ಹಾಗೂ ಬಾಯರುಪದವು ಪ್ರಶಾಂತಿ ಕ್ಲಿನಿಕ್‌ನ ಡಾ. ಸತ್ಯನಾರಾಯಣ ಬಿ. ಅವರು ಪಾಲ್ಗೊಂಡು ರೋಗಿಗಳಿಗೆ ವೈದ್ಯಕೀಯ ಸೇವೆ ನೀಡಲಿದ್ದಾರೆ. ಶಿಬಿರದಲ್ಲಿ ವಿವಿಧ ರೋಗಗಳ ಉಚಿತ ತಪಾಸಣೆ ನಡೆಸುವುದರ ಜೊತೆಗೆ ರೋಗಿಗಳಿಗೆ ಉಚಿತವಾಗಿ ಔಷಧಿಗಳನ್ನು ವಿತರಿಸಲಾಗುವುದು.
ಈ ಕಾರ್ಯಕ್ರಮಕ್ಕೆ ಕುಂಬಳೆಯ ಶ್ರೀ ಗೋಪಾಲಕೃಷ್ಣ ಫಾರ್ಮ್‌ಸಿ, ಪುತ್ತೂರು ನೆಹರುನಗರದ ಸಂಜೀವಿನಿ ಕ್ಲಿನಿಕ್‌ನ ಡಾ. ರವಿ ನಾರಾಯಣ, ಕಬಕ ಸುಮತಿ ಕಾಂಪ್ಲೆಕ್ಸ್‌ನ ಶ್ರೀ ಸದ್ಗುರು ಡಿಸ್ಟ್ರಿಬ್ಯೂಟರ್ಸ್ ಹಾಗೂ ಬೆಂಗಳೂರಿನ ಸಿ. ಕೇಮ್. ಫಾರ್ಮಸಿ ಸಂಸ್ಥೆಗಳು ಸಹಕಾರ ನೀಡಿದ್ದು, ಸಾರ್ವಜನಿಕರು ಈ ಉಚಿತ ಆರೋಗ್ಯ ಶಿಬಿರದ ಸದುಪಯೋಗ ಪಡೆದುಕೊಳ್ಳಬೇಕಾಗಿ ಸಿರಿಬಾಗಿಲು ಪ್ರತಿಷ್ಠಾನವು ಪ್ರಕಟಣೆಯಲ್ಲಿ ಕೋರಿದೆ.


