Thursday, June 25, 2026
Homeಕ್ರೀಡೆವೈಭವ್ ಸೂರ್ಯವಂಶಿ ಶತಕ ಬಾರಿಸಿದ್ರೆ ನಾನು ಬೆತ್ತಲಾಗುವೆ ಎಂದ ಕ್ರಿಕೆಟಿಗ: ಪಾಕಿಸ್ತಾನದ ಮಾಜಿ ಕ್ರಿಕೆಟಿಗನ ಸವಾಲು!

ವೈಭವ್ ಸೂರ್ಯವಂಶಿ ಶತಕ ಬಾರಿಸಿದ್ರೆ ನಾನು ಬೆತ್ತಲಾಗುವೆ ಎಂದ ಕ್ರಿಕೆಟಿಗ: ಪಾಕಿಸ್ತಾನದ ಮಾಜಿ ಕ್ರಿಕೆಟಿಗನ ಸವಾಲು!

- Advertisement -
- Advertisement -

ಪಾಕಿಸ್ತಾನದ ಮಾಜಿ ಕ್ರಿಕೆಟಿಗ ತನ್ವೀರ್ ಅಹ್ಮದ್, ಭಾರತದ ಯುವ ಬ್ಯಾಟರ್ ವೈಭವ್ ಸೂರ್ಯವಂಶಿ ವಿರುದ್ಧ ಅತ್ಯಂತ ವಿವಾದಾತ್ಮಕ ಹಾಗೂ ಕಟು ಪದಗಳ ಟೀಕೆ ಮಾಡಿದ್ದಾರೆ.

ಮುಂಬರುವ ಇಂಗ್ಲೆಂಡ್ ಅಥವಾ ಐರ್ಲೆಂಡ್ ವಿರುದ್ಧದ ಸರಣಿಯ ಮೂಲಕ ವೈಭವ್ ಅಂತರರಾಷ್ಟ್ರೀಯ ಕ್ರಿಕೆಟ್ ವೃತ್ತಿಜೀವನ ಆರಂಭಿಸಲಿರುವ ಬೆನ್ನಲ್ಲೇ ಮಾತನಾಡಿರುವ ತನ್ವೀರ್, ಐಪಿಎಲ್ ಅಥವಾ ಏಷ್ಯಾ ಉಪಖಂಡದ ಪಿಚ್‌ಗಳಲ್ಲಿ ರನ್ ಗಳಿಸುವುದು ಸುಲಭ, ಆದರೆ ಇಂಗ್ಲೆಂಡ್‌ನ ಸ್ವಿಂಗ್ ಪಿಚ್‌ಗಳ ಸವಾಲೇ ಬೇರೆ ಎಂದು ಹೇಳಿದ್ದಾರೆ. ಅಷ್ಟೇ ಅಲ್ಲದೆ, ವೈಭವ್ ಇಂಗ್ಲೆಂಡ್ ವಿರುದ್ಧದ ಸರಣಿಯಲ್ಲಿ ಒಂದು ಶತಕ ಬಾರಿಸಿದರೆ ತಾವು ಲಾಹೋರ್‌ನ ಬೀದಿಗಳಲ್ಲಿ ಬೆತ್ತಲೆಯಾಗಿ ಓಡುವುದಾಗಿ ಸವಾಲು ಹಾಕಿದ್ದಾರೆ.

ಅಷ್ಟೇಅಲ್ಲದೆ, ವೈಭವ್ ಅವರ ವಯಸ್ಸಿನ ಬಗ್ಗೆಯೂ ಗಂಭೀರ ಆರೋಪ ಮಾಡಿದ್ದಾರೆ. ವೈಭವ್‌ಗೆ ಕೇವಲ 15 ವರ್ಷ ಎನ್ನುವುದು ಶುದ್ಧ ಸುಳ್ಳು, ಅವರ ಹಿಪ್ ರೊಟೇಷನ್ ಮತ್ತು ಸಿಕ್ಸರ್ ಹೊಡೆಯುವ ಶಕ್ತಿಯನ್ನು ಗಮನಿಸಿದರೆ ಅವರಿಗೆ ಕನಿಷ್ಠ 22 ವರ್ಷ ವಯಸ್ಸಾಗಿರಲೇಬೇಕು ಎಂದು ಸಂಶಯ ವ್ಯಕ್ತಪಡಿಸಿದ್ದಾರೆ.

ಕೊನೆಯದಾಗಿ, ವೈಭವ್ ಅವರನ್ನು ಒಬ್ಬ ತಾಂತ್ರಿಕ ಬ್ಯಾಟರ್ ಅಲ್ಲ ಎಂದು ಕಡೆಗಣಿಸಿರುವ ತನ್ವೀರ್, ಸಣ್ಣ ಬೌಂಡರಿಗಳಿರುವ ಮೈದಾನಗಳಲ್ಲಿ ಕಣ್ಣು ಮುಚ್ಚಿ ಅಡ್ಡಾದಿಡ್ಡಿ ಬ್ಯಾಟ್ ಬೀಸುವ ಒಬ್ಬ ‘ಬ್ಲೈಂಡ್ ಸ್ಲಾಗರ್’ ಎಂದು ವ್ಯಂಗ್ಯವಾಡಿದ್ದಾರೆ.

- Advertisement -

Latest News

error: Content is protected !!