Thursday, June 4, 2026
Homeತಾಜಾ ಸುದ್ದಿಚುನಾವಣಾ ಜೋಶ್ ನಲ್ಲಿ ಡಯಾಸ್ ತಟ್ಟಿ ತಟ್ಟಿ ಮಾತನಾಡಿದ ಜಮೀರ್;  ಸಚಿವರ ಭಾಷಣದ ಬಿರುಸಿಗೆ ಡಯಾಸ್...

ಚುನಾವಣಾ ಜೋಶ್ ನಲ್ಲಿ ಡಯಾಸ್ ತಟ್ಟಿ ತಟ್ಟಿ ಮಾತನಾಡಿದ ಜಮೀರ್;  ಸಚಿವರ ಭಾಷಣದ ಬಿರುಸಿಗೆ ಡಯಾಸ್ ಗಾಜು ಪುಡಿ ಪುಡಿ

- Advertisement -
- Advertisement -

ಬೆಳಗಾವಿ: ವಸತಿ ಮತ್ತು ವಕ್ಪ್ ಸಚಿವ ಬಿ.ಝಡ್. ಜಮೀರ್ ಅಹ್ಮದ್ ಖಾನ್ ಬೆಳಗಾವಿಯಲ್ಲಿ ಲೋಕಸಭೆ ಚುನಾವಣೆಯ ಭರ್ಜರಿ ಪ್ರಚಾರದಲ್ಲಿ ತೊಡಗಿದ್ದಾರೆ.

ಇನ್ನು ಗೋಕಾಕ್ ನಲ್ಲಿ ಬೆಳಗಾವಿ ಲೋಕಸಭಾ ಅಭ್ಯರ್ಥಿ ಮೃಣಾಲ್ ಹೆಬ್ಬಾಳಕರ್ ಪರ ನಡೆದ ಪ್ರಚಾರ ಸಭೆಯಲ್ಲಿ ಮಾತನಾಡಿ, ‘ಕಾಂಗ್ರೆಸ್ ಪಕ್ಷ ಚುನಾವಣೆ ಬಂದಾಗ ಅಷ್ಟೇ ಅಲ್ಲ, ನಿರಂತರ ಜನರ ಜತೆ ಒಳ್ಳೆಯ ಸಂಬಂಧ ಇಟ್ಟುಕೊಂಡು ಮೂಲಭೂತ ಸೌಲಭ್ಯಗಳನ್ನು ನೀಡುವ ಕಾರ್ಯಮಾಡುತ್ತಾ ಬಂದಿದೆ. ಬಿಜೆಪಿಗೆ ಹಿಂದೂ, ಮುಸ್ಲಿಂ ವಿಚಾರ ಬಿಟ್ಟು ಬೇರೆ ಯಾವ ವಿಚಾರಗಳು ಇಲ್ಲ. ಜಾತಿಯತೆ ಮಾಡುವುದನ್ನು ಇಸ್ಲಾಂ ಧರ್ಮ ಕಲಿಸಿಲ್ಲ, ಎಲ್ಲರೂ ಒಂದಾಗಿ ಬಾಳುವುದನ್ನು ಹೇಳಿಕೊಟ್ಟಿದೆ’ ಎಂದರು.

ಇನ್ನು ಇಲ್ಲಿ ಭಾಷಣ ಮಾಡುವ ಭರದಲ್ಲಿ ಡಯಾಸ್ ನ ಗಾಜು ಕುಟ್ಟಿದ ಅಬ್ಬರಕ್ಕೆ ಪುಡಿಯಾಯಿತು. ಇಷ್ಟಕ್ಕೆ ಸುಮ್ಮನಾಗದ ಅವರು ಇದು ಪಠಾಣನ ದೇಹ ಇದಕ್ಕೆ ಏನೂ ಆಗುವುದಿಲ್ಲ ಎಂದು ಡೈಲಾಗ್ ಹೊಡೆದರು.

- Advertisement -

Latest News

error: Content is protected !!