Sunday, April 28, 2024
Homeತಾಜಾ ಸುದ್ದಿಸ್ನೇಹಿತನ ವಾಟ್ಸಾಪ್ ಸಂಖ್ಯೆಯಿಂದ ಬಂತು ಸಂಕಷ್ಟದಲ್ಲಿದ್ದೇನೆ ಅನ್ನೋ ಮೆಸೇಜ್: ಸಂದೇಶ ನಂಬಿ ದುಡ್ಡು ಹಾಕಿ...

ಸ್ನೇಹಿತನ ವಾಟ್ಸಾಪ್ ಸಂಖ್ಯೆಯಿಂದ ಬಂತು ಸಂಕಷ್ಟದಲ್ಲಿದ್ದೇನೆ ಅನ್ನೋ ಮೆಸೇಜ್: ಸಂದೇಶ ನಂಬಿ ದುಡ್ಡು ಹಾಕಿ 5 ಲಕ್ಷ ಕಳೆದುಕೊಂಡ ಗೆಳೆಯ

spot_img
- Advertisement -
- Advertisement -

ಬೆಂಗಳೂರು:  ಸ್ನೇಹಿತನ ವಾಟ್ಸಾಪ್ ಸಂಖ್ಯೆಯಿಂದ ಬಂದ ಮೆಸೇಜ್ ನಂಬಿ ವ್ಯಕ್ತಿಯೊಬ್ಬರು 5 ಲಕ್ಷ ಕಳೆದುಕೊಂಡ ಘಟನೆ ಬೆಂಗಳೂರಿನಲ್ಲಿ ನಡೆದಿದೆ.  ಈ ಸಂಬಂಧ ವೈಟ್‌ಫೀಲ್ಡ್ ಸೈಬರ್ ಕ್ರೈಂ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

‘ದೇವರಬಿಸನಹಳ್ಳಿಯ 47 ವರ್ಷದ ವ್ಯಕ್ತಿ ಈ ಬಗ್ಗೆ ದೂರು ನೀಡಿದ್ದಾರೆ. ಇಬ್ಬರು ಆರೋಪಿಗಳ ವಿರುದ್ಧ ಎಫ್‌ಐಆರ್ ದಾಖಲಿಸಿಕೊಳ್ಳಲಾಗಿದೆ’ ಎಂದು ಪೊಲೀಸ್ ಮೂಲಗಳು ಹೇಳಿವೆ.

‘ದೂರುದಾರರಿಗೆ ಆಸ್ಟ್ರೇಲಿಯಾದಲ್ಲಿ ಸ್ನೇಹಿತ ಇದ್ದಾರೆ. ಅದೇ ಸ್ನೇಹಿತನ ಹೆಸರಿನಲ್ಲಿ ಫೆ. 14ರಂದು ವಾಟ್ಸಾಪ್ ಸಂದೇಶ ಕಳುಹಿಸಿದ್ದ ಆರೋಪಿಗಳು, ‘ನಾನು ಅಪಾಯದಲ್ಲಿ ಸಿಲುಕಿದ್ದೇನೆ. ತುರ್ತಾಗಿ ಹಣ ಬೇಕಿದೆ’ ಎಂದಿದ್ದರು. ಅದನ್ನು ಖಾತ್ರಿಪಡಿಸಿಕೊಳ್ಳಲು ದೂರುದಾರ, ಸ್ನೇಹಿತನಿಗೆ ಕರೆ ಮಾಡಿದಾಗ ಸಂಪರ್ಕಕ್ಕೆ ಸಿಕ್ಕಿರಲಿಲ್ಲ.’

‘ಸಂದೇಶ ಬಂದಿದ್ದ ವಾಟ್ಸಾಪ್ ನಂಬರ್‌ ನಲ್ಲಿ ಸ್ನೇಹಿತನ ಫೋಟೊ ಇತ್ತು. ಅದನ್ನು ನಂಬಿದ್ದ ದೂರುದಾರ, ಆರೋಪಿಗಳು ನೀಡಿದ್ದ ಬ್ಯಾಂಕ್ ಖಾತೆಗಳಿಗೆ ಹಂತ ಹಂತವಾಗಿ  5 ಲಕ್ಷ ಜಮೆ ಮಾಡಿದ್ದರು. ಕೆಲ ಹೊತ್ತು ಬಿಟ್ಟು ಸ್ನೇಹಿತ ಸಂಪರ್ಕಕ್ಕೆ ಸಿಕ್ಕಿದ್ದ. ತಾನು ಸಂದೇಶ ಕಳುಹಿಸಿಲ್ಲವೆಂದು ಆತ ಹೇಳಿದ್ದ. ಅವಾಗಲೇ ದೂರುದಾರರಿಗೆ ವಂಚನೆ ಬಗ್ಗೆ ಗೊತ್ತಾಗಿದೆ’ ಎಂದೂ ಪೊಲೀಸ್ ಮೂಲಗಳು ತಿಳಿಸಿವೆ.

- Advertisement -
spot_img

Latest News

error: Content is protected !!