Thursday, June 4, 2026
Homeತಾಜಾ ಸುದ್ದಿಮಸೀದಿಯ ಕಾಣಿಕೆ ಹುಂಡಿಗೆ ಬೆಂಕಿ: ಹುಂಡಿಯಲ್ಲಿದ್ದ ನೋಟುಗಳು ಬೆಂಕಿಗಾಹುತಿ

ಮಸೀದಿಯ ಕಾಣಿಕೆ ಹುಂಡಿಗೆ ಬೆಂಕಿ: ಹುಂಡಿಯಲ್ಲಿದ್ದ ನೋಟುಗಳು ಬೆಂಕಿಗಾಹುತಿ

- Advertisement -
- Advertisement -

ದಾವಣಗೆರೆ: ದರ್ಗಾವೊಂದರ ಹುಂಡಿಗೆ ಬೆಂಕಿ  ಬಿದ್ದು ಅದರಲ್ಲಿದ್ದ ನೋಟುಗಳು ಬೆಂಕಿಗೆ ಆಹುತಿಯಾಗಿರುವ ಘಟನೆ ದಾವಣಗೆರೆ ಜಿಲ್ಲೆಯ ದೊಡ್ಡಬಾತಿಯ ಚಮಶಾ ವಲಿ ದರ್ಗಾದಲ್ಲಿ ನಡೆದಿದೆ.

ಅಗ್ನಿ ಅವಘಡದಲ್ಲಿ ಹುಂಡಿಯಲ್ಲಿದ್ದ ನೋಟುಗಳು ಸುಟ್ಟು ಕರಕಲಾಗಿದೆ. ದಾವಣಗೆರೆ ಗ್ರಾಮಾಂತರ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ನಡೆದಿದೆ. ದರ್ಗಾದ ಹುಂಡಿಗೆ ಬೆಂಕಿ ಬಿದ್ದ ಪರಿಣಾಮ 2000, 500, 200, 100 ರೂಪಾಯಿ ಸೇರಿದಂತೆ ಅದರಲ್ಲಿದ್ದ ಇತರೆ ಮೌಲ್ಯದ ನೋಟುಗಳೆಲ್ಲ ಬೆಂಕಿಗಾಹುತಿಯಾಗಿದೆ.

ಆದರೆ, ಹುಂಡಿಗೆ ಬೆಂಕಿ ಹೇಗೆ ತಗುಲಿತು ಎಂದು ತಿಳಿದುಬಂದಿಲ್ಲ. ಸದ್ಯ, ಸುಟ್ಟ ನೋಟುಗಳನ್ನು ಪೊಲೀಸರು ಪರಿಶೀಲನೆ ನಡೆಸಿದರು. ಜೊತೆಗೆ, ದರ್ಗಾದ ಸಿಸಿಟಿವಿಯನ್ನು ಸಹ ಪರಿಶೀಲನೆ ಮಾಡಿದರು.

- Advertisement -

Latest News

error: Content is protected !!