Friday, March 29, 2024
HomeUncategorizedಮಂಗಳೂರಿನಲ್ಲಿ ಲಂಚಕ್ಕಾಗಿ ಪೀಡಿಸುತ್ತಿದ್ದ ಸರ್ವೇಯರ್: ರೆಡ್ ಹ್ಯಾಂಡ್ ಆಗಿ ಎಸಿಬಿ ಬಲೆಗೆ ಬಿದ್ದ ಅಧಿಕಾರಿ

ಮಂಗಳೂರಿನಲ್ಲಿ ಲಂಚಕ್ಕಾಗಿ ಪೀಡಿಸುತ್ತಿದ್ದ ಸರ್ವೇಯರ್: ರೆಡ್ ಹ್ಯಾಂಡ್ ಆಗಿ ಎಸಿಬಿ ಬಲೆಗೆ ಬಿದ್ದ ಅಧಿಕಾರಿ

spot_img
- Advertisement -
- Advertisement -

ಮಂಗಳೂರು: ಸರ್ಕಾರ ಎಷ್ಟೇ ಸಂಬಳ ಕೊಟ್ರೂ ಕೆಲವು ಅಧಿಕಾರಿಗಳು ಎಂಜಲು ಹಣಕ್ಕಾಗಿ ಕೈ ಚಾಚೋದನ್ನು ಮಾತ್ರ ಬಿಡಲ್ಲ. ಹೀಗೆ  ಲಂಚಕ್ಕಾಗಿ ಪೀಡಿಸುತ್ತಿದ್ದ ಮಂಗಳೂರು ನಗರ ಸರ್ವೇಯರ್‌ ಗಂಗಾಧರ್‌ ಮಂಗಳೂರಿನ ಎಸಿಬಿ ಅಧಿಕಾರಿಗಳ ಬಲೆಗೆ ಬಿದ್ದಿದ್ದಾರೆ.

ನಿನ್ನೆ ಉದ್ಯಮಿಯೊಬ್ಬರು ತಮ್ಮ ಕಚೇರಿಯ ಪೀಠೋಪಕರಣ ಮಾಡಿಸಲು ತಮ್ಮ ಮನೆಯ ಆವರಣದಲ್ಲಿ ಇದ್ದ ಸಾಗುವಾನಿ ಮರವನ್ನು ಕಡಿಯಲು ಅರಣ್ಯ ಇಲಾಖೆ ಅನುಮತಿಗಾಗಿ ಕೋರಿ ಪತ್ರ ಸಲ್ಲಿಸಿದ್ದರು. ಮಂಗಳೂರು ನಗರದ ಅರಣ್ಯ ಇಲಾಖೆ ಈ ಪತ್ರವನ್ನು ಕಂದಾಯ ಇಲಾಖೆಗೆ ಕಳಿಸಿತ್ತು. ಒಂದು ತಿಂಗಳಾದರೂ ಸ್ಥಳ ಪರಿಶೀಲನೆ ನಡೆಸಲು ಬಾರದ ಸರ್ವೇಯರ್‌ ಗಂಗಾಧರ್‌ ಸ್ಥಳ ಪರಿಶೀಲನೆ ನಡೆಸಲು 3,000 ರುಪಾಯಿ ಲಂಚಕ್ಕೆ ಬೇಡಿಕೆ ಇಟ್ಟಿದ್ದರು. ಕಂದಾಯ ಇಲಾಖೆಗೆ ಕಟ್ಟಬೇಕಾದ 600 ರುಪಾಯಿ ಜೊತೆಯಲ್ಲಿ ಇರವರಿಗೆ 3,000 ರೂಪಾಯಿ ಕೊಟ್ಟ ಉದ್ಯಮಿಗೆ ,ಇನ್ನೊಂದು ತಿಂಗಳು ಕಳೆದರೂ ಮರ ಇರುವ ಸ್ಥಳದ ನಕಾಶೆ ನೀಡಲು ಪುನಃ 30,000 ರೂ ಡಿಮಾಂಡ್‌ ಮಾಡಿದ್ದರು.

ಇದರಿಂದ ಮನ ನೊಂದ ಉದ್ಯಮಿ ಮಂಗಳೂರಿನ ಪರಿಸರ ಸಂರಕ್ಷಣಾ ಸದಸ್ಯರ ಗಮನಕ್ಕೆ ತಂದರು. ನಂತರ ಈ ವಿಚಾರವನ್ನು ಮಂಗಳೂರಿನ ಎಸಿಬಿ ಇನ್ಸ್‌ಪೆಕ್ಟರ್‌ ಶ್ಯಾಮಸುಂದರ್‌ರವರ ಗಮನಕ್ಕೆ ತರಲಾಯಿತು. ನಿನ್ನೆ ಸಂಜೆ ಮಂಗಳೂರಿನ ಮಿನಿ ವಿಧಾನ ಸೌಧದ ಎದುರು 20 ಸಾವಿರ ರೂ. ಲಂಚದ ಹಣ ತೆಗೆದುಕೊಳ್ಳುವ ಸಮಯದಲ್ಲಿ ಸಾಕ್ಷಿ ಸಮೇತ ಸರ್ವೇಯರ್‌ ಗಂಗಾಧರ್‌ನ್ನು ಎಸಿಬಿ ತಂಡ ಬಂಧಿಸಿದ್ದಾರೆ.

- Advertisement -
spot_img

Latest News

error: Content is protected !!