Tuesday, June 23, 2026
HomeUncategorizedಬೆಳ್ತಂಗಡಿ : ಗುರುವಾಯನಕೆರೆಯಲ್ಲಿ ಯತೀಶ್ ಕೊಲೆ ಪ್ರಕರಣ; ಮೂವರು ಆರೋಪಿಗಳನ್ನು ಬಂಧಿಸಿದ ಬೆಳ್ತಂಗಡಿ ಪೊಲೀಸರು

ಬೆಳ್ತಂಗಡಿ : ಗುರುವಾಯನಕೆರೆಯಲ್ಲಿ ಯತೀಶ್ ಕೊಲೆ ಪ್ರಕರಣ; ಮೂವರು ಆರೋಪಿಗಳನ್ನು ಬಂಧಿಸಿದ ಬೆಳ್ತಂಗಡಿ ಪೊಲೀಸರು

- Advertisement -
- Advertisement -

ಬೆಳ್ತಂಗಡಿ : ಗುರುವಾಯನಕೆರೆಯಲ್ಲಿ ಯತೀಶ್ ಕೊಲೆ ಪ್ರಕರಣಕ್ಕೆ ಸಂಬಂಧಪಟ್ಟಂತೆ ಮೂವರು ಆರೋಪಿಗಳನ್ನು ಬೆಳ್ತಂಗಡಿ ಪೊಲೀಸರು ಬಂಧಿಸಿದ್ದಾರೆ. ಬೆಳ್ತಂಗಡಿ ಮಿತ್ತಬಾಗಿಲು ನಿವಾಸಿ ಯಶೋಧರ (35), ಕಡಬ ಚಾರ್ವಾಕ ನಿವಾಸಿ ಮೋಹನ್ (30) ಹಾಗೂ ಬೆಳ್ತಂಗಡಿ ಪಡಂಗಡಿ ನಿವಾಸಿ ಇಬ್ರಾಹಿಂ (54) ಬಂಧಿತರು.

ಈ ಬಗ್ಗೆ ಬಂಟ್ವಾಳ ಪೆರ್ನೆ ನಿವಾಸಿ ನಿತಿನ್‌ (34) ಎಂಬವರು ದೂರು ನೀಡಿದ್ದರು. ದಿನಾಂಕ: 01-06-2026 ರಂದು ಬೆಳಿಗ್ಗೆ, ನಿತಿನ್ ಅವರಿಗೆ ವಾಟ್ಸಾಪ್‌ ಮೂಲಕ ಬೆಳ್ತಂಗಡಿ ಗುರುವಾಯನಕೆರೆ, ಅಲಾದಿಕೊಟ್ಟಿಗೆ ಎಂಬಲ್ಲಿ ಅಪರಿಚಿತ ಮೃತದೇಹ ಇರುವ ಬಗ್ಗೆ ಭಾವಚಿತ್ರ ಸಹಿತ ಮಾಹಿತಿ ಬಂದಿದ್ದು, ಆ ಬಾವಚಿತ್ರವನ್ನು ಪರಿಶೀಲಿಸಿದಾಗ ಮೃತವ್ಯಕ್ತಿಯು ತನ್ನ  ಸಹೋದರ ಯತೀಶ್ (33)  ಅವರದ್ದು ಅನ್ನೋದು ಗೊತ್ತಾಗಿದೆ. ಅದರಂತೆ ನಿತಿನ್  ಘಟನಾಸ್ಥಳಕ್ಕೆ ಬಂದು ಸ್ಥಳದಲ್ಲಿರುವ ಸಿಸಿಟಿವಿಯನ್ನು ಪರಿಶೀಲಿಸಿದಾಗ, ದಿನಾಂಕ: 01-06-2026 ರಂದು ಬೆಳಗ್ಗಿನ ಸಮಯ ತನ್ನ ಸಹೋದರನಿಗೆ ಬೆಳ್ತಂಗಡಿ ಮಿತ್ತಬಾಗಿಲು ನಿವಾಸಿ ಯಶೋಧರ (35), ಕಡಬ ಚಾರ್ವಾಕ ನಿವಾಸಿ ಮೋಹನ್ (30) ಹಾಗೂ ಬೆಳ್ತಂಗಡಿ ಪಡಂಗಡಿ ನಿವಾಸಿ ಇಬ್ರಾಹಿಂ (54) ಎಂಬವರುಗಳು ಹಲ್ಲೆ ಮಾಡುತ್ತಿರುವುದು ಕಂಡುಬಂದಿದ್ದು, ಆರೋಪಿಗಳ ಹಲ್ಲೆಯಿಂದಾಗಿ ಯತೀಶ್ ಅವರು ಸ್ಥಳಗದಲ್ಲೇ ಮೃತಪಟ್ಟಿರುವುದಾಗಿ ದೂರಿನಲ್ಲಿ ತಿಳಿಸಿದ್ದಾರೆ. ಈ ಬಗ್ಗೆ ಬೆಳ್ತಂಗಡಿ ಪೊಲೀಸ್ ಠಾಣೆಯಲ್ಲಿ ಅ ಕ್ರ : 65/2026, ಕಲಂ: 115(2) 103 ಜೊತೆಗೆ 3(5) ಬಿ.ಎನ್.ಎಸ್ ರಂತೆ ಪ್ರಕರಣ ದಾಖಲಾಗಿದ್ದು, ಆರೋಪಿಗಳನ್ನು ವಶಕ್ಕೆ ಪಡೆದು ವಿಚಾರಣೆ ನಡೆಸುತ್ತಿದ್ದಾರೆ.

- Advertisement -

Latest News

error: Content is protected !!