Thursday, May 16, 2024
HomeಇತರSSC ಪರೀಕ್ಷೆಗಳನ್ನು ರದ್ದುಗೊಳಿಸಿದ ಸರ್ಕಾರ: ಸಂತಸದಲ್ಲಿ ವಿದ್ಯಾರ್ಥಿಗಳು

SSC ಪರೀಕ್ಷೆಗಳನ್ನು ರದ್ದುಗೊಳಿಸಿದ ಸರ್ಕಾರ: ಸಂತಸದಲ್ಲಿ ವಿದ್ಯಾರ್ಥಿಗಳು

spot_img
- Advertisement -
- Advertisement -

ಹೈದರಬಾದ್: ಯಾವುದೇ ಪರೀಕ್ಷೆ ಇಲ್ಲದೆ 10 ನೇ ತರಗತಿ ವಿದ್ಯಾರ್ಥಿಗಳನ್ನು ಮುಂದಿನ ತರಗತಿಗೆ ಬಡ್ತಿ ನೀಡಲಾಗುವುದು ಎಂದು ತೆಲಂಗಾಣ ಮುಖ್ಯಮಂತ್ರಿ ಕೆ. ಚಂದ್ರಶೇಖರ್ ರಾವ್ ತಿಳಿಸಿದ್ದಾರೆ.

ದೇಶದಲ್ಲಿ ಕೊರೊನಾ ವೈರಸ್‌ ಮಾರಣಾಂತಿಕವಾಗಿ ಕಾಡುತ್ತಿರುವ ಪರಿಣಾಮ ಇದರ ನಿಯಂತ್ರಣಕ್ಕಾಗಿ ಕಳೆದ ಎರಡೂವರೆ ತಿಂಗಳಿಗೂ ಅಧಿಕ ಕಾಲದಿಂದ ಕೇಂದ್ರ ಸರ್ಕಾರ ಲಾಕ್‌ ಡೌನ್‌ ಜಾರಿಗೊಳಿಸಿದ್ದು, ಈ ಹಿನ್ನಲೆಯಲ್ಲಿ ನಿಗದಿಯಾಗಿದ್ದ ಪರೀಕ್ಷೆಗಳನ್ನು ಮುಂದೂಡಲಾಗಿತ್ತು. ಇದೀಗ 5ನೇ ಹಂತದ ಲಾಕ್‌ ಡೌನ್‌ ಜಾರಿಯಲ್ಲಿದ್ದು, ಪರೀಕ್ಷೆ ನಡೆಸುವ ಕುರಿತಂತೆ ಸೇರಿ ಹಲವು ವಿನಾಯಿತಿಗಳನ್ನು ನೀಡಲಾಗಿದೆ. ಈ ಹಿನ್ನಲೆಯಲ್ಲಿ ತೆಲಂಗಾಣ ಸರ್ಕಾರ ಬಾಕಿ ಉಳಿದಿದ್ದ ಎಸ್.ಎಸ್.‌ಸಿ. ಪರೀಕ್ಷೆ ನಡೆಸುವ ಕುರಿತಂತೆ ದಿನಾಂಕ ಘೋಷಿಸಿದ್ದು, ಈ ಪರೀಕ್ಷೆಗಳು ಜೂನ್‌ 8 ರಿಂದ ಜುಲೈ 5 ರ ವರೆಗೆ ನಡೆಯಬೇಕಾಗಿತ್ತು.

ಆದರೆ ರಾಜ್ಯದಲ್ಲಿ ಕೊರೊನಾ ಸೋಂಕಿನ ಪ್ರಕರಣಗಳು ದಿನದಿಂದ ದಿನಕ್ಕೆ ಏರಿಕೆಯಾಗುತ್ತಿರುವ ಹಿನ್ನಲೆಯಲ್ಲಿ ಎಸ್‌.ಎಸ್.‌ಸಿ. ಪರೀಕ್ಷೆಯನ್ನು ರದ್ದುಗೊಳಿಸಿರುವ ತೆಲಂಗಾಣ ಸರ್ಕಾರ, ವಿದ್ಯಾರ್ಥಿಗಳು ಪಡೆದಿರುವ ಇಂಟರ್ನಲ್‌ ಮಾರ್ಕ್ಸ್‌ ಆಧಾರದ ಮೇಲೆ ಉತ್ತೀರ್ಣ ಮಾಡಲು ಸೂಚನೆ ನೀಡಿದೆ.

- Advertisement -
spot_img

Latest News

error: Content is protected !!