Saturday, June 6, 2026
Homeತಾಜಾ ಸುದ್ದಿ'ಉಗ್ರ' ಸಂಘಟನೆಯೊಂದಿಗೆ ನಿಕಟ ಸಂಪರ್ಕ ಹಿನ್ನಲೆ : ಎನ್‌ಐಎಯಿಂದ 'ಶಿರಸಿ' ಮೂಲದ ಯುವಕನ ಬಂಧನ

‘ಉಗ್ರ’ ಸಂಘಟನೆಯೊಂದಿಗೆ ನಿಕಟ ಸಂಪರ್ಕ ಹಿನ್ನಲೆ : ಎನ್‌ಐಎಯಿಂದ ‘ಶಿರಸಿ’ ಮೂಲದ ಯುವಕನ ಬಂಧನ

- Advertisement -
- Advertisement -

ಶಿರಸಿ: ಉಗ್ರ ಸಂಘಟನೆಯೊಂದಿಗೆ ಲಿಂಕ್ ಹಿನ್ನಲೆಯಲ್ಲಿ ರಾಷ್ಟ್ರೀಯ ತನಿಖಾ ದಳದ ಅಧಿಕಾರಿಗಳಿಂದ ಶಿರಸಿ ಮೂಲದ ಯುವಕನೊಬ್ಬನ್ನು ಬಂಧಿಸಲಾಗಿದೆ.

ಶಿರಸಿ ತಾಲೂಕಿನ ಅರೆಕೊಪ್ಪದ ಸಯ್ಯದ್ ಇದ್ರೀಸ್ ಸಬಿ ಸಾಬ ಮುನ್ನಾ (25) ಬಂಧಿತ ಆರೋಪಿಯಾಗಿದ್ದಾನೆ. ಈ ಹಿಂದೆ ಇದೇ ವ್ಯಕ್ತಿಯನ್ನು ತನಿಖಾ ದಳವದರು ಮೂರು ಬಾರಿ ವಿಚಾರಣೆ ನಡೆಸಿದ್ದರು.

ಸಯ್ಯದ್ ಇದ್ರೀಸ್ ಮುನ್ನಾನನ್ನು ನಿನ್ನೆ ತಡರಾತ್ರಿ ಬಂಧಿಸಿದ್ದು, ನ್ಯಾಯಾಲಯಕ್ಕೆ ಹಾಜರುಪಡಿಸಿ ಇಂದು ಪಶ್ಚಿಮ ಬಂಗಾಳಕ್ಕೆ ಕರೆದೊಯ್ದಿದ್ದಾರೆ ಎಂದು ತಿಳಿದುಬಂದಿದೆ. ಪಶ್ಚಿಮ ಬಂಗಾಳ ಮೂಲದ ಎನ್.ಐ.ಎ. ವಿಭಾಗದವರು ಕಾರ್ಯಾಚರಣೆ ನಡೆಸಿದ್ದಾರೆ ಎನ್ನಲಾಗಿದೆ.

- Advertisement -

Latest News

error: Content is protected !!