Sunday, April 28, 2024
Homeತಾಜಾ ಸುದ್ದಿಹೋಂ ಕ್ವಾರಂಟೈನ್ ನಲ್ಲಿರುವವರೇ ಗಮನಿಸಿ : ಕೇಂದ್ರ ಸರ್ಕಾರದ ಪರಿಷ್ಕೃತ ಮಾರ್ಗಸೂಚಿ ಪ್ರಕಟ

ಹೋಂ ಕ್ವಾರಂಟೈನ್ ನಲ್ಲಿರುವವರೇ ಗಮನಿಸಿ : ಕೇಂದ್ರ ಸರ್ಕಾರದ ಪರಿಷ್ಕೃತ ಮಾರ್ಗಸೂಚಿ ಪ್ರಕಟ

spot_img
- Advertisement -
- Advertisement -

ನವದೆಹಲಿ : ಮಾರಕ ಕೊರೋನಾ ಪಾಸಿಟಿವ್ ಇರುವ ರೋಗಿಗಳು ಕ್ವಾರಂಟೈನ್​ನಲ್ಲಿರಬೇಕಾಗಿರುವುದು ಕಡ್ಡಾಯ. ಇದೀಗ ಭಾರತದಲ್ಲಿ ಕೊರೋನಾ ಕೇಸ್​ಗಳು ಹೆಚ್ಚಾಗುತ್ತಲೇ ಇರುವುದರಿಂದ ಕ್ವಾರಂಟೈನ್​ನಲ್ಲಿರುವವರಿಗೆ ಕೇಂದ್ರ ಆರೋಗ್ಯ ಇಲಾಖೆಯಿಂದ ಪರಿಷ್ಕೃತ ಮಾರ್ಗಸೂಚಿ ಬಿಡುಗಡೆ ಮಾಡಲಾಗಿದೆ. ಹೋಂ ಕ್ವಾರಂಟೈನ್​ನಲ್ಲಿ ಇರುವವರಿಗೆ ಪರಿಷ್ಕೃತ ಮಾರ್ಗಸೂಚಿ ಸಿದ್ಧಪಡಿಸಲಾಗಿದ್ದು, ನಿಯಮಗಳಲ್ಲಿ ಕೆಲವು ಬದಲಾವಣೆಗಳನ್ನು ಮಾಡಲಾಗಿದೆ.
ಕೇಂದ್ರದ ಆರೋಗ್ಯ ಇಲಾಖೆ ಬಿಡುಗಡೆಗೊಳಿಸಿರುವ ಪರಿಷ್ಕೃತ ಮಾರ್ಗಸೂಚಿಯಲ್ಲಿ ಪೂರ್ವ-ರೋಗಲಕ್ಷಣ ಇರುವವರಿಗೆ ಹೊಸ ನಿಯಮಗಳನ್ನು ನೀಡಲಾಗಿದೆ. ರೋಗ ಲಕ್ಷಣ ಹೊಂದಿರುವವರಿಗೆ ಹೋಂ ಐಸೋಲೇಷನ್​ಗೆ ಮನೆಯಲ್ಲಿ ಅಗತ್ಯ ಸೌಲಭ್ಯಗಳಿರಬೇಕು. ಕುಟುಂಬದ ಸಂಪರ್ಕಗಳನ್ನು ನಿರ್ಬಂಧಿಸಬೇಕು. ಪ್ರತ್ಯೇಕ ಶೌಚಾಲಯ ಇರಬೇಕು. ವಯಸ್ಕ ಆರೈಕೆದಾರರಿರಬೇಕು. ವಯಸ್ಸಾದವರು ಸೋಂಕಿತರ ಆರೈಕೆ ಮಾಡುವಂತಿಲ್ಲ. ದಿನದ 24 ಗಂಟೆಯೂ ಆರೈಕೆದಾರರು ಲಭ್ಯವಿರಬೇಕು. ಆರೈಕೆದಾರರು ಮತ್ತು ಆಸ್ಪತ್ರೆ ನಡುವೆ ಒಪ್ಪಂದ ಆಗಬೇಕು ಎಂದು ಸೂಚಿಸಲಾಗಿದೆ. ಇನ್ನು ರೋಗಿಯ ಆರೋಗ್ಯ ಮೇಲ್ವಿಚಾರಣೆ‌ ಬಗ್ಗೆ ಆರೈಕೆದಾರರು ಒಪ್ಪಿಕೊಳ್ಳಬೇಕು. ಕಣ್ಗಾವಲು ತಂಡ ನಿಯಮಿತವಾಗಿ ಜಿಲ್ಲಾ ಕಣ್ಗಾವಲು ಅಧಿಕಾರಿಗೆ ಮಾಹಿತಿ ತಿಳಿಸಬೇಕು. ವೈದ್ಯಕೀಯ ಮತ್ತು ವಸತಿ ಸೌಕರ್ಯಗಳ ಮೌಲ್ಯಮಾಪನದ ಆಧಾರದ ಮೇಲೆ ವೈದ್ಯರು ಹೋಂ ಐಸೋಲೇಷನ್ ನಿರ್ಧರಿಸಬೇಕು. ಹೆಚ್ಚುವರಿಯಾಗಿ, ರೋಗಿಯು ಸ್ವಯಂ-ಪ್ರತ್ಯೇಕತೆಯ ಕುರಿತಾದ ಜವಾಬ್ದಾರಿಯನ್ನು ಭರ್ತಿ ಮಾಡಬೇಕು.
ಮನೆಯ ಸಂಪರ್ಕ ತಡೆಯನ್ನು ಅನುಸರಿಸುವ ಮಾರ್ಗಸೂಚಿಗಳನ್ನು ಅನುಸರಿಸಬೇಕು. ಮನೆ ಪ್ರತ್ಯೇಕತೆಯ ಬಗ್ಗೆ ನಿಯಮಿತವಾಗಿ ವೈದ್ಯರ ತಂಡ ಮೇಲ್ವಿಚಾರಣೆ ಮಾಡಬೇಕು. ಅವರ ಡಿಸ್ಚಾರ್ಜ್ ಬಗ್ಗೆಯೂ ಮಾರ್ಗಸೂಚಿ ನಿಯಮಗಳನ್ನು ಅನುಸರಿಸಬೇಕು ಎಂದು ಮಾರ್ಗಸೂಚಿಯಲ್ಲಿ ಸೂಚಿಸಲಾಗಿದೆ….

- Advertisement -
spot_img

Latest News

error: Content is protected !!