Monday, April 29, 2024
Homeತಾಜಾ ಸುದ್ದಿಹಿಂದೂ ಸಂಪ್ರದಾಯಕ್ಕೆ ಮಾರು ಹೋದ ಮುಸ್ಲಿಂ ದಂಪತಿ: ಮತ್ತೆ ಮದುವೆಯಾದ 9 ಮಕ್ಕಳ‌ ಪೋಷಕರು ‌

ಹಿಂದೂ ಸಂಪ್ರದಾಯಕ್ಕೆ ಮಾರು ಹೋದ ಮುಸ್ಲಿಂ ದಂಪತಿ: ಮತ್ತೆ ಮದುವೆಯಾದ 9 ಮಕ್ಕಳ‌ ಪೋಷಕರು ‌

spot_img
- Advertisement -
- Advertisement -

ಲಖನೌ: ಹಿಂದೂ ಸಂಪ್ರದಾಯಕ್ಕೆ‌ ಮಾರು‌ ಹೋದ ಮುಸ್ಲಿಂ ದಂಪತಿ ತಾವು ಮದುವೆಯಾಗಿ‌‌ 18 ವರ್ಷದ ಬಳಿಕ ಮತ್ತೆ ಮದುವೆಯಾದ ಘಟನೆ‌ ಉತ್ತರಪ್ರದೇಶದ ವಾರಾಣಾಸಿಯಲ್ಲಿ ನಡೆದಿದೆ.

ಭಾರತ ಪ್ರವಾಸಕ್ಕೆ ಬಂದಿದ್ದ ಅಮೆರಿಕದ ಮುಸ್ಲಿಂ ದಂಪತಿ ಕಿಯಾಮಾ ದಿನ್ ಖಲೀಫಾ ಹಾಗೂ ಕೇಶಾ ಕಲೀಫಾ ಜೌನ್‍ಪುರದ ತ್ರಿಲೋಚನ್ ಮಹಾದೇವ ದೇವಸ್ಥಾನದಲ್ಲಿ ಹಿಂದೂ ಸಂಪ್ರದಾಯದ ಪ್ರಕಾರ ವಿವಾಹವಾಗಿ ತಮ್ಮ ಆಸೆ ಈಡೇರಿಸಿಕೊಂಡಿದ್ದಾರೆ.

ಈ ಕುರಿತು ಮಾತನಾಡಿದ ಅವರು, ‘ನಮ್ಮ ಮದುವೆಯಾಗಿ 18 ವರ್ಷಗಳಾಗಿವೆ. 9 ಮಕ್ಕಳು ಇದ್ದಾರೆ. ವಾರಣಾಸಿಯ ದೇವಾಲಯಗಳು ಹಾಗೂ ಇತರ ಧಾರ್ಮಿಕ ಸ್ಥಳಗಳಿಗೆ ಭೇಟಿ ನೀಡಿದಾಗ ಇಲ್ಲಿಯ ಸಂಸ್ಕೃತಿಗೆ ಆಕರ್ಷಿತರಾದೆವು. ಆದ್ದರಿಂದ ಇಲ್ಲಿಯ ಸಂಪ್ರದಾಯದಂತೆ ಮದುವೆಯಾಗಲು ನಿಶ್ಚಯಿಸಿದೆವು’ ಎಂದಿದ್ದಾರೆ. ಕಿಯಾಮಾ ದಿನ್ ಖಲೀಫಾ ಅವರ ಅಜ್ಜ ಭಾರತೀಯ ಮೂಲದ ಹಿಂದೂ ಆಗಿದ್ದರು. ನಂತರ ಇಸ್ಲಾಂ ಧರ್ಮಕ್ಕೆ ಕುಟುಂಬ ಮತಾಂತರಗೊಂಡಿತ್ತು.

- Advertisement -
spot_img

Latest News

error: Content is protected !!