Sunday, June 28, 2026
Homeತಾಜಾ ಸುದ್ದಿಜಾಮೀನು ನಿರೀಕ್ಷೆಯಲ್ಲಿದ್ದ ಮುರುಘಾ ಶ್ರೀಗಳಿಗೆ ಮತ್ತೆ ಮತ್ತೆ ನಿರಾಸೆ: ಜಾಮೀನು ಅರ್ಜಿ ವಿಚಾರಣೆಯನ್ನು ಸೆ.23 ಕ್ಕೆ ಮುಂದೂಡಿಕೆ

ಜಾಮೀನು ನಿರೀಕ್ಷೆಯಲ್ಲಿದ್ದ ಮುರುಘಾ ಶ್ರೀಗಳಿಗೆ ಮತ್ತೆ ಮತ್ತೆ ನಿರಾಸೆ: ಜಾಮೀನು ಅರ್ಜಿ ವಿಚಾರಣೆಯನ್ನು ಸೆ.23 ಕ್ಕೆ ಮುಂದೂಡಿಕೆ

- Advertisement -
- Advertisement -

ಚಿತ್ರದುರ್ಗ: ಪೋಕ್ಸೊ ಪ್ರಕರಣದಡಿ ಬಂಧನಕ್ಕೊಳಗಾಗಿ ಜಾಮೀನಿನ ನಿರೀಕ್ಷೆಯಲ್ಲಿರುವ ಮುರುಘಾ ಶ್ರೀಗಳಿಗೆ ಮತ್ತೆ ಮತ್ತೆ ನಿರಾಸೆಯಾಗುತ್ತಿದೆ. ಅವರ ಜಾಮೀನು ಅರ್ಜಿ ವಿಚಾರಣೆಯನ್ನು ಸೆ.23 ಕ್ಕೆ ಮುಂದೂಡಿ ನ್ಯಾಯಾಲಯ ಆದೇಶ ಹೊರಡಿಸಿದೆ.

ಅಪ್ರಾಪ್ತರ ಮೇಲೆ ಲೈಂಗಿಕ ದೌರ್ಜನ್ಯ ನಡೆಸಿರುವ ಆರೋಪದ ಮೇಲೆ ಜೈಲು ಪಾಲಾಗಿರುವ ಚಿತ್ರದುರ್ಗ ಮುರುಘಾ ಮಠದ ಶಿವಮೂರ್ತಿ ಶರಣರು ಜಾಮೀನು ಕೋರಿ ಅರ್ಜಿ ಸಲ್ಲಿಸಿದ್ದರು. ಈ ಕುರಿತು ಚಿತ್ರದುರ್ಗ 2 ನೇ ಹೆಚ್ಚುವರಿ ಸೆಷನ್ಸ್ ನ್ಯಾಯಾಲಯವು ಜಾಮೀನು ಅರ್ಜಿ ವಿಚಾರಣೆ ನಡೆಸಿದ್ದು, ಇದೀಗ ಅರ್ಜಿ ವಿಚಾರಣೆಯನ್ನು ಸೆ.23 ಕ್ಕೆ ಮುಂದೂಡಿ ಆದೇಶ ಹೊರಡಿಸಿದೆ.

- Advertisement -

Latest News

error: Content is protected !!