Sunday, May 19, 2024
Homeಇತರಉರ್ವ: ಆಧುನಿಕ ಮಾದರಿಯ ಒಳಾಂಗಣ ಕ್ರೀಡಾಂಗಣ ನಿರ್ಮಾಣ...!

ಉರ್ವ: ಆಧುನಿಕ ಮಾದರಿಯ ಒಳಾಂಗಣ ಕ್ರೀಡಾಂಗಣ ನಿರ್ಮಾಣ…!

spot_img
- Advertisement -
- Advertisement -

ಮಂಗಳೂರು: ಸ್ಮಾರ್ಟ್ ಸಿಟಿ ವತಿಯಿಂದ ನಗರದ ಉರ್ವ ಮಾರುಕಟ್ಟೆ ಸಮೀಪದ ಮಾರಿಗುಡಿ ಬಳಿ 1.13 ಎಕರೆ ಪ್ರದೇಶದಲ್ಲಿ ಸುಸಜ್ಜಿತ ಒಳಾಂಗಣ ಕ್ರೀಡಾಂಗಣ ನಿರ್ಮಾಣ ಕಾಮಗಾರಿ ಭರದಿಂದ ನಡೆಯುತ್ತಿದೆ.

ಜಿ+4 ಮಾದರಿಯಲ್ಲಿಒಂದು ಬೇಸ್‌ಮೆಂಟ್‌ನೊಂದಿಗೆ ಕ್ರೀಡಾಂಗಣ ನಿರ್ಮಾಣವಾಗಲಿದೆ.

ಸುಮಾರು 20.54 ಕೋ.ರೂ. ಅನುದಾನ ಮೀಸಲಿರಿಸಲಾಗಿದೆ. ಗುತ್ತಿಗೆದಾರರಿಗೆ 18 ತಿಂಗಳಲ್ಲಿ ಕಾಮಗಾರಿ ಮುಗಿಸಲು ಗಡುವು ನೀಡಲಾಗಿದೆ.ಬ್ಯಾಡ್ಮಿಂಟನ್ ಮತ್ತು ಕಬಡ್ಡಿ ಆಟಗಳನ್ನು ಗಮನ ದಲ್ಲಿರಿಸಿಕೊಂಡು ಅಧುನಿಕ ಶೈಲಿಯಲ್ಲಿಸ್ಟೇಡಿಯಂ ಸಿದ್ಧವಾಗಲಿದೆ.

ಪ್ರವೇಶಾಂಗಣ, ಕಬಡ್ಡಿ ಅಂಕಣ, ಸ್ಟೋರ್‌ರೂಂ, ಆಡಳಿತ ಕಚೇರಿ, ವಾಣಿಜ್ಯ ಮಳಿಗೆ ಕಟ್ಟಡದ ನೆಲ ಅಂತಸ್ತಿನಲ್ಲಿದ್ದು 2,385.97 ಚ.ಮೀ. ವಿಸ್ತೀರ್ಣದಲ್ಲಿ ಕ್ರೀಡಾಂಗಣ ನಿರ್ಮಾಣವಾಗಲಿದೆ.
ಮೊದಲ ಮಹಡಿಯು 1,121 ಚ.ಮೀ.ಹೊಂದಿದೆ. ಅಲ್ಲಿ ಪ್ರೇಕ್ಷಕರ ಗ್ಯಾಲರಿ, ವಿಐಪಿ ಲಾಂಜ್ ಇರಲಿದ್ದು, ಎರಡನೇ ಮಹಡಿಯು 820.12 ಚ.ಮೀ.ನಲ್ಲಿ ಒಳಾಂಗಣ ಆಟಗಳಿಗೆ ಸ್ಥಳ, ಜಿಮ್ನಾಶಿಯಂ, ಪ್ಯಾಸೇಜ್ ಒಳಗೊಂಡಿದೆ. ಮೂರನೇ ಮಹಡಿಯಲ್ಲಿ ಸ್ಟೇಡಿಯಂ ಪ್ರದೇಶ, ಮೆಡಿಕಲ್ ರೂಮ್, ಫಿಸಿಯೋಥೆರಪಿ, ಸ್ಟೋರ್‌ರೂಮ್, ಬಟ್ಟೆ ಬದಲಾಯಿಸುವ ಕೊಠಡಿ ಸಹಿತ 1,739.68 ಚ.ಮೀ. ವಿಸ್ತೀರ್ಣದಲ್ಲಿ ನಿರ್ಮಾಣವಾಗಲಿದೆ. ನಾಲ್ಕನೇ ಮಹಡಿಯಲ್ಲಿ ಪ್ರೇಕ್ಷಕರ ಗ್ಯಾಲರಿ, ಡಾರ್ಮಿಟರಿ, ಶೌಚಗೃಹಗಳು ಇರಲಿವೆ.

ಅದಲ್ಲದೆ ಪ್ರೇಕ್ಷಕರಿಗೆ ಕುಳಿತು ವೀಕ್ಷಿಸಲು ಗ್ಯಾಲರಿ, ಅಸೋಸಿಯೇಶನ್‌ಗಳಿಗೆ ಕಚೇರಿ, ಕೆಫೆಟೇರಿಯಾ, ವಾಣಿಜ್ಯ ವ್ಯವಹಾರ ಮಳಿಗೆಗಳು ,ಕಬಡ್ಡಿ-ಬ್ಯಾಡ್ಮಿಂಟನ್ ಕೋರ್ಟ್, ಸಿಂಥೆಟಿಕ್ ಮ್ಯಾಟ್, ಕ್ರೀಡಾಪಟುಗಳಿಗೆ ಸಕಲ ವ್ಯವಸ್ಥೆ,ಹಾಗೂ 103 ಕಾರುಗಳ ಪಾರ್ಕಿಂಗ್ ವ್ಯವಸ್ಥೆಯೂ ಇರಲಿದೆ

- Advertisement -
spot_img

Latest News

error: Content is protected !!