- Advertisement -
- Advertisement -
ಮಂಗಳೂರು; ನಾಪತ್ತೆಯಾಗಿದ್ದ ವ್ಯಕ್ತಿಯ ಶವ ಬಾವಿಯಲ್ಲಿ ಪತ್ತೆಯಾಗಿರುವ ಘಟನೆ ಮುಲ್ಕಿ ಸಮೀಪದ ಕೊಲ್ಲೂರು ಪದವಿನಲ್ಲಿ ನಡೆದಿದೆ. ಆನಂದ ಕೊಟ್ಯಾನ್ (65) ಮೃತ ವ್ಯಕ್ತಿ.
ಆನಂದ್ ಕೋಟ್ಯಾನ್ ಕಳೆದ ಹಲವು ದಿನಗಳ ಹಿಂದೆ ನಾಪತ್ತೆಯಾಗಿದ್ದ ಮುಲ್ಕಿ ಸಮೀಪದ ಕೊಲ್ಲೂರು ಪದವು ನಿವಾಸಿ ಆನಂದ ಕೊಟ್ಯಾನ್ (65) ಎಂಬವರ ಮೃತದೇಹ ಬಾವಿಯಲ್ಲಿ ಕೊಳೆತ ಸ್ಥಿತಿಯಲ್ಲಿ ಪತ್ತೆಯಾಗಿದೆ.ಮಾಹಿತಿ ಪಡೆದ ತಕ್ಷಣ ಮುಲ್ಕಿ ಪೊಲೀಸರು ಸ್ಥಳಕ್ಕೆ ಆಗಮಿಸಿ ಆಸಿಫ್ ಆಪದ್ಬಾಂಧವ ಅವರ ಸಹಕಾರದೊಂದಿಗೆ ಶವವನ್ನು ಬಾವಿಯಿಂದ ಮೇಲಕ್ಕೆ ಎತ್ತಲಾಯಿತು.ಕಾರ್ಯಾಚರಣೆಯಲ್ಲಿ ಮುಲ್ಕಿ ಪೊಲೀಸರು, ಸಮಾಜಸೇವಕ ಅದ್ದಿ ಬೊಳ್ಳೂರು, ಮುನೀರ್ ಮಲ್ಲೂರು ಮತ್ತು ಸ್ಥಳೀಯರು ಸಹಕರಿಸಿದರು.
- Advertisement -