- Advertisement -
- Advertisement -
ಮಂಗಳೂರು: ಖಾಸಗಿ ಹೋಟೆಲ್ ನ ಈಜು ಕೊಳದಲ್ಲಿ ಮೃತದೇಹ ಪತ್ತೆಯಾಗಿದೆ.ಮಂಗಳೂರಿನ ಮೋತಿ ಮಹಲ್ ಹೋಟೆಲ್ ನ ಈಜು ಕೊಳದಲ್ಲಿ ಮೃತ ದೇಹ ಪತ್ತೆಯಾಗಿದ್ದು, ತಿರುವನಂತಪುರಂ ಮೂಲದ ಬ್ಯಾಂಕ್ ಅಧಿಕಾರಿ ಮುಳುಗಿ ಸಾವನ್ನಪ್ಪಿದ್ದಾರೆ.
ಯೂನಿಯನ್ ಬ್ಯಾಂಕ್ ಅಧಿಕಾರಿ ಯಾಗಿರುವ ಗೋಪು ಆರ್. ನಾಯರ್ ನಿನ್ನೆ ಮಂಗಳೂರಿಗೆ ಬಂದು ಮೋತಿ ಮಹಲ್ ಹೊಟೇಲ್ ನಲ್ಲಿ ತಂಗಿದ್ದರು.ನಿನ್ನೆ ಸಂಜೆ ನಾಲ್ಕು ಗಂಟೆಗೆ ಹೋಟೆಲ್ ರೂಮ್ ನಿಂದ ಮೃತ ಬ್ಯಾಂಕ್ ಅಧಿಕಾರಿ ಹೊರ ಹೋಗಿದ್ದು, ಮದ್ಯ ಸೇವಿಸಿ ಸ್ವಿಮ್ಮಿಂಗ್ ಪೂಲ್ ಗೆ ಇಳಿದು ಮೇಲೆ ಬರಲಾರದೇ ಮೃತಪಟ್ಟಿರುವ ಶಂಕೆ ವ್ಯಕ್ತವಾಗಿದೆ.
ಸ್ಥಳಕ್ಕೆ ಪಾಂಡೇಶ್ವರ ಠಾಣೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದು, ಮೃತದೇಹವನ್ನು ಈಜು ಕೊಳದಿಂದ ಹೊರ ತೆಗೆಯಲಾಗಿದೆ.
- Advertisement -