Sunday, June 14, 2026
Homeಕರಾವಳಿಎರಡು ತಿಂಗಳ ಹಿಂದೆ ಕಡಬದಿಂದ ನಾಪತ್ತೆಯಾಗಿದ್ದ ಬಾಲಕಿ ತಮಿಳುನಾಡಿನಲ್ಲಿ ಪತ್ತೆ

ಎರಡು ತಿಂಗಳ ಹಿಂದೆ ಕಡಬದಿಂದ ನಾಪತ್ತೆಯಾಗಿದ್ದ ಬಾಲಕಿ ತಮಿಳುನಾಡಿನಲ್ಲಿ ಪತ್ತೆ

- Advertisement -
- Advertisement -

ಕಡಬ: ಎರಡು ತಿಂಗಳು ಕಡಬದಿಂದ ನಾಪತ್ತೆಯಾಗಿದ್ದ ಅಪ್ರಾಪ್ತ ವಯಸ್ಸಿನ ಬಾಲಕಿಯನ್ನು ತಮಿಳುನಾಡಿನಲ್ಲಿ ಪತ್ತೆ ಹಚ್ಚುವಲ್ಲಿ ಪೊಲೀಸರು ಯಶಸ್ವಿಯಾಗಿದ್ದಾರೆ.

ಡಿಸೆಂಬರ್ 23 ರಂದು ಮರ್ಧಾಳ ಶಾಲೆಗೆ ಹೋಗುವುದಾಗಿ ತಿಳಿಸಿ ಮನೆಯಿಂದ ತೆರಳಿ ನಾಪತ್ತೆಯಾಗಿದ್ದ ಐತ್ತೂರು ಗ್ರಾಮದ ಸಿಆರ್ ಸಿ ಕಾಲನಿಯ ಬಾಲಕಿ ತಮಿಳುನಾಡಿನಲ್ಲಿರುವ ಬಗ್ಗೆ ಲೊಕೇಷನ್ ಆಧಾರದಲ್ಲಿ ಪೊಲೀಸರು ಪತ್ತೆ ಹಚ್ಚಿದ್ದಾರ. ಸುಳ್ಯ ಆರಕ್ಷಕ ಠಾಣೆಯ ಅಪರಾಧ ವಿಭಾಗದ ಎಸ್‌ಐ ರತನ್‌ಕುಮಾರ್‌ ಹಾಗೂ ಕಡಬ ಠಾಣೆ ಸಿಬ್ಬಂದಿ ಮಂಜುನಾಥ್‌ ಅವರು ತಮಿಳುನಾಡಿಗೆ ತೆರಳಿ ದ.ಕ. ಜಿಲ್ಲಾ ಅಪರಾಧ ಪತ್ತೆ ದಳದ ಇನ್ಸ್ಪೆಕ್ಟರ್‌ಗಳಾದ ರವಿ ಬಿ.ಎಸ್‌., ಚೆಲುವರಾಜ್‌, ಗಣಕ ಯಂತ್ರ ವಿಭಾಗದ ಸಿಬ್ಬಂದಿಗಳಾದ ದಿವಾಕರ್‌ ಹಾಗೂ ಸಂಪತ್‌ ಅವರ ಸಹಕಾರದೊಂದಿಗೆ ಬಾಲಕಿಯನ್ನು ಪತ್ತೆ ಮಾಡಿ ಕಡಬ ಠಾಣೆಗೆ ಕರೆ ತಂದಿದ್ದಾರೆ.

ಬಾಲಕಿಯನ್ನು ಆಕೆಯ ಹೆತ್ತವರ ಜತೆಗೆ ಮನೆಗೆ ಕಳುಹಿಸಿಕೊಡಲಾಗಿದೆ ಎಂದು ಕಡಬ ಠಾಣಾ ಎಸ್‌ಐ ರುಕ್ಮ ನಾಯ್ಕ್‌ ತಿಳಿಸಿದ್ದಾರೆ.

- Advertisement -

Latest News

error: Content is protected !!