Sunday, June 28, 2026
Homeತಾಜಾ ಸುದ್ದಿಕನಸಿನ ಮನೆ ಕಟ್ಟಲು ಟ್ರಂಕ್ ನಲ್ಲಿ ಹಣ ಕೂಡಿಟ್ಟ ಉದ್ಯಮಿ: ಕೆಲವು ತಿಂಗಳ ಬಳಿಕ ತೆರೆದು...

ಕನಸಿನ ಮನೆ ಕಟ್ಟಲು ಟ್ರಂಕ್ ನಲ್ಲಿ ಹಣ ಕೂಡಿಟ್ಟ ಉದ್ಯಮಿ: ಕೆಲವು ತಿಂಗಳ ಬಳಿಕ ತೆರೆದು ನೋಡಿದಾಗ ಕಾದಿತ್ತು ಶಾಕ್….

- Advertisement -
- Advertisement -

ಹೈದರಾಬಾದ್ : ತನ್ನ ಕನಸಿನ ಮನೆ ಕಟ್ಟಿಕೊಳ್ಳಬೇಕು ಅಂತಾ ಆಂಧ್ರಪ್ರದೇಶದ ಕೃಷ್ಣ ಜಿಲ್ಲೆಯ ಮೈಲಾವರಂ ನಿವಾಸಿ ಉದ್ಯಮಿ ಬಿಜ್ಲಿ ಚಾಮಲಯ್ಯ ಬಹು ವರ್ಷದಿಂದ ಕನಸು ಕಾಣುತ್ತಿದ್ದರು. ಅವರು ಹಂದಿ ಮಾಂಸ ಮಾರಾಟದ ಕೆಲಸ ಮಾಡುತ್ತಿದ್ದರು. ಹೀಗೆ ವರ್ಷಾನುಗಟ್ಟಲೆ ಸಂಪಾದಿಸಿದಂತ ಹಣವನ್ನು ಮಾತ್ರ ಬ್ಯಾಂಕ್ ಖಾತೆಯಲ್ಲಿ ಇಟ್ಟಿರಲಿಲ್ಲ. ಬದಲಾಗಿ ಟ್ರಂಕ್ ಒಂದರಲ್ಲಿ ಭದ್ರವಾಗಿರುತ್ತದೆ ಅಂತ ಇಟ್ಟಿದ್ದಾರೆ

ಕೊನೆಗೆ ಮೊನ್ನೆಷ್ಟೇ ಮನೆ ಕಟ್ಟೋ ನಿರ್ಧಾರಕ್ಕೆ ಬಂಧಂತ ಆತ, ಟ್ರಂಕ್ ನಲ್ಲಿ ಕಷ್ಟ ಪಟ್ಟು ದುಡಿದು ಕೂಡಿಟ್ಟಿದ್ದಂತ ಹಣ ಎಷ್ಟು ಇದೆ ಎಂಬುದನ್ನು ಏಣಿಸೋಕೆ ಓಪನ್ ಮಾಡಿದ್ದಾನೆ. ಆದ್ರೇ.. ಟ್ರಂಕ್ ತಳ ತೂತಾಗಿದ್ದರಿಂದ ಅಲ್ಲಿಂದ ಬಂದಿರುವಂತ ಗೆದ್ದಲು ಹುಳುಗಳು, ಕಂತೆ ಕಂತೆ ನೋಟುಗಳಿಗೆ ಗೆದ್ದಲು ಬಂದಿವೆ.

ಗೆದ್ದಲು ಬಂದಿರೋದನ್ನು ನೋಡಿದ ಚಾಮಲಯ್ಯನಿಗೆ ಶಾಕ್ ಆಗಿದೆ. ಗೆದ್ದಲು ಬಂದ ನೋಟುಗಳನ್ನು ಬಿಡಿಸಿ ತೆಗೆದು ನೋಡಿದ್ರೇ.. ಚೂರು ಚೂರು ಆಗಿದ್ದಾವೆ. ಇದರಿಂದ ಆಘಾತಕ್ಕೆ ಒಳಗಾದಂತ ಚಾಮಲಯ್ಯ ಏನ್ ಮಾಡೋದು ಅಂತ ಗೊತ್ತಾಗದೇ, ಸುಮಾರು ಐದು ಲಕ್ಷ ರೂಪಾಯಿಗಳನ್ನು ಹಾಗೇ ಇಟ್ಟಿದ್ದಾನೆ.

ಬೇರೆ ದಾರಿ ಕಾಣದೇ ಆ ನೋಟುಗಳನ್ನು ಮಕ್ಕಳಿಗೆ ಆಟ ಆಡೋದಕ್ಕೆ ನೀಡಿದ್ದಾನೆ. ಮಕ್ಕಳಲ್ಲಿ ಚೂರು ಪಾರು ಆದಂತ ನೋಟನ್ನು ನೋಡಿದಂತ ಪೋಷಕರು, ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಆ ನೋಟುಗಳ ಮೂಲ ಎಲ್ಲಿಂದ ಎಂಬುದನ್ನು ತನಿಖೆ ನಡೆಸಿದಂತ ಪೊಲೀಸರಿಗೆ ಚಾಮಲಯ್ಯನ ಕಣ್ಣೀರ ಕಥೆ ಗೊತ್ತಾಗಿದೆ.

- Advertisement -

Latest News

error: Content is protected !!