Thursday, November 26, 2026
Homeಕರಾವಳಿಇಸ್ರೇಲ್‌ನಲ್ಲಿ ಮೃತಪಟ್ಟ ಮಂಗಳೂರಿನ ವ್ಯಕ್ತಿಯ ಅಂತ್ಯಕ್ರಿಯೆ ನೆರವೇರಿಕೆ

ಇಸ್ರೇಲ್‌ನಲ್ಲಿ ಮೃತಪಟ್ಟ ಮಂಗಳೂರಿನ ವ್ಯಕ್ತಿಯ ಅಂತ್ಯಕ್ರಿಯೆ ನೆರವೇರಿಕೆ

- Advertisement -
- Advertisement -

ಮಂಗಳೂರು: ಇಸ್ರೇಲ್‌ನಲ್ಲಿ ನಿಗೂಢವಾಗಿ ಮೃತಪಟ್ಟ ಮಂಗಳೂರಿನ ಶಕ್ತಿನಗರದ ಕಾರ್ಮಿಕ ಕಾಲನಿ ನಿವಾಸಿ ಶಡ್ರಾಕ್ ಇಮ್ಯಾನುಯೆಲ್ (ಮನು) ಅವರ ಅಂತ್ಯಕ್ರಿಯೆ ಬುಧವಾರ ನಗರದ ಗೋರಿಗುಡ್ಡೆ ಸ್ಮಶಾನದಲ್ಲಿ ನೆರವೇರಿತು.

ಅಕ್ಟೋಬರ್ 16ರಂದು ರಾತ್ರಿ 8.49ಕ್ಕೆ ಪತ್ನಿಗೆ ಸಂದೇಶ ಕಳುಹಿಸಿದ್ದ ಶಡ್ರಾಕ್, ಅದಕ್ಕೂ ಮೊದಲು ಕುಟುಂಬಸ್ಥರೊಂದಿಗೆ ವಿಡಿಯೋ ಕರೆಯಲ್ಲಿ ಮಾತನಾಡಿದ್ದರು. ಬಳಿಕ ಅವರ ಸಂಪರ್ಕಕ್ಕೆ ಸಿಗದ ಕಾರಣ ಪತ್ನಿ ಆತಂಕಗೊಂಡು ಪೊಲೀಸ್ ಇಲಾಖೆ, ಸಂಸದರು ಹಾಗೂ ಸಚಿವರ ನೆರವು ಕೋರಿದ್ದರು. ಅಕ್ಟೋಬರ್ 21ರಂದು ಇಸ್ರೇಲ್‌ನಲ್ಲಿರುವ ಭಾರತೀಯ ರಾಯಭಾರ ಕಚೇರಿಗೂ ಇಮೇಲ್ ಮೂಲಕ ದೂರು ಸಲ್ಲಿಸಿ, ಪತ್ತೆಹಚ್ಚುವಂತೆ ಮನವಿ ಮಾಡಿದ್ದರು. ನಂತರ ರಾಯಭಾರ ಕಚೇರಿಯಿಂದ ಕುಟುಂಬಕ್ಕೆ ದೊರೆತ ದಾಖಲೆಗಳ ಪ್ರಕಾರ, ಶಡ್ರಾಕ್ ಅಕ್ಟೋಬರ್ 19ರಂದು ಮೃತಪಟ್ಟಿರುವುದು ತಿಳಿದುಬಂದಿತ್ತು. ಸುಮಾರು ಒಂದು ತಿಂಗಳ ಬಳಿಕ ಅವರ ಮೃತದೇಹವನ್ನು ಭಾರತಕ್ಕೆ ತರಲಾಗಿದ್ದು, ನವೆಂಬರ್ 9ರಂದು ರಾಯಭಾರ ಕಚೇರಿಯು ಮೃತದೇಹವನ್ನು ತಾಯ್ನಾಡಿಗೆ ತರಲು ಎನ್‌ಒಸಿ ನೀಡಿತ್ತು.

ಶಡ್ರಾಕ್ ಅವರ ಸಾವಿನ ಬಗ್ಗೆ ಅನುಮಾನ ವ್ಯಕ್ತಪಡಿಸಿರುವ ಕುಟುಂಬಸ್ಥರು, ಸಾವಿನ ಸುತ್ತಲಿನ ಸನ್ನಿವೇಶಗಳ ಕುರಿತು ಸಮಗ್ರ ತನಿಖೆ ನಡೆಸುವಂತೆ ಒತ್ತಾಯಿಸಿದ್ದಾರೆ. ಈ ನಿಟ್ಟಿನಲ್ಲಿ ಇಸ್ರೇಲಿ ಅಧಿಕಾರಿಗಳೊಂದಿಗೆ ಸಮನ್ವಯ ಸಾಧಿಸುವಂತೆ ಸಂಬಂಧಪಟ್ಟ ಅಧಿಕಾರಿಗಳಿಗೆ ಮನವಿ ಮಾಡಿದ್ದಾರೆ.

2025ರ ಮೇ 16ರಂದು ಮಂಗಳೂರಿನ ನೇಮಕಾತಿ ಏಜೆನ್ಸಿಯೊಂದರ ಮೂಲಕ ಉದ್ಯೋಗ ವೀಸಾದಲ್ಲಿ ಇಸ್ರೇಲ್‌ಗೆ ತೆರಳಿದ್ದ ಶಡ್ರಾಕ್, ಟೆಲ್ ಅವಿವ್‌ನ ಕಂಪನಿಯೊಂದರಲ್ಲಿ ಕೆಲಸ ಮಾಡುತ್ತಿದ್ದರು. ಬಳಿಕ ನೊಫ ಹಗಲಿಲ್‌ನ ಯುಸಿಟಿ ಫ್ಲೂಯಿಡ್ ಸೊಲ್ಯೂಷನ್ಸ್ ಸಂಸ್ಥೆಯಲ್ಲಿ ಪ್ರೊಡಕ್ಷನ್ ಮ್ಯಾನೇಜರ್ ಆಗಿ ಕಾರ್ಯನಿರ್ವಹಿಸುತ್ತಿದ್ದರು.

- Advertisement -

Latest News

error: Content is protected !!