
ಬೆಳ್ತಂಗಡಿ : ರಾಮೇಶ್ವರಂ ನಲ್ಲಿರುವ ಡಾ. ಎ.ಪಿ.ಜೆ., ಅಬ್ದುಲ್ಕಲಾಂ ಅಂತಾರಾಷ್ಟ್ರೀಯ ಪ್ರತಿಷ್ಠಾನದ ವತಿಯಿಂದ ಧರ್ಮಸ್ಥಳದ ಮಂಜೂಷಾ ವಾಹನಗಳ ಮ್ಯೂಸಿಯಂನಲ್ಲಿ ಪ್ರದಶ೯ನಕ್ಕೆ ಇಡಲು ಅಬ್ದುಲ್ ಕಲಾಂ ಬಳಸಿದ ಟಾಟಾನಾನೋ ಕಾರು ಮತ್ತು ಅದರ ದಾಖಲೆ ಪತ್ರಗಳನ್ನು ನ.25 ರಂದು ಹೆಗ್ಗಡೆಯವರಿಗೆ ಅರ್ಪಿಸಲಾಯಿತು.
ಡಾ. ಎ.ಪಿ.ಜೆ., ಅಬ್ದುಲ್ಕಲಾಂ ಧಮ೯ಸ್ಥಳಕ್ಕೆ ಭೇಟಿ ನೀಡಿದ ಸಂದರ್ಭವನ್ನು ಸ್ಮರಿಸಿದ ಹೆಗ್ಗಡೆಯವರು, ಅವರ ಸರಳ ವ್ಯಕ್ತಿತ್ವ, ಸವಧರ್ಮಸಮನ್ವಯ ನೀತಿ, ದೇವರ ಮೇಲಿನ ದೃಢಭಕ್ತಿ ಮತ್ತು ವಿಶ್ವಾಸವನ್ನು ನೆನೆಪಿಸಿಕೊಂಡರು. ಮಕ್ಕಳೊಂದಿಗೆ ಮಕ್ಕಳಾಗಿ ಮುಕ್ತವಾಗಿ ಬೆರೆತ ಸಂದಭ೯ ಮತ್ತು ಸರಳ ವ್ಯಕ್ತಿತ್ವವನ್ನು ಮರೆಯಲು ಸಾಧ್ಯವೇ ಇಲ್ಲ ಎಂದು ಹೆಗ್ಗಡೆಯವರು ಹೇಳಿದರು.
ಅವರ ಸ್ಮರಣಾರ್ಥ ತನಗೆ ನೀಡಿದ ಎರಡು ಅಮೂಲ್ಯ ವಸ್ತುಗಳಾದ ಟಾಟಾನಾನೋ ಕಾರು ಮತ್ತು ಅಪೂವ೯ ಪೆನ್ನು ಬಗ್ಗೆ ಹೆಗ್ಗಡೆಯವರು ಕೃತಜ್ಞತೆ ವ್ಯಕ್ತಪಡಿಸಿದರು. ಡಾ. ಎ.ಪಿ.ಜೆ., ಅಬ್ದುಲ್ಕಲಾಂ ಅಂತಾರಾಷ್ಟ್ರೀಯ ಪ್ರತಿಷ್ಠಾನದ ಅಧ್ಯಕ್ಷರಾದ ಡಾ. ಎ.ಪಿ.ಜೆ.ಎಂ.. ನಝೀಮಾ ಮರೈಕಾಯಲ್, ಕಾರ್ಯದರ್ಶಿ ಎ.ಪಿ.ಜೆ.ಎಂ.. ಜೈನೀಲಾಭಿ ಡೀಮ್ ಮತ್ತು ಸಹಸಂಸ್ಥಾಪಕ ಎ.ಪಿ.ಜೆ.ಎಂ.. ಶೇಖ್ಸಲೀಂ ಉಪಸ್ಥಿತರಿದ್ದು ಪ್ರತಿಷ್ಠಾನದ ಪರವಾಗಿ ಟಾಟಾನಾನೋ ಕಾರು ಮತ್ತು ಪೆನ್ನು ಪೂಜ್ಯ ಹೆಗ್ಗಡೆಯವರಿಗೆ ದಾಖಲೆ ಸಹಿತ ಅರ್ಪಿಸಿದರು.
ಹೆಗ್ಗಡೆಯವರು ಪ್ರತಿಷ್ಠಾನಕ್ಕೆ ಕೃತಜ್ಞತೆ ವ್ಯಕ್ತಪಪಡಿಸಿ ದಾನಿಗಳನ್ನು ಗೌರವಿಸಿದರು. ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಸಿ.ಇ.ಒ. ಅನಿಲ್ ಕುಮಾರ್ ಸ್ವಾಗತಿಸಿ ಕಾಯ೯ಕ್ರಮ ನಿವ೯ಹಿಸಿದರು.


