Saturday, June 6, 2026
HomeUncategorizedಕಡಬ:ಕಾಣಿಯೂರಿನ ಬೈತಡ್ಕದಲ್ಲಿ ಕಾರು ಹೊಳೆಗೆ ಬಿದ್ದು ಇಬ್ಬರು ನಾಪತ್ತೆ ಪ್ರಕರಣ: ಓರ್ವ ಯುವಕ‌ ನಾಪತ್ತೆಯಾಗಿರುವ ಬಗ್ಗೆ...

ಕಡಬ:ಕಾಣಿಯೂರಿನ ಬೈತಡ್ಕದಲ್ಲಿ ಕಾರು ಹೊಳೆಗೆ ಬಿದ್ದು ಇಬ್ಬರು ನಾಪತ್ತೆ ಪ್ರಕರಣ: ಓರ್ವ ಯುವಕ‌ ನಾಪತ್ತೆಯಾಗಿರುವ ಬಗ್ಗೆ ವಿಟ್ಲ ಪೊಲೀಸ್ ಠಾಣೆಯಲ್ಲಿ ಪ್ರಕರಣ

- Advertisement -
- Advertisement -

ಕಡಬ:ಕಾಣಿಯೂರು ಸಮೀಪದ ಬೈತಡ್ಕ ಎಂಬಲ್ಲಿ ಕಾರು ಹೊಳೆಗೆ ಬಿದ್ದು ಇಬ್ಬರು ನಾಪತ್ತೆಯಾದ ಬೆನ್ನಲ್ಲೇ ಈ ಪೈಕಿ ಓರ್ವ ನಾಪತ್ತೆಯಾಗಿರುವ ಬಗ್ಗೆ ವಿಟ್ಲ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಧನುಷ್ ಅವರ ತಂದೆ ಚೋಮ ನಾಯ್ಕ ಅವರು ವಿಟ್ಲ ಪೊಲೀಸ್ ಠಾಣೆಯಲ್ಲಿ ದುರು ದಾಖಲಿಸಿದ್ದಾರೆ. ವಿಟ್ಲ ಮುಡ್ನೂರು ಗ್ರಾಮದ ಶಾಂತಿಯಡ್ಕ ನಿವಾಸಿ ಧನುಷ್‌ ಎಂಬಾತನು  ಜುಲೈ 9 ರಂದು ರಾತ್ರಿ ಬಂಟ್ವಾಳ ತಾಲೂಕು ವಿಟ್ಲ ಪಡ್ನೂರು ಗ್ರಾಮದ ಶಾಂತಿಯಡ್ಕ  ಎಂಬಲ್ಲಿರುವ ಮನೆಯಿಂದ ಮಾರುತಿ ಕಾರಿನಲ್ಲಿ ವಿಟ್ಲ, ಕಡಂಬು ಕಡೆಗೆ ಹೋಗಿ ಬರುವುದಾಗಿ ಹೇಳಿ ಹೋಗಿದ್ದು. ನಂತರ ಮೊಬೈಲ್‌ ಕೂಡಾ ಸ್ವಿಚ್‌ಆಫ್‌ಆಗಿದೆ.

ಈವರೆಗೆ ಮಗ ಮನೆಗೆ ಬಂದಿರುವುದಿಲ್ಲ. ನಂತರ ಕಾಣೆಯಾದ ಮಗ ಧನುಷನ ಬಗ್ಗೆ ಸಂಬಂಧಿಕರಲ್ಲಿ, ಸ್ನೇಹಿತರಲ್ಲಿ ವಿಚಾರಿಸಿದಾಗ ಆತನ ಬಗ್ಗೆ ಯಾವುದೇ ಮಾಹಿತಿ ದೊರೆತಿರುವುದಿಲ್ಲ. ಮನೆಗೂ ಬಾರದೆ, ಸಂಬಂಧಿಕರ ಹಾಗೂ ಗೆಳೆಯರ ಮನೆಗೂ ಹೋಗದೆ ಕಾಣೆಯಾಗಿರುವ ಮಗ ಧನುಷ್ ನನ್ನು ಪತ್ತೆ ಮಾಡಿಕೊಡಬೇಕೆಂದು ವಿಟ್ಲ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ.

- Advertisement -

Latest News

error: Content is protected !!