Thursday, May 23, 2024
Homeತಾಜಾ ಸುದ್ದಿಬೈತಡ್ಕ:ಅಪಘಾತವಾಗಿದೆ ಅಂತ ಕಾಲ್‌ ಮಾಡಿದ್ದು 11.52 ಕ್ಕೆ: ಆದರೆ ಕಾರು ಬಿದ್ದದ್ದು 12. 02 ಕ್ಕೆ:...

ಬೈತಡ್ಕ:ಅಪಘಾತವಾಗಿದೆ ಅಂತ ಕಾಲ್‌ ಮಾಡಿದ್ದು 11.52 ಕ್ಕೆ: ಆದರೆ ಕಾರು ಬಿದ್ದದ್ದು 12. 02 ಕ್ಕೆ: ದೂರವಾಣಿ ಕರೆಯ ಸುತ್ತ ಅನುಮಾನದ ಹುತ್ತ

spot_img
- Advertisement -
- Advertisement -

ಬೈತಡ್ಕ: ಬೈತಡ್ಕ ಪ್ರಕರಣ ಕುರಿತು ಮೂಡಿರುವ ದೂರವಾಣಿ ಕರೆ ಸಮಯದ ಗೊಂದಲಕ್ಕೆ ಸಂಬಂಧಿಸಿದಂತೆ ಕಾರು ಬಿದ್ದ ಸಮಯ ಹಾಗೂ ಯುವಕರಿಬ್ಬರು ಕರೆ ಮಾಡಿರುವ ಸಮಯದ ಬಗ್ಗೆ ನಿಖರ ಮಾಹಿತಿ ಸಂಗ್ರಹಿಸಲಾಗಿದೆ.

ನಾಪತ್ತೆಯಾಗಿರುವ ಯುವಕರನ್ನು ಬಂಟ್ವಾಳ ತಾಲೂಕಿನ ವಿಟ್ಲಮುಳ್ಳೂರು ಗ್ರಾಮದ ಕುಂಡಡ್ಕ-ಸಾಂತ್ಯಡ್ಕ ನಿವಾಸಿ ಚೋಮ ನಾಯ್ಕ ಅವರ ಪುತ್ರ ಧನುಷ್ (25) ಹಾಗೂ ವಿಟ್ಲ ಕನ್ಯಾನ ನಿವಾಸಿ ಧನುಷ್ (21) ಎಂದು ಗುರುತಿಸಲಾಗಿದೆ.

ಸವಣೂರಿನಲ್ಲಿ ಪೊಲೀಸ್ ಚೆಕ್ ಪೋಸ್ಟ್ನಲ್ಲಿ ರಾತ್ರಿ 11.53 ಕ್ಕೆ ತಪಾಸಣೆಗೆ ಒಳಪಟ್ಟು ಮುಂದೆ ಸಾಗಿ 12. 02 ನಿಮಿಷಕ್ಕೆ ಕಾರು ಸೇತುವೆಗೆ ಢಿಕ್ಕಿಯಾಗಿ ತಡೆಗೋಡೆ ಮುರಿದು ಕೆಳಕ್ಕೆ ಬಿದ್ದಿದೆ. ನಾಪತ್ತೆಯಾಗಿರುವ ಪೈಕಿ ವಿಟ್ಲ ಕನ್ಯಾನ ನಿವಾಸಿ ಧನುಷ್ ಕುಂಡಡ್ಕ-ಸಾಂತ್ಯಡ್ಕ ನಿವಾಸಿ ಧನುಷ್ ಅವರ ತಾಯಿಗೆ ಕರೆ ಮಾಡಿ ನಮ್ಮ ಕಾರು ಹಳೆಯಂಗಡಿಯಲ್ಲಿ ಲಾರಿಗೆ ಢಿಕ್ಕಿಯಾಗಿದೆ, ನಾವು ಬದುಕಿ ಉಳಿದಿರುವುದೇ ಹೆಚ್ಚು, ಏನೂ ತೊಂದರೆಯಿಲ್ಲ, ನಾವು ಮನೆಗೆ ಮುಟ್ಟುವಾಗ ಬೆಳಿಗ್ಗೆ ಆಗಬಹುದು ಎಂದು ಹೇಳಿರುವ ವಿಚಾರ ಕೆಲವು ಸಂಶಯಗಳನ್ನು ಹುಟ್ಟು ಹಾಕಿದೆ.

ಪೊಲೀಸರು ತನಿಖೆ ನಡೆಸಿದಾಗ ಧನುಷ್ ತಾಯಿಗೆ ಕರೆ ಮಾಡಿರುವುದು 11.52 ಕ್ಕೆ ಎಂದು ಸ್ಪಷ್ಟವಾಗಿ ತಿಳಿದು ಬಂದಿದೆ. ಕಾರು ಹೊಳೆಗೆ ಬಿದ್ದಿರುವುದು 12.02 ನಿಮಿಷಕ್ಕೆ. ಹಾಗಾಗಿ ಕಾರು ಹೊಳೆಗೆ ಬೀಳುವ ಮುಂಚೆ ಕರೆ ಮಾಡಲಾಗಿದೆ ಎಂದು ನಿರ್ಧಾರಕ್ಕೆ ಬರಲಾಗಿದೆ. ಈ ಹಿನ್ನೆಲೆಯಲ್ಲಿ ಯುವಕರು ಕಾರಿನೊಂದಿಗೆ ಹೊಳೆಗೆ ಬಿದ್ದಿದ್ದಾರೆ ಎಂದು ಶಂಕಿಸಲಾಗಿದೆ.

ಕಾರು ಸೇತುವೆ ತಡೆಗೋಡೆಗೆ ಢಿಕ್ಕಿ ಹೊಡೆದು ಹೊಳೆಗೆ ಬಿದ್ದಿರುವ ಪ್ರಕರಣಕ್ಕೆ ಮಸೀದಿಯಲ್ಲಿ ಅಳವಡಿಸಿರುವ ಸಿಸಿ ಕ್ಯಾಮೆರಾ ಸಾಕ್ಷಿಯಾಯಿತು. ರವಿವಾರ ಬಕ್ರೀದ್ ಹಬ್ಬವಾಗಿದ್ದರಿಂದ ಮುಸ್ಲಿಮ್ ಬಾಂಧವರು ಮುಂಜಾವಿನ 4.30 ವೇಳೆಗೆ ಮಸೀದಿಗೆ ಆಗಮಿಸುವಾಗ ಸೇತುವೆಯ ತಡೆಗೋಡೆ ಮುರಿದು ಹೋಗಿರುವುದು ಗೋಚರಿಸಿತು. ಬಳಿಕ ಮಸೀದಿಯ ಸಿಸಿ ಕ್ಯಾಮರಾ ಪರಿಶೀಲನೆ ನಡೆಸಿದಾಗ ಕಾರೊಂದು ಸೇತುವೆಗೆ ಢಿಕ್ಕಿ ಹೊಡೆದು ಕೆಳಗೆ ಬಿದ್ದಿರುವುದು ಬೆಳಕಿಗೆ ಬಂದಿತು. ತಕ್ಷಣ ಮಸೀದಿಯರು ಪೊಲೀಸರಿಗೆ ಮಾಹಿತಿ ನೀಡಿದ್ದಾರೆ.

ಮಧ್ಯಾಹ್ನದ ವೇಳಗೆ ಕಾರು ಹೊಳೆಗೆ ಬಿದ್ದಿರುವ ಬಗ್ಗೆ ಅಂತೆ ಕಂತೆಗಳ ಸುದ್ದಿ ಎಲ್ಲೆಲ್ಲೋ ಹರಿದಾಡುತ್ತಿತ್ತು. ಕಾರು ಹೇಗೆ ಬಿದ್ದಿದೆ ಹಾಗೂ ಎಷ್ಟು ಹೊತ್ತಿಗೆ ಬಿದ್ದಿಗೆ ಎನ್ನುವ ವಿಚಾರ ಸ್ಪಷ್ಟಪಡಿಸಲು ಮತ್ತೆ ಸಿಸಿ ಕ್ಯಾಮರಾ ಮೊರೆ ಹೋಗಿ ನಾಪತ್ತೆಯಾಗಿರುವ ಇಬ್ಬರು ಧನುಷ್‌ಗಳ ಪೈಕಿ ಒಬ್ಬ ಧನುಷ್ ಕಾರು ಹೊಳೆಗೆ ಬೀಳುವ ಮುಂಚೆಯೇ ಕರೆ ಮಾಡಿರುವುದನ್ನು ಖಚಿತಪಡಿಸಿಕೊಂಡರು.

- Advertisement -
spot_img

Latest News

error: Content is protected !!