- Advertisement -
- Advertisement -
ಬೆಳ್ತಂಗಡಿ : ತೆಂಕಕಾರಂದೂರು ಗ್ರಾಮದ ಪಲ್ಕೆ ನಿವಾಸಿ ಪ್ರೇಮ ಶೆಟ್ಟಿಯವರ ಮನೆಯಲ್ಲಿ ಮೇ.22 ರಂದು ಮನೆಯಲ್ಲಿ ತಮ್ಮ ಮಗ ವೃದ್ದೆ ತಾಯಿ ಜೊತೆ ರಾತ್ರಿ ಮಲಗಿದ್ದಾಗ ಹಿಂಬದಿ ಬಾಗಿಲು ಹೊಡೆದು ರೂಮ್ ನಲ್ಲಿರುವ ಕಪಾಟು ಹೊಡೆದುಹಾಕಿ ಸುಮಾರು 20 ಪವನ್ ಚಿನ್ನ ಇತರ ದಾಖಲೆಗಳ ಬ್ಯಾಗನ್ನೇ ಕಳ್ಳರು ಏಗರಿಸಿ ಪರಾರಿಯಾಗಿರುವ ಘಟನೆ ನಡೆದಿದೆ.
ಅದೇ ದಿನ ರಾತ್ರಿ ಕೇವಲ 200 ಮೀಟರ್ ಸಮೀಪದಲ್ಲಿರುವ ಕರಂಬಾರು ಗ್ರಾಮದ ಮುಂಡೆಲ್ ವಿಶ್ವನಾಥ ಶೆಟ್ಟಿ ಯವರ ಮನೆಯವರು ಅವರ ಸಂಬಂಧಿಕರ ಮನೆಯಲ್ಲಿ ಬೂತ ಕೋಲ ಇದೆ ಎಂದು ಸಂಜೆ ಎಲ್ಲರೂ ತೆರಳಿದ್ದು ಈ ಮನೆಯ ಬಾಗಿಲು ಒಡೆದು ಮನೆಯೊಳಗಿದ್ದ ನಾಲ್ಕು ಪವನ್ ಚಿನ್ನ ಕಳ್ಳತನವಾಗಿದೆ ಎನ್ನಲಾಗಿದೆ.
ಈ ಕಳ್ಳತನವಾದ ಎರಡು ಮನೆಗೆ ವೇಣೂರು ಪೊಲೀಸ್ ರವರು ಆಗಮಿಸಿ ತನಿಖೆ ನೆಡೆಸುತ್ತಿದ್ದಾರೆ.
- Advertisement -