ಬೆಳ್ತಂಗಡಿ;ನಾನು ಪೊಲೀಸರಿಗೆ ಬೈದಿದ್ದು ಕಾರ್ಯಕರ್ತರಿಗಾಗಿ, ಅಧಿಕಾರಕ್ಕಾಗಿ ಅಲ್ಲ ಎಂದು ಮಾಧ್ಯಮದ ಮುಂದೆ ಶಾಸಕ ಹರೀಶ್ ಪೂಂಜ ಸ್ಪಷ್ಟಪಡಿಸಿದ್ದಾರೆ.
ಗರ್ಡಾಡಿಯ ತಮ್ಮ ನಿವಾಸದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಅಧಿಕಾರಕ್ಕಾಗಿ ಸಿಎಂ ಸಿದ್ಧರಾಮಯ್ಯ ಈ ಹಿಂದೆ ಶಂಕರ್ ಬಿದರಿ ಕಾಲರ್ ಹಿಡಿದಿರಲಿಲ್ವ? ನಾನು ಪೊಲೀಸರಿಗೆ ಬೈದಿದ್ದು ಕಾರ್ಯಕರ್ತರಿಗಾಗಿ, ಅಧಿಕಾರಕ್ಕಾಗಿ ಅಲ್ಲವೇ ಅಲ್ಲ ಎಂದಿದ್ದಾರೆ.
ಕಾಂಗ್ರೆಸ್ ಪಕ್ಷಕ್ಕೆ ನೈತಿಕತೆ ಇಲ್ಲ. ಪೊಲೀಸರ ಮೇಲೆ ಹೆಚ್ಚು ದೌರ್ಜನ್ಯ ಮಾಡಿದ್ದು ಕಾಂಗ್ರೆಸ್ ನಾಯಕರೇ ಆಗಿದ್ದಾರೆ. ಅಂತವರು ಬಿಜೆಪಿ ನಾಯಕರಿಗೆ ಬುದ್ಧಿ ಹೇಳೋ ಅವಶ್ಯಕತೆಯಿಲ್ಲ ಅಂತ ಕಿಡಿಕಾರಿದ್ದಾರೆ.. ನಾನು ಬೆಳ್ತಂಗಡಿ ಠಾಣೆಗೆ ಪ್ರಕರಣದಲ್ಲಿ ಇಲ್ಲದೇ ಇದ್ದಂತ ಒಬ್ಬನನ್ನು ಕರೆತಂದಿದ್ದರು. ಇದನ್ನು ನಾನು ಮುಲಾಜಿಲ್ಲದೇ ಖಂಡಿಸಿದ್ದೇನೆ. ನಾನು ಯಾವುದೇ ಕಾರ್ಯಕರ್ತ, ಅಧಿಕಾರಕ್ಕಾಗಿ ಬೈದಿದ್ದಲ್ಲ. ಪ್ರಜ್ವಲ್ ರೇವಣ್ಣ ಕೇಸ್ ಆದಾಗ ಕಾಂಗ್ರೆಸ್ ಪ್ರತಿಭಟನೆ ಮಾಡಲಿಲ್ಲವೇ? ಆಗ ಯಾವ ನ್ಯಾಯ, ಕಾನೂನು ಇತ್ತು.? ಸಿಎಂ ಸಿದ್ಧರಾಮಯ್ಯ ಬೆಳ್ತಂಗಡಿಗೆ ಬಂದ ಮೇಲೆ ನನ್ನ ವಿರುದ್ಧ ಎಫ್‌ಐಆರ್ ಹಾಕಿದ್ದಾರೆ ಎಂದು ವಾಗ್ದಾಳಿ ನಡೆಸಿದ್ದಾರೆ.