Sunday, June 16, 2024
Homeಕರಾವಳಿಕಡಬ; ಬೈಕ್ ನಲ್ಲಿ ಹೋಗುತ್ತಿದ್ದಾಗ ಬಿದ್ದು ಹೋದ ಬ್ಯಾಗ್ ನನ್ನು ಮರಳಿಸಿ ಪ್ರಾಮಾಣಿಕತೆ ಮೆರೆದ ವ್ಯಕ್ತಿ;ವಾಟ್ಸಾಪ್...

ಕಡಬ; ಬೈಕ್ ನಲ್ಲಿ ಹೋಗುತ್ತಿದ್ದಾಗ ಬಿದ್ದು ಹೋದ ಬ್ಯಾಗ್ ನನ್ನು ಮರಳಿಸಿ ಪ್ರಾಮಾಣಿಕತೆ ಮೆರೆದ ವ್ಯಕ್ತಿ;ವಾಟ್ಸಾಪ್ ಸಂದೇಶದಿಂದಾಗಿ ಕೈ ಸೇರಿತು ಲಕ್ಷಾಂತರ ರೂಪಾಯಿ ಮೌಲ್ಯದ ಚಿನ್ನಾಭರಣ, ಲ್ಯಾಪ್ ಟಾಪ್

spot_img
- Advertisement -
- Advertisement -

ಕಡಬ; ಬೈಕ್ ನಲ್ಲಿ ಹೋಗುತ್ತಿದ್ದಾಗ ಬಿದ್ದು ಹೋದ ಬ್ಯಾಗ್ ನನ್ನು ವಾರಸುದಾರರಿಗೆ ಮರಳಿಸಿ ವ್ಯಕ್ತಿಯೊಬ್ಬರು ಪ್ರಾಮಾಣಿಕತೆ ಮೆರೆದ ಘಟನೆ ಕಡಬ ಸಮೀಪದ ಕಳಾರ ಎಂಬಲ್ಲಿ ನಡೆದಿದೆ.

ಕಲ್ಲುಗುಡ್ಡೆ ಮಾಪಳ ನಿವಾಸಿ ಚೇತನ್ ಎಂಬವರು ಬುಧವಾರದಂದು ತನ್ನ ಬೈಕಿನಲ್ಲಿ ಮಂಗಳೂರು ಕಡೆಗೆ ತೆರಳುತ್ತಿದ್ದಾಗ ಕಳಾರ ಸಮೀಪ ಬ್ಯಾಗ್ ಕಳೆದು ಹೋಗಿದೆ .ಆಲಂಕಾರು ತಲುಪಿದಾಗ ಬ್ಯಾಗ್ ಇಲ್ಲದೇ ಇರುವುದನ್ನು ಗಮನಿಸಿದ ಚೇತನ್ ತಕ್ಷಣವೇ ಬ್ಯಾಗ್ ಕಳೆದು ಹೋಗಿರುವ ಬಗ್ಗೆ ವಾಟ್ಸ್‌ಅಪ್ ಗ್ರೂಪ್‌ಗಳಲ್ಲಿ ಸಂದೇಶ ರವಾನಿಸಿದ್ದಾರೆ. ಈ ನಡುವೆ ಕಳೆದು ಹೋಗಿದ್ದ ಬ್ಯಾಗ್ ಕಳಾರ ನಿವಾಸಿ ಇಸ್ಮಾಯಿಲ್ ಬಿಡಿಎಸ್ ಎಂಬವರಿಗೆ ರಸ್ತೆ ಬದಿಯಲ್ಲಿ ಸಿಕ್ಕಿದ್ದು, ಬ್ಯಾಗನ್ನು ತೆರೆದು ನೋಡಿದಾಗ ಸುಮಾರು ಐದು ಲಕ್ಷ ರೂ. ಮೌಲ್ಯದ ಚಿನ್ನಾಭರಣ ಹಾಗೂ ಲ್ಯಾಪ್‌ಟಾಪ್ ಇರುವುದು ಕಂಡುಬಂದಿದೆ. ತಕ್ಷಣವೇ ವಾಟ್ಸಾಪ್ ನಲ್ಲಿ ಸಂದೇಶ ಬಂದ ಸಂಖ್ಯೆಯನ್ನು ಸಂಪರ್ಕಿಸಿ ವಾರಸುದಾರರನ್ನು ಕರೆಸಿ ಪ್ರಾಮಾಣಿಕವಾಗಿ ಹಿಂತಿರುಗಿಸಿ ದ್ದಾರೆ. ಇವರ ಈ ಕಾರ್ಯಕ್ಕೆ ವ್ಯಾಪಕ ಪ್ರಶಂಸೆ ವ್ಯಕ್ತವಾಗಿದೆ

- Advertisement -
spot_img

Latest News

error: Content is protected !!