Monday, June 29, 2026
HomeUncategorizedಬಿಜೆಪಿ ರಾಜ್ಯಾಧ್ಯಕ್ಷ ವಿಜಯೇಂದ್ರ‌ ಕೆಳಗಿಳಿಸುವಂತೆ ಪಿತೂರಿ?;ಮಾಜಿ ಸಿಎಂ ಸದಾನಂದಗೌಡ ಮಾತನಾಡಿದ್ದಾರೆ ಎನ್ನಲಾಗಿರುವ ಆಡಿಯೋ ವೈರಲ್

ಬಿಜೆಪಿ ರಾಜ್ಯಾಧ್ಯಕ್ಷ ವಿಜಯೇಂದ್ರ‌ ಕೆಳಗಿಳಿಸುವಂತೆ ಪಿತೂರಿ?;ಮಾಜಿ ಸಿಎಂ ಸದಾನಂದಗೌಡ ಮಾತನಾಡಿದ್ದಾರೆ ಎನ್ನಲಾಗಿರುವ ಆಡಿಯೋ ವೈರಲ್

- Advertisement -
- Advertisement -

ಬೆಂಗಳೂರು: ಬಿಜೆಪಿ ರಾಜ್ಯಾಧ್ಯಕ್ಷ ವಿಜಯೇಂದ್ರ‌ ಕೆಳಗಿಳಿಸುವಂತೆ ಪಿತೂರಿ ನಡೆಯುತ್ತಿದೆ ಎಂಬ ಆರೋಪ ಕೇಳಿ ಬರುತ್ತಿದೆ. ಇದಕ್ಕೆ ಸಂಬಂಧಪಟ್ಟಂತೆ ಮಾಜಿ ಸಿಎಂ ಸದಾನಂದಗೌಡ ಕೇಂದ್ರದ ಬಿಜೆಪಿ ನಾಯಕರೊಬ್ಬರ ಕಡೆಯವರ ಜೊತೆ ಮಾತನಾಡಿದ್ದಾರೆ ಎನ್ನಲಾಗಿರುವ ಆಡಿಯೋ ವೈರಲ್ ಆಗಿದೆ. ಇಂಗ್ಲೀಷ್ ನಲ್ಲಿ ಮಾತನಾಡಿರುವ ಆಡಿಯೋ ವೈರಲ್ ಆಗಿದೆ.

ಆಗಸ್ಟ್, ಸೆಪ್ಟೆಂಬರ್, ಅಕ್ಟೋಬರ್ ವರೆಗೂ ವಿಜಯೇಂದ್ರ‌ ಮುಂದುವರೆಯಲು ಬಿಡಿ. ಬಳಿಕ ಕಿತ್ತು ಹಾಕಿ ಅಂತ ಹೇಳಿರೋ ಆಡಿಯೋ ವೈರಲ್ ಆಗಿದೆ. ಈಗಲೇ ಕಿತ್ತು ಹಾಕಿದ್ರೆ ಬಿಜೆಪಿ ಮತ್ತೆ ಲಿಂಗಾಯತ ವಿರೋಧಿ ಅಂತಾ ಆಗಲಿದೆ. ಇದು ಪಕ್ಷಕ್ಕೆ ಡ್ಯಾಮೇಜ್ ಆಗುವ ಸಾಧ್ಯತೆ ಇದೆ ಎನ್ನಲಾಗಿದೆ. ಹಾಗಾಗಿ ಕಾದು ವಿಜಯೇಂದ್ರ‌ನನ್ನ ಒದ್ದು ಕಿತ್ತು ಬಿಸಾಕಿ ಎಂದು ಹೇಳಿರುವ ಆಡಿಯೋ ವೈರಲ್ ಆಗಿದೆ.ಈ ವೇಳೆ ಬಿ.ಎಲ್ ಸಂತೋಷ್, ಪ್ರಹ್ಲಾದ್ ಜೋಶಿ ಇದರ ಹಿಂದೆ ಇದ್ದಾರೆ ಅಂತಾ ಆ ಕಡೆಯಿಂದ ವ್ಯಕ್ತಿ ಹೇಳಿರೋದನ್ನು ಕೇಳಬಹುದಾಗಿದೆ. ಈ ವೇಳೆ ನಾನು ದೇವರನ್ನ ನಂಬಿದ್ದೇನೆ ಸದಾನಂದಗೌಡ ಹೇಳಿದ್ದಾರೆ ಎನ್ನುವುದನ್ನು ಆಡಿಯೋದಲ್ಲಿ ಕೇಳಬಹುದಾಗಿದೆ.   

- Advertisement -

Latest News

error: Content is protected !!