Friday, May 10, 2024
Homeಕರಾವಳಿಮಂಗಳೂರುದೇವಿಯ ಫೋಟೋಶೂಟ್ ಗಾಗಿ 21 ದಿನಗಳ ಕಠಿಣ ವ್ರತ: ಮೆಚ್ಚುಗೆಗೆ ಪಾತ್ರವಾದ ಮಂಗಳೂರಿನ ಕ್ರಿಶ್ಚಿಯನ್ ...

ದೇವಿಯ ಫೋಟೋಶೂಟ್ ಗಾಗಿ 21 ದಿನಗಳ ಕಠಿಣ ವ್ರತ: ಮೆಚ್ಚುಗೆಗೆ ಪಾತ್ರವಾದ ಮಂಗಳೂರಿನ ಕ್ರಿಶ್ಚಿಯನ್ ಯುವತಿ

spot_img
- Advertisement -
- Advertisement -

ಮಂಗಳೂರು : ನವರಾತ್ರಿ ಹಿನ್ನೆಲೆ ಈ ಬಾರಿ ಮಂಗಳೂರಿನ ಕೆಲ ಯುವತಿಯರು ದೇವಿ ರೂಪದಲ್ಲಿ ಫೋಟೋ ಶೂಟ್ ಮಾಡಿಸಿಕೊಂಡದ್ದು ಸಾಕಷ್ಟು ವೈರಲ್ ಆಗಿತ್ತು. ಅದೇ ರೀತಿ ಮಂಗಳೂರಿನ ಕ್ರಿಶ್ಚಿಯನ್ ಯುವತಿಯೊಬ್ಬರು ಸರಸ್ವತಿ ದೇವಿಯ ರೂಪದರ್ಶಿಯಾಗಿ ಫೋಟೋ ಶೂಟ್ ಮಾಡಿಸಿಕೊಳ್ಳುವ ಮೂಲಕ ಗಮನ ಸೆಳೆದಿದ್ದಾರೆ. ಅಲ್ಲದೇ ಅದಕ್ಕಾಗಿ ಅವರು 21 ದಿನಗಳ ಕಾಲ ಕಠಿಣ ವ್ರತ ಕೂಡ ಮಾಡಿದ್ದಾರೆ.

ಯೆಸ್… ಮಂಗಳೂರಿನ ಪಾತ್ ವೇ ಮತ್ತು ಮರ್ಸಿ ಸಲೂನ್ ಆಯೋಜಿಸಿದ್ದ ಶ್ಯಾಡೋ ಆಫ್ ನವದುರ್ಗಕ್ಕೆ ರೂಪದರ್ಶಿಯರನ್ನು ಹುಡುಕುತ್ತಿದ್ದರು. ಆಗ ಸರಸ್ಪತಿ ಮೂರ್ತಿಯ ರೂಪದರ್ಶಿಯಾಗಿ ಮಂಗಳೂರಿನ ಕುಲಶೇಖರ ನಿವಾಸಿಯಾದ ಅನೀಶಾ ಅಂಜಲಿನ್ ಮೋಂತೇರೊ ಸೆಲೆಕ್ಟ್ ಆಗಿದ್ರು. ತನ್ನ ಧರ್ಮವಲ್ಲದ ಇಲ್ಲಿ ಈ ಕಾರ್ಯ ಮಾಡಲು ಆಕೆ ನಿಷ್ಠೆಯಿಂದ ತಯಾರಾಗಿದ್ದರು. 21 ದಿನ ಕಾಲ ಕಠಿಣ ವ್ರತ ಮಾಡಿ ಮಾಂಸಹಾರ ವರ್ಜಿಸಿದ್ದರು. ಹೀಗೆ ಸಂಪೂರ್ಣ ಸಸ್ಯಹಾರ ಅದರಲ್ಲೂ ಪಥ್ಯಹಾರ ಸೇವಿಸಿ ನಂತರ ಈ ಫೋಟೊಶೂಟ್ ಮಾಡಿಸಿಕೊಂಡಿದ್ದರು.

ಈ ಫೋಟೊಗಳನ್ನು ವರ್ಷಿಲ್ ಅಂಚನ್ ಸೆರೆಹಿಡಿದ್ದಾರೆ. ಇದೇ ರೀತಿ ಫೋಟೊಶೂಟ್ ಮಾಡಿದ್ದ ಹಲವು ಯುವತಿಯರು ಭಕ್ತವೃಂದದಿಂದ ಟೀಕೆಗೆ ಗುರಿಯಾಗಿದ್ದರು. ಆದರೆ ಅನೀಶಾಳ ಈ ವ್ರತ ನಿಷ್ಠೆಯಿಂದ ಈಗ ಎಲ್ಲರ ಮೆಚ್ಚುಗೆಗೆ ಪಾತ್ರರಾಗಿದ್ದಾರೆ.


- Advertisement -
spot_img

Latest News

error: Content is protected !!