Sunday, April 28, 2024
Homeತಾಜಾ ಸುದ್ದಿಆನ್ ಲೈನ್ ಗೇಮಿಂಗ್ ನಲ್ಲಿ 49 ರೂಪಾಯಿ ಹೂಡಿಕೆ ಮಾಡಿ ರಾತ್ರೋರಾತ್ರಿ 1.5 ಕೋಟಿಯ ಒಡೆಯನಾದ...

ಆನ್ ಲೈನ್ ಗೇಮಿಂಗ್ ನಲ್ಲಿ 49 ರೂಪಾಯಿ ಹೂಡಿಕೆ ಮಾಡಿ ರಾತ್ರೋರಾತ್ರಿ 1.5 ಕೋಟಿಯ ಒಡೆಯನಾದ ಯುವಕ

spot_img
- Advertisement -
- Advertisement -

ಮಧ್ಯಪ್ರದೇಶ; ಅದೃಷ್ಟ ಯಾವ ರೂಪದಲ್ಲಿ ಯಾವಾಗ ಬೇಕಾದರೂ ಬರಬಹುದು. ಯುವಕನೊಬ್ಬ ಆನ್ ಲೈನ್ ಗೇಮಿಂದ್ ನಲ್ಲಿ 49 ರೂಪಾಯಿ ಹೂಡಿಕೆ ಮಾಡಿ ರಾತ್ರೋರಾತ್ರಿ 1.5 ಕೋಟಿಗೆ ಒಡೆಯನಾದ ಘಟನೆ ಮಧ್ಯಪ್ರದೇಶದಲ್ಲಿ ನಡೆದಿದೆ.

ಮಧ್ಯಪ್ರದೇಶದ ಬರ್ವಾನಿ ಜಿಲ್ಲೆಯ ಚಾಲಕನಾಗಿರುವ ಈತ ಭಾನುವಾರ ಆನ್‌ಲೈನ್ ಗೇಮಿಂಗ್ ಅಪ್ಲಿಕೇಶನ್‌ನಲ್ಲಿ 49 ರೂಪಾಯಿ ಹೂಡಿಕೆ ಮಾಡಿದ್ದಾನೆ. ಇದರಲ್ಲಿ ಈತ ವರ್ಚುವಲ್ ಕ್ರಿಕೆಟ್ ತಂಡವನ್ನು ರಚಿಸಿ ಮೊದಲ ಸ್ಥಾನವನ್ನು ಪಡೆಯುವ ಮೂಲಕ 1.5 ಕೋಟಿ ರೂಪಾಯಿ ಗೆದ್ದಿದ್ದಾನೆ.

ಶಹಾಬುದ್ದೀನ್ ಮನ್ಸೂರಿ ಎಂದು ಗುರುತಿಸಲಾದ ವ್ಯಕ್ತಿ ಕಳೆದ ಎರಡು ವರ್ಷಗಳಿಂದ ಇಂತಹ ಆನ್‌ಲೈನ್ ಕ್ರಿಕೆಟ್ ಆಟಗಳಲ್ಲಿ ತಂಡಗಳನ್ನು ಕಟ್ಟುತ್ತಿದ್ದರೂ ಕೂಡ ಅದೃಷ್ಟ ಕುಲಾಯಿಸಿರಲ್ಲಿಲ್ಲ. ಆದರೆ ಭಾನುವಾರ ನಡೆದ ಕೋಲ್ಕತ್ತಾ ಮತ್ತು ಪಂಜಾಬ್ ನಡುವಿನ ಪಂದ್ಯ ಈತನ ಅದೃಷ್ಟವನ್ನೇ ಬದಲಾಯಿಸಿದೆ. ಪ್ರಸ್ತುತ, ಶಹಾಬುದ್ದೀನ್ ತನ್ನ ಆಯಪ್ ವ್ಯಾಲೆಟ್‌ನಿಂದ ರೂ 20 ಲಕ್ಷವನ್ನು ಹಿಂಪಡೆದಿದ್ದಾರೆ, ವಿಜೇತ ಮೊತ್ತದ 1.5 ಕೋಟಿ ರೂ. ಒಟ್ಟು ರೂ.6 ಲಕ್ಷ ತೆರಿಗೆ ಕಡಿತಗೊಳ್ಳಲಿದೆ

ಮಧ್ಯಪ್ರದೇಶದ ಸೆಂಧ್ವಾದಲ್ಲಿ ಬಾಡಿಗೆ ಮನೆಯಲ್ಲಿ ವಾಸವಾಗಿರುವ ಶಹಬುದ್ದೀನ್ ಗೆದ್ದ ಹಣದಲ್ಲಿ ಸ್ವಂತ ಮನೆ ಕಟ್ಟುವ ಯೋಜನೆ ಹಾಕಿಕೊಂಡಿದ್ದಾರೆ. ಉಳಿದ ಮೊತ್ತದಲ್ಲಿ ಸ್ವಂತ ಉದ್ಯಮ ಆರಂಭಿಸುವ ಗುರಿಯನ್ನೂ ಹೊಂದಿದ್ದಾರೆ.

ವಿಶೇಷ ಸೂಚನೆ; ಈ ಸುದ್ದಿಯನ್ನು ಕೇವಲ ಸುದ್ದಿಯಾಗಿ ಅಷ್ಟೇ ಓದಿ, ನಾವಿಲ್ಲಿ ನಿಮ್ಮನ್ನು ಆನ್ ಲೈನ್ ಗೇಮಿಂಗ್ ಆಡಲು ಪ್ರಚೋದಿಸುತ್ತಿಲ್ಲ. ಇಂತಹ ಗೇಮಿಂಗ್ ನಲ್ಲಿ ಹಣ ಹೂಡುವ ಮೊದಲು ನಿಮ್ಮ ಕುಟುಂಬದ ಬಗ್ಗೆ ಯೋಚಿಸಿ. ಅದೃಷ್ಟ ಅನ್ನೋದು ಎಲ್ಲರಿಗೂ ಒಂದೇ ರೀತಿ ಇರೋದಿಲ್ಲ. ಇಂತಹ ಆಟಗಳಲ್ಲಿ ತೊಡಗಿಸಿಕೊಳ್ಳುವ ಮುನ್ನ ಎಚ್ಚರವಾಗಿರಿ.

- Advertisement -
spot_img

Latest News

error: Content is protected !!