Thursday, June 4, 2026
Homeತಾಜಾ ಸುದ್ದಿಕೋಲಾರದ ರೀತಿ ನಡೆಯಿತು ಮತ್ತೊಂದು ಮದುವೆ: ಅಕ್ಕತಂಗಿ ಇಬ್ಬರನ್ನೂ ವಿವಾಹವಾದ ವರ

ಕೋಲಾರದ ರೀತಿ ನಡೆಯಿತು ಮತ್ತೊಂದು ಮದುವೆ: ಅಕ್ಕತಂಗಿ ಇಬ್ಬರನ್ನೂ ವಿವಾಹವಾದ ವರ

- Advertisement -
- Advertisement -

ಹೈದರಾಬಾದ್: ಕೋಲಾರದಲ್ಲಿ ಇತ್ತೀಚೆಗೆ ಅಕ್ಕ, ತಂಗಿ ಇಬ್ಬರನ್ನು ಮದುವೆಯಾಗಿ ಕೊನೆಗೆ ವರ ಜೈಲು ಸೇರಿದ್ದು ನಿಮಗೆಲ್ಲಾ ನೆನಪಿರಬಹುದು. ಇದೀಗ ಅಂತಹದ್ದೇ ವಿವಾಹವೊಂದು  ತೆಲಂಗಾಣದ ರಾಜ್ಯದ ಮೆದಕ್ ಜಿಲ್ಲೆಯ ಅನ್ಸಾನ ಪಲ್ಲಿ ಗ್ರಾಮದಲ್ಲಿ ನಡೆದಿದೆ.

ಗೋಪಾಲ ವೆಂಕಟೇಶ್ ಅವರ ಮಕ್ಕಳಾದ ಸ್ವಾತಿ, ಶ್ವೇತಾ ಇಬ್ಬರು ಒಬ್ಬನನ್ನೇ ಮದುವೆಯಾಗಿದ್ದಾರೆ. ಪೋಷಕರು ಸಂತೋಷದಿಂದ ಇಬ್ಬರು ಹೆಣ್ಣುಮಕ್ಕಳನ್ನು ಒಬ್ಬವರನಿಗೆ ಕೊಟ್ಟು ಮದುವೆ ಮಾಡಿ ತಮ್ಮ ಕರ್ತವ್ಯವನ್ನು ನಿರ್ವಹಿಸಿದ್ದಾರೆ.

ಸ್ವಾತಿಗೆ ಸಂಬಂಧಿಕರ ಹುಡುಗ ಬಾಲರಾಜುನೊಂದಿಗೆ ಮದುವೆ ನಿಶ್ಚಯವಾಗಿತ್ತು. ಆದರೆ ಶ್ವೇತಾ ಮಾನಸಿಕ ಅಸ್ವಸ್ಥಳಾಗಿದ್ದಳು. ಹಾಗಾಗಿ ಅಕ್ಕ ತಂಗಿ ಇಬ್ಬರನ್ನೂ ಮದುವೆ ಆಗುವಂತೆ ಸ್ವಾತಿ ಹೇಳಿದ್ದು, ಕುಟುಂಬಸ್ಥರ ಸಮ್ಮುಖದಲ್ಲಿ ಬಾಲರಾಜು ಏಕಕಾಲಕ್ಕೆ ತಾಳಿ ಕಟ್ಟಿದ್ದಾನೆ ಎನ್ನಲಾಗುತ್ತಿದೆ.

- Advertisement -

Latest News

error: Content is protected !!