Tuesday, April 30, 2024
HomeUncategorizedನಟ ದಿವಂಗತ ಅಂಬರೀಶ್ ಕುಟುಂಬಕ್ಕೆ ಮತ್ತೊಂದು ಬೇಸರದ ಸುದ್ದಿ

ನಟ ದಿವಂಗತ ಅಂಬರೀಶ್ ಕುಟುಂಬಕ್ಕೆ ಮತ್ತೊಂದು ಬೇಸರದ ಸುದ್ದಿ

spot_img
- Advertisement -
- Advertisement -

ಬೆಂಗಳೂರು: ಸ್ಯಾಂಡಲ್‍ವುಡ್ ದಿವಂಗತ ನಟ ರೆಬಲ್ ಸ್ಟಾರ್ ಅಂಬರೀಶ್ ಕುಟುಂಬಕ್ಕೆ ಮತ್ತೊಂದು ಬೇಸರದ ಸುದ್ದಿ ಎದುರಾಗಿದೆ. ಅವರ ಪ್ರೀತಿಯ ಶ್ವಾನ ಕನ್ವರ್ ಲಾಲ್ ಇಂದು ಬೆಳಗ್ಗೆ ನಿಧನವಾಗಿದೆ.

ಮೊದಲಿನಿಂದಲೂ ಪ್ರಾಣಿಪ್ರಿಯರಾಗಿದ್ದ ಅಂಬರೀಶ್‍ರವರಿಗೆ ಶ್ವಾನಗಳೆಂದರೆ ಬಹಳ ಪ್ರೀತಿ. ಹೀಗಾಗಿ ತಮ್ಮ ಮನೆಯಲ್ಲಿ ಎರಡು ಶ್ವಾನಗಳನ್ನು ಸಾಕಿದ್ದರು. ಆ ಶ್ವಾನಗಳಿಗೆ ಕನ್ವರ್ ಲಾಲ್ ಹಾಗೂ ಬುಲ್‍ಬುಲ್ ಎಂದು ಹೆಸರಿಟ್ಟಿದ್ದರು.

ಅಂಬರೀಶ್‍ರವರ ವೃತ್ತಿ ಜೀವನದಲ್ಲಿ ನಾಗರ ಹಾವು ಸಿನಿಮಾದ ಬುಲ್ ಬುಲ್ ಮಾತಾಡಕ್ಕಿಲ್ವಾ.. ಹಾಗೂ ಅಂತ ಚಿತ್ರದ ಕುತ್ತೇ..ಕನ್ವರ್ ನಹೀ ಕನ್ವರ್ ಲಾಲ್ ಬೋಲೋ ಡೈಲಾಗ್‍ಗಳು ಬಹಳ ಖ್ಯಾತಿ ತಂದುಕೊಟ್ಟಿತ್ತು. ಇದರ ನೆನಪಿಗಾಗಿ ಅಂಬರೀಶ್‍ರವರು ತಮ್ಮ ಎರಡು ಶ್ವಾನಗಳಿಗೆ ಬುಲ್‍ಬುಲ್ ಹಾಗಾ ಕನ್ವರ್ ಎಂದು ನಾಮಕರಣ ಮಾಡಿದ್ದರು.

ಸೇಂಟ್ ಬರ್ನಾಡ್ ತಳಿಯ ಶ್ವಾನಕ್ಕೆ ಕನ್ವರ್ ಲಾಲ್ ಕರೆಯುತ್ತಿದ್ದರು. ಅದು ಒಂಟಿಯಾಗಿರಬಾರದು ಎಂದು ಕನ್ವರ್ ಲಾಲ್ ಜೊತೆಗೆ ಬುಲ್‍ಬುಲ್ ನಾಯಿಯನ್ನು ತಂದು ಜೋಡಿ ಮಾಡಿದ್ದರು. ಪ್ರತಿ ನಿತ್ಯ ತಮಗೆ ಬಿಡುವು ಸಿಕ್ಕಾಗಲೆಲ್ಲಾ ಅಂಬರೀಶ್‍ರವರು ಕನ್ವರ್ ಲಾಲ್ ಹಾಗೂ ಬುಲ್ ಬುಲ್ ಜೊತೆಗೆ ಕಾಲ ಕಳೆಯುತ್ತಿದ್ದರು. ಬೆಳಗ್ಗೆ ವಾಕಿಂಗ್ ಹೋಗುವಾಗ ಕೂಡ ಜೊತೆಯಲ್ಲಿ ಕನ್ವರ್‍ನನ್ನು ಕರೆದುಕೊಂಡು ಹೋಗುತ್ತಿದ್ದರು.

ಕುಟುಂಬದ ಸದಸ್ಯನಂತಿದ್ದ ಕನ್ವರ್ ಅಂಬರೀಶ್- ನಿಧನರಾದ ಬಳಿಕ ಮಾನಸಿಕವಾಗಿ ನೊಂದಿತ್ತು. ಸರಿಯಾಗಿ ಊಟಮಾಡುತ್ತಿರಲಿಲ್ಲ ಹಾಗೂ ಒಬ್ಬಂಟಿಯಾಗಿ ಇರುತ್ತಿತ್ತು. ಇದೀಗ ಅಂಬಿ ನಿಧನರಾದ ಎರಡು ವರ್ಷದ ಬಳಿಕ ಕನ್ವರ್ ಲಾಲ್ ಕೊನೆಯುಸಿರೆಳೆದಿದ್ದಾನೆ. ಅದರಲ್ಲಿಯೂ ಅಂಬರೀಶ್‍ರವರ 69ನೇ ಜನ್ಮದಿನೋತ್ಸವಕ್ಕೆ ಇನ್ನೂ ಐದು ದಿನಗಳು ಬಾಕಿ ಇರುವಾಗಲೇ ಕನ್ವರ್ ಬಾರದ ಲೋಕಕ್ಕೆ ತೆರಳಿದ್ದಾನೆ. ಇದೀಗ ಬೆಂಗಳೂರಿನಲ್ಲಿ ಕನ್ವರ್ ಲಾಲ್‍ನನ್ನು ಮಣ್ಣು ಮಾಡಲಾಗಿದೆ.

ಸುಮಲತಾ ಅಂಬರೀಶ್ ಹಾಗೂ ಅಭಿಷೇಕ್ ತಮ್ಮ ಮುದ್ದಿನ ಶ್ವಾನ ಅಸುನೀಗಿದ್ದರಿಂದ ದುಃಖದಲ್ಲಿದ್ದಾರೆ.

- Advertisement -
spot_img

Latest News

error: Content is protected !!