Friday, May 17, 2024
Homeಕರಾವಳಿಶಿಶಿಲದಲ್ಲಿ ನಡೆದಿದ್ದ ಮೀನುಗಳ ಮಾರಣಹೋಮಕ್ಕೆ ಇಂದಿಗೆ 25 ವರ್ಷ..

ಶಿಶಿಲದಲ್ಲಿ ನಡೆದಿದ್ದ ಮೀನುಗಳ ಮಾರಣಹೋಮಕ್ಕೆ ಇಂದಿಗೆ 25 ವರ್ಷ..

spot_img
- Advertisement -
- Advertisement -

ಬೆಳ್ತಂಗಡಿ: ನಾಡಿನ ಪ್ರಸಿದ್ಧ ಮತ್ಸ್ಯ ಕ್ಷೇತ್ರವೆಂದೇ ಪ್ರಸಿದ್ಧಿ ಪಡೆದಿರುವ ಶಿಶಿಲದ ಶಿಶಿಲೇಶ್ವರನ ಸನ್ನಿಧಿಯ ಕಪಿಲಾ ನದಿಯ ಮತ್ಸ್ಯ ಸಂಕುಲದಲ್ಲಿರುವ ಲಕ್ಷಾಂತರ ದೇವರ ಮೀನುಗಳೆಂದರೆ ಭಕ್ತರಿಗೆ ಅದೆಷ್ಟೋ ಪ್ರೀತಿ. ಶಿಶಿಲೇಶ್ವರನ ಸಾನಿಧ್ಯಕ್ಕೆ ಬರುವ ಭಕ್ತರಿಗಿಂತಲೂ ದೇವರ ಮೀನುಗಳಿಗೆ ಆಹಾರಗಳನ್ನು ಹಾಕಿ ಅದರ ನರ್ತನವನ್ನು ಕಂಡು ಖುಷಿಪಡುವವರೇ ಹೆಚ್ಚು ಎಂದರೆ ತಪ್ಪಾಗಲಾರದು.

ಆದರೆ ಇಂದಿಗೆ ಸರಿಯಾಗಿ 25 ವರ್ಷಗಳ ಹಿಂದೆ ಶಿಶಿಲದ ಕಪಿಲ ನದಿಗೆ ರಾಕ್ಷಸಿ ಮನಸ್ಥಿತಿಯ ವ್ಯಕ್ತಿಗಳು ವಿಷಹಾಕಿ ಲಕ್ಷಾಂತರ ಮೀನುಗಳ ಮಾರಣಹೋಮ ನಡೆಸಿದ್ದ ಬಗ್ಗೆ ಹೆಚ್ಚಿನವರಿಗೆ ತಿಳಿದಿಲ್ಲ. ಈ ಕರಾಳ ದಿನಗಳ ಬಗ್ಗೆ ಶಿಶಿಲ ನಿವಾಸಿ ಹಾಗೂ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಪ್ರಾದೇಶಿಕ ನಿರ್ದೆಶನಾಲಯದ ನಿರ್ದೆಶಕ ಜಯರಾಮ ನೆಲ್ಲಿತ್ತಾಯ ತಮ್ಮ ಫೇಸ್ಬುಕ್ ಖಾತೆಯಲ್ಲಿ ಹಂಚಿಕೊಂಡಿದ್ದಾರೆ. ಅವರ ಪೋಸ್ಟ್ ಹೀಗಿದೆ.

“25.5.1996 ಇಂದಿಗೆ 25 ವರ್ಷ. ನಮ್ಮೂರ ಶಿಶಿಲ ದೇವಾಲಯದ ಕಪಿಲಾ ನದಿಗೆ ವಿಷ ಹಾಕಿ ಲಕ್ಷಾಂತರ ಮೀನುಗಳನ್ನು ಪಾಪಿಗಳು ಹತ್ಯೆ ಮಾಡಿದ್ದರು. ಇಡೀ ಕಪಿಲಾ ನದಿಯೆ ವಿಷದಿಂದ ತುಂಬಿತ್ತು.ಇಡೀ ಗ್ರಾಮದಲ್ಲು ವಿಷಗಾಳಿ, ಕುಡಿಯುವ ನೀರಿಗಾಗಿ ಟ್ಯಾಂಕರ್ ಬಂತು, ಸಾವಿರಾರು ವಾಹನಗಳ ಆಗಮನ, ಜನ ದೇವಾಲಯಕ್ಕೆ ಬಂದು ಹಿಡಿಶಾಪ ಹಾಕುತ್ತಿದ್ದರು. ಆಗಲೆ ಮದ್ಯಾಹ್ನ 12 ಗ. ಇಲ್ಲಾ ಮೀನುಗಳು ವಿಲವಿಲ ಒದ್ದಾಡಿ ಸತ್ತು ಹೋಗಿದ್ದವು. ದೇವರ ಮೀನು ಪೂರ್ಣ ನಾಶವಾಗಿತ್ತು.(15 ಲೊಡು) ಸಾವಿರಾರು ಜನ ಕಂಡು ಬೊಬ್ಬಿಡುತ್ತಿದ್ದರು. ರಾಜ್ಯದಲ್ಲಿಯೆ ದೊಡ್ದ ಸುದ್ಧಿಯಾಯಿತು. ದೇವಾಲಯ ಆಡಳಿತ ಮಂಡಳಿ, ಮತ್ಸ್ಯ ಹಿತರಕ್ಷಣಾ ವೇದಿಕೆ, ವಿಶ್ವಹಿಂದೂ ಪರಿಷತ್ತು, ಮೊದಲಾದ ಸಂಘಟನೆ ಹೋರಾಟದ ಮುಂಚೂಣಿಯಲ್ಲಿತ್ತು.

ಪತ್ರಿಕಾ ತಂಡಗಳು, ಟಿ ವಿ ಮಾದ್ಯಮದವರು, ಜಿಲ್ಲಾಧಿಕಾರಿ, ಸಹಾಯಕ ಕಮೀಶನರ್ ಪುತ್ತೂರು, ಜಿಲ್ಲಾ ಪೊಲೀಸ್ ಅಧಿಕಾರಿ, ಪೊಲೀಸ್ ವ್ಯಾನ್, ಸರಕಾರಿ ಅಧಿಕಾರಿಗಳು, ಧಾರ್ಮಿಕ ಮುಖಂಡರು, ಜನಪ್ರತಿನಿಧಿಗಳು ( ಮುಜರಾಯಿ ಇಲಾಖೆಯಿಂದ ಯಾರೂ ಬಂದಿಲ್ಲ) ಸುತ್ತಮುತ್ತಲಿನ ಸಾವಿರಾರು ಭಕ್ತರು ಆಗಮಿಸಿದ್ದರು. ವಿಧಾನ ಪರಿಷತ್ ನಲ್ಲಿ ಮಾನ್ಯ ಶ್ರೀ ಬಾಲಕೃಷ್ಣ ಭಟ್ ವಿಧಾನ ಪರಿಷತ್ ನಲ್ಲಿ ಹೋರಾಟ ನಡೆಸಿದ್ದರು.

ಪೂಜ್ಯ ಧರ್ಮಾಧಿಕಾರಿಗಳು ಆಗಮಿಸಿ ಮಮ್ಮಲ ಮರುಗಿದರು, ಪೇಜಾವರ ಶ್ರೀಗಳು ಆಗಮಿಸಿ ಮತ್ಸ್ಯಗಳ ಮರು ಹುಟ್ಟಿಗೆ ಬಂದು ಕಪಿಲೆಯಲ್ಲಿ ಪ್ರಾರ್ಥನೆ ಸಲ್ಲಿಸಿದರು. ದುರುಳರ ಬಂದನಕ್ಕಾಗಿ ದೊಡ್ದ ಹೋರಾಟ ಮಾಡಲಾಗಿತ್ತು.
ಬೆಳ್ತಂಗಡಿ ತಾಲೂಕು ಕಚೇರಿ ಮುಂದೆ ತೀವ್ರ ಹೋರಾಟ ಮಾಡಿದ್ದೆವು.ಸುಮಾರು 15 ದಿನ ಮಡಿದ ಮತ್ಸ್ಯಗಳನ್ನು ನೀರಿನಿಂದ ತೆಗೆದು ಸುಮಾರು ಒಂದು ಸಾವಿರ ಮಂದಿ ಶ್ರಮದಾನದ ಮಾಲಕ ಮಣ್ಣಲ್ಲಿ ಮಣ್ಣು ಮಾಡಿದ್ದೆವು. ಮಡಿದ ಮುದ್ದು ಮತ್ಸ್ಯಗಳಿಗೆ “ಮತ್ಸ್ಯ ಸ್ಮಾರಕ” ಮಾಡಿ ಈಗಲೂ ಪೂಜಿಸುತ್ತಿದ್ದೆವೆ.
ಇಂದು ಮಡಿದ ಮತ್ಸ್ಯಗಳಿಗಾಗಿ‌ ಪ್ರಾರ್ಥನೆ ಮಾಡುತ್ತಿದ್ದೆವೆ. ಅವುಗಳಿಗೆ ಶಿಶಿಲ ಸ್ವಾಮಿ ಸದ್ಗತಿ ಕರುಣಿಸಲಿ…ಎಂದು ಪ್ರಾರ್ಥನೆ…( ನನ್ನ‌ ಸಂಗ್ರಹದಿಂದ ಮಾಹಿತಿ)

https://www.facebook.com/jayarama.nellithaya/posts/2002775233195926

- Advertisement -
spot_img

Latest News

error: Content is protected !!