Thursday, June 4, 2026
Homeತಾಜಾ ಸುದ್ದಿಅರೆಬೆತ್ತಲೆಯಾಗಿ ಆನ್ ಲೈನ್ ಕ್ಲಾಸ್ ಗೆ ಹಾಜರಾದ ಲೆಕ್ಚರರ್: ಲೈಂಗಿಕ ಕಿರುಕುಳದ ಆರೋಪದಡಿ ಉಪನ್ಯಾಸಕ ಅರೆಸ್ಟ್

ಅರೆಬೆತ್ತಲೆಯಾಗಿ ಆನ್ ಲೈನ್ ಕ್ಲಾಸ್ ಗೆ ಹಾಜರಾದ ಲೆಕ್ಚರರ್: ಲೈಂಗಿಕ ಕಿರುಕುಳದ ಆರೋಪದಡಿ ಉಪನ್ಯಾಸಕ ಅರೆಸ್ಟ್

- Advertisement -
- Advertisement -

ಚೆನ್ನೈ: ಶಿಕ್ಷಕನೊಬ್ಬ ಟವೆಲ್​ ಧರಿಸಿ ಅರೆಬೆತ್ತಲೆಯಾಗಿ ಆನ್​ಲೈನ್​ ಕ್ಲಾಸ್​ಗೆ ಹಾಜರಾಗಿರುವ ಘಟನೆ ತಮಿಳುನಾಡಿನಲ್ಲಿ ನಡೆದಿದೆ. ಅಲ್ಲದೇ ಆತ ವಿದ್ಯಾರ್ಥಿನಿಯರಿಗೆ ಲೈಂಗಿಕ ಕಿರುಕುಳ ನೀಡಿರುವ ಆರೋಪ ಶಿಕ್ಷಕನ ವಿರುದ್ಧ ಆರೋಪ ಕೇಳಿ ಬಂದಿದ್ದು ಇದೀಗ ಆತನನ್ನು ಬಂಧಿಸಲಾಗಿದೆ.

ರಾಜಗೋಪಾಲನ್​ ಆರೋಪಿ ಶಿಕ್ಷಕ. ಅಕೌಂಟೆನ್ಸಿ ಮತ್ತು ಬಿಸಿನೆಸ್​ ಸ್ಟಡಿ ಕ್ಲಾಸ್​ ತೆಗೆದುಕೊಳ್ಳುವ ಈತ ವಿದ್ಯಾರ್ಥಿಗಳ ಮುಂದೆ ಕೆಟ್ಟದಾಗಿ ನಡೆದುಕೊಳ್ಳುತ್ತಾರೆಂದು ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್​ ಮಾಡಲಾಗಿದೆ. ಅಲ್ಲದೆ, ಶಾಲಾ ಸಿಬ್ಬಂದಿ ಜಾತಿ ಪಕ್ಷಪಾತ ಧೋರಣೆ ಹೊಂದಿದ್ದಾರೆಂಬ ಗಂಭೀರ ಆರೋಪ ಸಹ ಮಾಡಿದ್ದಾರೆ.

ಅಶೋಕ್ ನಗರ ಮಹಿಳಾ ಪೊಲೀಸರು ಶಿಕ್ಷಕ ಜಿ. ರಾಜಗೋಪಾಲನ್ ಅವರನ್ನು ಬಂಧಿಸಿದ್ದಾರೆ. ಶಿಕ್ಷಕನನ್ನು ಮ್ಯಾಜಿಸ್ಟ್ರೇಟ್ ಎದುರು ಹಾಜರುಪಡಿಸಲಾಗಿದ್ದು, ಶಿಕ್ಷಕನನ್ನು ನ್ಯಾಯಾಂಗ ಬಂಧನದಲ್ಲಿಡಲಾಗಿದೆ.

ಶಾಲೆಯ ಹಳೆಯ ವಿದ್ಯಾರ್ಥಿಯಾದ ಕೃಪಾಲಿ ಅವರು ಶಿಕ್ಷಕರಿಂದ ಕಿರುಕುಳಕ್ಕೊಳಗಾದ ಅನೇಕ ವಿದ್ಯಾರ್ಥಿಗಳ ಸ್ಕ್ರೀನ್‌ಶಾಟ್‌ಗಳನ್ನು ಒಟ್ಟುಗೂಡಿಸಿ ಹಂಚಿಕೊಂಡ ನಂತರ ಈ ಘಟನೆ ಬೆಳಕಿಗೆ ಬಂದಿದೆ.

ಪಿಎಸ್‌ಬಿಬಿ ಶಾಲೆಯ ಆಡಳಿತ ಮಂಡಳಿ ಸೋಮವಾರ ಮಧ್ಯಾಹ್ನ ಕೆಕೆ ನಗರ ಶಾಖೆಯ 12 ನೇ ತರಗತಿ ವಾಣಿಜ್ಯ ಹಾಗೂ ಅಕೌಂಟನ್ಸಿ ಶಿಕ್ಷಕ ಜಿ. ರಾಜಗೋಪಾಲನ್ ಅವರನ್ನು ಅಮಾನತುಗೊಳಿಸಿದೆ. ಹಲವಾರು ವಿದ್ಯಾರ್ಥಿಗಳು ಹಾಗೂ ಹಳೆಯ ವಿದ್ಯಾರ್ಥಿಗಳು ರಾಜಗೋಪಾಲ್ ತಮಗೆ ಲೈಂಗಿಕ ಕಿರುಕುಳ ನೀಡಿದ್ದಾರೆ ಎಂದು ಆರೋಪಿಸಿದ ನಂತರ ಅಮಾನತುಗೊಳಿಸಲಾಗಿದೆ .

- Advertisement -

Latest News

error: Content is protected !!