ಕಠ್ಮಂಡು: ನೇಪಾಳ ವಿಜ್ಞಾನಕ್ಕೆ ನೀಡಿದ ಕೊಡುಗೆಯನ್ನು ಕಡೆಗಣಿಸಲಾಗಿದೆ. ಹಾಗೆಯೇ ಭಾರತ ಸಾಂಸ್ಕೃತಿಕ ಆಕ್ರಮಣ ಮತ್ತು ದಬ್ಬಾಳಿಕೆ ನಡೆಸಿದೆ ಎಂದು ನೇಪಾಳ ಪ್ರಧಾನ ಮಂತ್ರಿ ಕೆ.ಪಿ. ಶರ್ಮ ಒಲಿ ಗಂಭೀರ ಆರೋಪ ಮಾಡಿದ್ದಾರೆ.
ತಮ್ಮ ನಿವಾಸದಲ್ಲಿ ನಡೆದ ಸಾಂಸ್ಕೃತಿಕ ಕಾರ್ಯಕ್ರಮವೊಂದರಲ್ಲಿ ಮಾತನಾಡಿದ ಒಲಿ, ಶ್ರೀ ರಾಮ ಜನಿಸಿದ ಅಯೋಧ್ಯೆ ಇರುವುದು ಕಠ್ಮಂಡು ಸಮೀಪದ ಗ್ರಾಮದಲ್ಲಿ ಮತ್ತು ಶ್ರೀ ರಾಮ ಭಾರತೀಯನಲ್ಲ, ಬದಲಾಗಿ ನೇಪಾಳಿ ಎಂದು ಮತ್ತೊಂದು ಬಾಂಬ್ ಸಿಡಿಸಿದ್ದಾರೆ.
ಭಾರತ ನಕಲಿ ಆಯೋಧ್ಯೆ ಸೃಷ್ಟಿಸಿದೆ. ನಿಜವಾದ ಆಯೋಧ್ಯೆ ಇರುವುದು ರಾಜಧಾನಿ ಕಠ್ಮಂಡುವಿನಿಂದ 135 ಕಿ.ಮೀ ದೂರದಲ್ಲಿರುವ ಬಿರ್ ಗುಂಜ್ ನ ಜಿಲ್ಲೆಯ ಪಶ್ಚಿಮ ಭಾಗದಲ್ಲಿರುವ ಥೋರಿ ನಗರದಲ್ಲಿ ಎನ್ನುವುದು ಒಲಿಯವರ ವಾದ.
ಇನ್ನು ಈ ಹಿಂದೆಯೂ ಕೂಡ ಗಡಿ ವಿಚಾರವಾಗಿ ತಗಾದೆ ತೆಗೆದಿದ್ದ ಕೆಪಿ ಶರ್ಮಾ ಒಲಿ, ಭಾರತ ಭೂ ಪ್ರದೇಶವನ್ನು ತಮ್ಮದೆಂದು ಹೇಳಿದ್ದರು. ಅಲ್ಲದೆ ಭಾರತ ಭೂಪ್ರದೇಶವನ್ನು ನೇಪಾಳದ್ದು ಎಂದು ಹೇಳುವ ನಕ್ಷೆಯನ್ನೂ ಕೂಡ ನೇಪಾಳದ ಸಂಸತ್ ನಲ್ಲಿ ಮಂಡಿಸಿ ಅನುಮೋದನೆ ಕೂಡ ಪಡೆದಿದ್ದರು.


