Friday, June 5, 2026
Homeತಾಜಾ ಸುದ್ದಿಮಾತಿಗೆ ತಪ್ಪಿದರಾ ಕುಮಾರಸ್ವಾಮಿ? ಮಾಜಿ ಸಿ ಎಂ ದೇವರಿಗೆ ತಪ್ಪು ಕಾಣಿಕೆ ಸಲ್ಲಿಸಿ ಕ್ಷಮೆ ಕೋರಿದ್ದೇಕೆ?

ಮಾತಿಗೆ ತಪ್ಪಿದರಾ ಕುಮಾರಸ್ವಾಮಿ? ಮಾಜಿ ಸಿ ಎಂ ದೇವರಿಗೆ ತಪ್ಪು ಕಾಣಿಕೆ ಸಲ್ಲಿಸಿ ಕ್ಷಮೆ ಕೋರಿದ್ದೇಕೆ?

- Advertisement -
- Advertisement -

ರಾಮನಗರ: ಇಲ್ಲಿನ ಜಾಲಮಂಗಲದ ಲಕ್ಷ್ಮೀ ನಾರಾಯಣಸ್ವಾಮಿ ದೇವಾಲಯಕ್ಕೆ ಭೇಟಿನೀಡಿದ ಮಾಜಿ ಸಿಎಂ ಎಚ್.ಡಿ. ಕುಮಾರಸ್ವಾಮಿ ದೇವರಿಗೆ 101 ರೂಪಾಯಿಗಳ ತಪ್ಪು ಕಾಣಿಕೆ ಸಲ್ಲಿಸಿ ಕುಟುಂಬ ಸಮೇತವಾಗಿ ಪೂಜೆ ಸಲ್ಲಿಸಿದ್ದಾರೆ.

ಈ ತಪ್ಪು ಕಾಣಿಕೆ ಸಲ್ಲಿಸಿದ್ದು ಈ ಹಿಂದೆ ಅವರು ದೇವರಿಗೆ ಕೊಟ್ಟ ಮಾತು ತಪ್ಪಿದ್ದಕ್ಕಾಗಿ.2004ರ ಚುನಾವಣೆ ವೇಳೆ ದೇವರ ಮುಂದೆ ತಮಗೆ ಯಾವುದೇ ಅಧಿಕಾರ ಬೇಡ ಎಂದು ಹೇಳಿದ್ದ ಅವರು ಮತ್ತೆ ಕಾಂಗ್ರೆಸ್‌ ಜೊತೆಗೆ ಕೈ ಜೋಡಿಸಿ ಸಮ್ಮಿಶ್ರ ಸರ್ಕಾರದಲ್ಲಿ ಸಿಎಂ ಆಗಿ ಅಧಿಕಾರ ನಡೆಸಿದರು. ಹೀಫ್ಗಾಗಿ ಸಿಎಂ ಸ್ಥಾನವನ್ನು ಕಳೆದುಕೊಂಡರು.ಎಂದು ಅವರು ನಂಬಿದ್ದು ಆ ಕಾರಣಕ್ಕೆ ದೇವರಿಗೆ 101 ರೂಪಾಯಿಗಳ ತಪ್ಪು ಕಾಣಿಕೆ ಸಲ್ಲಿಸಿ ಕ್ಷಮೆಯಾಚಿಸಿದ್ದಾರೆ ಎನ್ನಲಾಗಿದೆ.

- Advertisement -

Latest News

error: Content is protected !!